For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರುತಿ ಸುದ್ದಿಗೋಷ್ಠಿ, ಆಸ್ಪತ್ರೆಯಿಂದ ನೇರ ವರದಿ

  By Rajendra
  |
  <ul id="pagination-digg"><li class="next"><a href="/news/actress-shruti-to-undergo-surgery-075723.html">Next »</a></li></ul>
  ಕನ್ನಡ ಚಿತ್ರಗಳ ಮೇರು ನಟಿ ಶ್ರುತಿ ಬಗ್ಗೆ ಮಿಡಿದ ಅಪಶ್ರುತಿಗಳಿಗೆ ಬ್ರೇಕ್ ಹಾಕಿದ್ದಾರೆ. ವಿಷಾಹಾರ ಸೇವನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಶುಕ್ರವಾರ (ಜು.12) ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಅವರು ಆಸ್ಪತ್ರೆಯಿಂದ ಬಿಡುಗಡೆಯಾದರು. ಡಿಸ್ಚಾರ್ಜ್ ಬಳಿಕ ಅವರು ನಡೆಸಿದ ಸುದ್ದಿಗೋಷ್ಠಿ ವಿವರಗಳು ಇಲ್ಲಿವೆ.

  ಬಸವೇಶ್ವರನಗರದ ಪುಣ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಶ್ರುತಿ ಮಾಧ್ಯಮಗಳೊಂದಿಗೆ ಮಾತನಾಡಿದರು, ಓವರು ಟು ಶ್ರುತಿ, "ನಿನ್ನೆ ರಾತ್ರಿಯಿಂದ ಎಲ್ಲರನ್ನೂ ಕಾಯಿಸಿದ್ದಕ್ಕೆ ಮೊದಲು ನಾನು ಕ್ಷಮೆ ಕೇಳುತ್ತೇನೆ. ರಾತ್ರಿ 8 ಗಂಟೆ ಹೊತ್ತಿಗಾದರೂ ನಿಮ್ಮೊಂದಿಗೆ ಮಾತನಾಡೋಣ ಎಂದುಕೊಂಡಿದ್ದೆ. ಆದರೆ ತುಂಬಾ ಆಯಾಸವಾಗಿತ್ತು ಸಾಧ್ಯವಾಗಲಿಲ್ಲ.

  ಇನ್ನು ಆ ಸಮಯದಲ್ಲಿ ಬೈಟ್ಸ್ ಕೊಟ್ಟರೆ ಇನ್ನೇನು ಅಂದುಕೊಳ್ಳುತ್ತಾರೆ ಎಂಬ ಅನುಮಾನವೂ ಕಾಡಿತು. ಹಾಗಾಗಿ ನಿನ್ನೆ ರಾತ್ರಿ ಬೈಟ್ಸ್ ಕೊಡಲು ಸಾಧ್ಯವಾಗಲಿಲ್ಲ. ಮಾಧ್ಯಮಗಳು ನನ್ನನ್ನು ಬೆಂಬಲಿಸಿದ ರೀತಿಗೆ ನನಗೆ ತುಂಬಾ ಹೆಮ್ಮೆ ಆಗಿತ್ತು. ಊಹಾಪೋಹಗಳಿಗೆ ಕಡಿವಾಣ ಹಾಕಿ ನಿಜವಾದ ವಿವರಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದೀರಿ...

  ಇದಕ್ಕಾಗಿ ನಾನು ಮಾಧ್ಯಮಗಳಿಗೆ ತುಂಬಾ ಕೃತಜ್ಞಳಾಗಿದ್ದೇನೆ. ಶ್ರುತಿ ಅವರನ್ನು ಮಾಧ್ಯಮಗಳು ಹಾಗೂ ಅಭಿಮಾನಿಗಳೂ ಕಳೆದ 23 ವರ್ಷಗಳಿಂದ ನೋಡುತ್ತಿದ್ದಾರೆ. ನಾನು ಇಂಡಸ್ಟ್ರಿಗೆ ಬಂದಾಗ 13 ವರ್ಷದ ಹುಡುಗಿ. ಸಾಮಾನ್ಯವಾಗಿ ಎಲ್ಲ ಕಲಾವಿದರಿಗೆ ಬರುವ ಕಷ್ಟಗಳಿಗಿಂತ ಸ್ವಲ್ಪ ಹೆಚ್ಚಿನ ಕಷ್ಟಗಳು ನನಗೆ ಬಂದಿವು...

  ಆ ಎಲ್ಲಾ ಕಷ್ಟಗಳನ್ನು ನಾನು ಹೇಗೆ ನಿಭಾಯಿಸಿದ್ದೀನಿ. ಜೀವನವನ್ನು ಹೇಗೆ ತೊಡಗಿಸಿಕೊಂಡು ಹೋಗಿದ್ದೀನಿ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ನಾನು ಆತ್ಮಹತ್ಯೆಗೆ ಯತ್ನಿಸುವಂತಹ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಮಾನಸಿಕವಾಗಿ ತುಂಬ ನೊಂದುಕೊಂಡಿರುವುದು ಸತ್ಯ. ನನ್ನ ಅಭಿಮಾನಿಗಳ ಎದುರುಗಡೆ, ಸಮಾಜದ ಮುಂದೆ ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ. ನನ್ನ ಎಲ್ಲಾ ಸರಿ ತಪ್ಪುಗಳನ್ನು ಹೇಳಿಕೊಂಡು ಬಂದಿದ್ದೇನೆ.

  <ul id="pagination-digg"><li class="next"><a href="/news/actress-shruti-to-undergo-surgery-075723.html">Next »</a></li></ul>
  English summary
  Kannada films prominent actress Shruti discharged from Punya hospital, Basaveshwaranagar on 13th July Saturday. Now she is alright. she had taken ill due to food poisoning. Soon the actress to undergo a small surgery, she said in the press meet.
  Saturday, July 13, 2013, 15:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X