For Quick Alerts
  ALLOW NOTIFICATIONS  
  For Daily Alerts

  ''ಇದು ನಾನು ಪ್ರೀತಿಸುವ ಸಮಯ'' ಅಚ್ಚರಿ ಮೂಡಿಸಿದ ರಶ್ಮಿಕಾ ಟ್ವೀಟ್

  |
  ಇದು ನಾನು ಪ್ರೀತಿಸುವ ಸಮಯ'' ಅಚ್ಚರಿ ಮೂಡಿಸಿದ ರಶ್ಮಿಕಾ ಟ್ವೀಟ್ | FILMIBEAT KANNADA

  'ಕಿರಿಕ್ ಪಾರ್ಟಿ' ಸಾನ್ವಿಯಾಗಿ ಕನ್ನಡಿಗರ ಮನ ಗೆದ್ದ ರಶ್ಮಿಕಾ ಮಂದಣ್ಣ ಈಗ ತೆಲುಗು ಚಿತ್ರ ಪ್ರಿಯರ ಹಾಟ್ ಫೇವರಿಟ್ ನಟಿ. 'ಗೀತಾ ಗೋವಿಂದಂ' ಚಿತ್ರದ ನಂತರ ನಟ ವಿಜಯ್ ದೇವರಕೊಂಡ ಜೊತೆ ಎರಡನೇ ಬಾರಿ 'ಡಿಯರ್ ಕಾಮ್ರೇಡ್' ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಿರುವ ರಶ್ಮಿಕಾ ತಮಿಳು ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದಾರೆ.

  ಸದ್ಯ 'ಡಿಯರ್ ಕಾಮ್ರೇಡ್' ಚಿತ್ರದ ಟೀಸರ್ ರಿಲೀಸ್ ಆಗಿದ್ದು ರಶ್ಮಿಕಾ ಮತ್ತು ವಿಜಯ್ ಲಿಪ್ ಲಾಕ್ ಸೀನ್ ಅಭಿಮಾನಿಗಳ ನಿದ್ದೆ ಗೆಡಿಸಿದೆ. ಈ ದೃಶ್ಯ ನೋಡಿದ ಚಿತ್ರಪ್ರಿಯರು ಜಾಲತಾಣದಲ್ಲಿ ರಶ್ಮಿಕಾ ಅವರನ್ನು ಕಾಲೆಯುತ್ತಿದ್ದಾರೆ. ಇದರ ಬಳಿಕ ರಶ್ಮಿಕಾ ಅಭಿಮಾನಿಗಳಿಗೆ ಪ್ರೀತಿಯ ಪಾಠ ಹೇಳುವ ಮೂಲಕ ರಶ್ಮಿಕಾ ಅಚ್ಚರಿ ಮೂಡಿಸಿದ್ದಾರೆ.

  ಮತ್ತೆ ಲಿಪ್ ಲಾಕ್: ಸಂಚಲನ ಸೃಷ್ಟಿಸಿದ ರಶ್ಮಿಕಾ-ವಿಜಯ್ 'ಡಿಯರ್ ಕಾಮ್ರೇಡ್'

  ''ಇದು ನಾನು ಪ್ರೀತಿಸುವ ಸಮಯ. ನಿಜವಾದ ಪ್ರೀತಿಯನ್ನು ಪರೀಕ್ಷಿಸುವುದು ಇಲ್ಲಿ. ಮತ್ತು ಈ ಬಾರಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುವವರು ಹಾಗೂ ನಿಮ್ಮ ಬಗ್ಗೆ ಕಾಳಜಿ ವಹಿಸುವವರು ಯಾರೆಂಬುದುನ್ನು ತಿಳಿದುಕೊಳ್ಳುವ ಸಮಯವಿದು. ಅವರು ಈ ಜಗತ್ತಿನಲ್ಲಿ ನಿಜವಾಗಿಯೂ ನಿಮ್ಮ ಎಲ್ಲಾ ಪ್ರೀತಿ ಮತ್ತು ಆರೈಕೆಗೆ ಅರ್ಹರು. ಹಾಗೆಯೇ ಯಾರು ನಿಮ್ಮನ್ನು ಪ್ರೀತಿಸುವುದಿಲ್ಲವೂ ಇರಲಿ ಬಿಡಿ. ಅವರಿಗೂ ಒಳ್ಳೆಯದಾಗಲಿ ಎಂದು ಹರಿಸಿ ಬಿಡಿ'' ಎಂದು ಟ್ವಿಟ್ಟರ್ ನಲ್ಲಿ ರಶ್ಮಿಕಾ ಬರೆದುಕೊಂಡಿದ್ದಾರೆ.

  ಟ್ಟಿಟ್ಟರ್ ನಲ್ಲಿ ರಶ್ಮಿಕಾ ಪ್ರೀತಿ ಬಗ್ಗೆ ಹೇಳುತ್ತಿದಂತೆ ಅಭಿಮಾನಿಗಳು ಕಮೆಂಟ್ ಗಳ ಸುರಿಮಳೆಯೆ ಹರಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ವಿಜಯ್ ದೇವರಕೊಂಡ ಅವರನ್ನು ಎಳೆದುತರುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ರಶ್ಮಿಕಾ ತಲೆಕೆಡಿಸಿಕೊಂಡಿಲ್ಲ.

  ಅಂತೆ ಕಂತೆ ನಿಜವಾಯ್ತು: ಕಾರ್ತಿ ಜೊತೆ ರಶ್ಮಿಕಾ ಸಿನಿಮಾ ಶುರುವಾಯ್ತು

  ದಿಢೀರನೆ ನಿಜವಾದ ಪ್ರೀತಿ ಬಗ್ಗೆ ರಶ್ಮಿಕಾ ಹೀಗೆ ಟ್ವೀಟ್ ಮಾಡಲು ಕಾರಣವೇನು? ಅಂತ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇದು ಯಾರ ಬಗ್ಗೆ ಏನು ಹೇಳಿದ್ದು ಎನ್ನುವದನ್ನು ಅವರೇ ವಿವರಿಸಬೇಕು.

  English summary
  Kannada actress, 'Kirik Party' fame Rashmika Mandanna tweet about true love.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X