For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಗರ್ಲ್ ರಮ್ಯಾ ಮುಂಗಡ ಹಣ ವಾಪಸ್

  By ಉದಯರವಿ
  |

  ಮಂಡ್ಯ ಲೋಕಸಭೆ ಕ್ಷೇತ್ರದ ಹಾಲಿ ಸಂಸದೆ ರಮ್ಯಾ ಅವರ ಮುಂದಿನ ಚಿತ್ರಗಳ ಪರಿಸ್ಥಿತಿ ಏನು ಎಂಬ ಬಗ್ಗೆ ಇದೀಗ ಉತ್ತರ ಸಿಕ್ಕಿದೆ. ಅವರು ಸಂಸದೆಯಾದ ಬಳಿಕ ಚಿತ್ರಗಳಲ್ಲಿ ಅಭಿನಯಿಸುತ್ತಾರೋ ಇಲ್ಲವೋ ಎಂಬ ಅನುಮಾನಗಳು ಇದ್ದವು. ಈಗ ಅವೆಲ್ಲಕ್ಕೂ ಅಂತ್ಯ ಹಾಡುವ ಸಮಯ ಬಂದಿದೆ.

  ಈ ಹಿಂದೆ ಸ್ವತಃ ರಮ್ಯಾ ಟ್ವಿಟಿಸಿ ಇನ್ನು ಮುಂದೆ ತಾನು ಚಿತ್ರಗಳಲ್ಲಿ ಅಭಿನಯಿಸುವುದು ಕಷ್ಟವಾಗುತ್ತದೆ. ತಮ್ಮ ಸಂಪೂರ್ಣ ಸಮಯ ಸಮಾಜಸೇವೆಗೆ ಮೀಸಲು ಎಂದಿದ್ದರು. ಈಗ ಅವರು ನಿರ್ಮಾಪಕರ ಬಳಿ ತೆಗೆದುಕೊಂಡಿದ್ದ ಮುಂಗಡ ಹಣವನ್ನು ವಾಪಸು ಮಾಡಿದ್ದಾರೆ ಎನ್ನುತ್ತವೆ ಮೂಲಗಳು.

  ಎಂಎನ್ ಕುಮಾರ್ ಹಾಗೂ ಎಸ್ ವಿ ಬಾಬು ಅವರ ಬಳಿ ತೆಗೆದುಕೊಂಡಿದ್ದ ಮುಂಗಡ ಹಣವನ್ನು ರಮ್ಯಾ ವಾಪಸು ಮಾಡಿದ್ದಾರಂತೆ. ತೆಲುಗಿನ ಹಿಟ್ ಚಿತ್ರ 'ಮಿರ್ಚಿ' ರೀಮೇಕ್ ಗಾಗಿ ಎಂಎನ್ ಕುಮಾರ್ ಬಳಿ ರಮ್ಯಾ ಅಡ್ವಾನ್ಸ್ ಪಡೆದಿದ್ದರು. ಹಾಗೆಯೇ ಎಸ್ ವಿ ಬಾಬು ನಿರ್ಮಿಸುತ್ತಿರುವ 'ಎಂದೆದಿಗೂ' ಚಿತ್ರಕ್ಕೂ ಮುಂಗಡ ಹಣ ಪಡೆದಿದ್ದರು.

  ಈ ಚಿತ್ರಗಳು ಇನ್ನೂ ಸೆಟ್ಟೇರಿರಲಿಲ್ಲ. ಹಾಗಾಗಿ ಹಣವನ್ನು ವಾಪಸ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಒಂದಷ್ಟು ಭಾಗದ ಚಿತ್ರೀಕರಣ ಮುಗಿಸಿರುವ ಚಿತ್ರಗಳನ್ನು ಮುಗಿಸಿಕೊಡುವುದಾಗಿಯೂ ರಮ್ಯಾ ನಿರ್ಮಾಪಕರಿಗೆ ಭರವಸೆ ನೀಡಿದ್ದಾರೆ. ಅಲ್ಲಿಗೆ ಅವರೂ ನಿರಾಳರಾಗಿದ್ದಾರೆ.

  ಹ್ಯಾಟ್ರಿಕ್ ಹೀರೋ ಜೊತೆಗಿನ ಆರ್ಯನ್, ಜಗ್ಗೇಶ್ ಜೊತೆಗಿನ ನೀರ್ ದೋಸೆ ಹಾಗೂ ಪ್ರಜ್ವಲ್ ದೇವರಾಜ್ ಜೊತೆಗಿನ ದಿಲ್ ಕಾ ರಾಜಾ ಚಿತ್ರಗಳನ್ನು ಅವರು ಆದಷ್ಟು ಬೇಗ ಮುಗಿಸಿಕೊಟ್ಟು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.

  English summary
  It is said that New Lok Sabha MP and Kannada star Ramya has returned back advances to producers M N Kumar and S V Babu. M N Kumar producing a remake of Telugu hit 'Mirchi', Babu's film was titled as 'Endendingu'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X