»   » ಅನನ್ಯ ಟೀಚರ್ ಪಾಠ ಕೇಳಿದ್ರೆ, 'ಅಲಮೇಲಮ್ಮ'ನ ಆಪರೇಷನ್ ನೋಡಬಹುದು

ಅನನ್ಯ ಟೀಚರ್ ಪಾಠ ಕೇಳಿದ್ರೆ, 'ಅಲಮೇಲಮ್ಮ'ನ ಆಪರೇಷನ್ ನೋಡಬಹುದು

Posted By:
Subscribe to Filmibeat Kannada

ಶ್ರದ್ಧಾ ಶ್ರಿನಾಥ್ ಅಭಿನಯದ 'ಆಪರೇಷನ್ ಅಲಮೇಲಮ್ಮ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಸಿಂಪಲ್ ಸುನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶ್ರದ್ಧಾ ಶ್ರೀನಾಥ್ ಜೊತೆಯಲ್ಲಿ ರಿಷಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಜೇಶ್ ನಟರಾಜ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜುಡಾ ಸ್ಯಾಂಡಿ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.

ಇತ್ತೀಚೆಗಷ್ಟೇ ಸೆನ್ಸಾರ್ ಮುಗಿಸಿದ ಈ ಚಿತ್ರಕ್ಕೆ 'ಯು' ಸರ್ಟಿಫಿಕೇಟ್ ಸಿಕ್ಕಿದ್ದು, ಇದೇ ಜುಲೈ 21 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ನೀವು ಜುಲೈ 21 ರಂದು 'ಆಪರೇಷನ್ ಅಲಮೇಲಮ್ಮ' ಚಿತ್ರವನ್ನ ನೋಡಬೇಕು ಎಂದುಕೊಂಡಿದ್ದೀರಾ...ಆದ್ರೆ, ಬ್ಯುಸಿ ಕೆಲಸದ ಮಧ್ಯೆ ಡೇಟ್ ಮರೆತುಹೋಗ್ತಿವಿ ಎಂಬ ಆತಂಕ ಕಾಡುತ್ತಿದಿಯಾ?

ಯೋಚನೆ ಮಾಡ್ಬೇಡಿ, ಅದಕ್ಕಾಗಿಯೇ ನಟಿ ಶ್ರದ್ಧಾ ಶ್ರೀನಾಥ್ ಕೆಲವು ಟಿಪ್ಸ್ ಕೊಟ್ಟಿದ್ದಾರೆ. ಉಪಯೋಗವಾದರೇ ಬಳಸಿಕೊಳ್ಳಿ. ಏನದು ಶ್ರದ್ಧಾ ಕೊಟ್ಟಿರುವ ಸಲಹೆ? ಮುಂದೆ ಓದಿ.....

ಸಲಹೆ 1 - ದಿನಾಂಕ ಗುರುತಿಸಿ

ನಿಮ್ಮ ಹತ್ತಿರದಲ್ಲಿರುವ ಕ್ಯಾಲೆಂಡರ್ ತಗೆದುಕೊಂಡು, ಅದರಲ್ಲಿ ಜುಲೈ ತಿಂಗಳ 21 ನೇ ತಾರೀಖಿಗೆ ಕೆಂಪು ಬಣ್ಣದ ಮಾರ್ಕರ್ ನಿಂದ ದೊಡ್ಡ ವೃತ್ತವನ್ನ ಹಾಕಿ ನೆನಪಿನಲ್ಲಿಟ್ಟುಕೊಳ್ಳಿ.

ಸೆನ್ಸಾರ್ ಮಂಡಳಿಯಿಂದ ಪಾಸ್ ಆದ 'ಆಪರೇಷನ್ ಅಲಮೇಲಮ್ಮ'

ಸಲಹೆ 2- Reminder ಇಟ್ಕೊಳ್ಳಿ

ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿ ಜುಲೈ 21 ನೇ ತಾರೀಖಿಗೆ Reminder Set ಮಾಡಿಕೊಳ್ಳಿ. ನಂತರ ಆ ದಿನ ಆನ್ ಲೈನ್ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿ.

ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ರವರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು.!

ಸಲಹೆ 3 - ನೆನಪಿಸಲು ಅಮ್ಮನಿಗೆ ಹೇಳಿ

ನಿಮಗೆ ತಂತ್ರಜ್ಞಾನದ ಮೇಲೆ ನಂಬಿಕೆ ಇಲ್ಲ ಅಂದ್ರೆ, ನಿಮ್ಮ ಅಮ್ಮನಿಗೆ ನೆನಪಿಸಲು ಹೇಳಿ, ಅಮ್ಮಂದಿರು ಎಂದು ಮರೆಯುವುದಿಲ್ಲ.

'ಆಪರೇಷನ್ ಅಲಮೇಲಮ್ಮ'ನಿಗೆ ಜೈಕಾರ ಹಾಕಿದ ಗಣೇಶ್, ರಕ್ಷಿತ್

ಸಲಹೆ 4 - ರಜೆ ಪತ್ರ ಬರೆದುಕೊಡಿ

ಜುಲೈ 21 ರಂದು ಆಫೀಸ್ ಗೆ ರಜೆ ಹಾಕಲು, ನಿಮ್ಮ ಬಾಸ್ ಗೆ ರಜೆ ಪತ್ರ ಕೊಟ್ಟುಬಿಡಿ. ಸಿನಿಮಾ ನೋಡಲು ಕಂಪನಿಗೆ, ನಿಮ್ಮ ಬಾಸ್ ನೂ ಕರೆದುಕೊಂಡು ಬನ್ನಿ.

ಸಲಹೆ 5 - ಸ್ಟೂಡೆಂಟ್ಸ್ ಹೀಗೆ ಮಾಡಬಹುದು

ಅನನ್ಯ ಟೀಚರ್ ಚಿತ್ರದಲ್ಲಿ ಏನು ಮಾಡ್ತಾರೋ (ರಜೆ ಹಾಕಿ ಸಿನಿಮಾ ನೋಡ್ತಾರೆ) ಹಾಗೆ, ವಿದ್ಯಾರ್ಥಿಗಳು ಕ್ಲಾಸ್ ನ ಬಂಕ್ ಮಾಡಿ, ಸಿನಿಮಾ ನೋಡಿ. ದಿನಾಂಕ ನೆನಪಿನಲ್ಲಿಟ್ಟುಕೊಳ್ಳಿ. ಜುಲೈ 21.

ಸಲಹೆ 6 - ಎಲ್ಲರಿಗೂ ವಿಷ್ಯ ತಿಳಿಸಿ

ಜುಲೈ 21 ರಂದು 'ಆಪರೇಷನ್ ಅಲಮೇಲಮ್'ಮ ರಿಲೀಸ್ ಆಗುತ್ತಿದೆ. ಈ ವಿಷ್ಯವನ್ನ ಎಲ್ಲರಿಗೂ ತಲುಪಿಸಿ ನಮಗೆ ಸಹಾಯ ಮಾಡಿ.

ಸುನಿಯ 'ಅಪರೇಷನ್ ಅಲಮೇಲಮ್ಮ'ನ ಬಗ್ಗೆ ಸೆಲೆಬ್ರಿಟಿಗಳು ಉಘೇ ಉಘೇ

English summary
Kannada Actress Shraddha Srinath Gives Some Tips For His Fans to Watch Opparation Alamelamma Movie On July 21st. The Movie Directed By Simple Suni

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada