For Quick Alerts
  ALLOW NOTIFICATIONS  
  For Daily Alerts

  ಬೈದಿದ್ದೀನಿ, ಕೆಲಸದಿಂದ ತೆಗೆದಿದ್ದೇನೆ, ಹೊಡೆದಿಲ್ಲ: ಶ್ರುತಿ

  By Rajendra
  |
  <ul id="pagination-digg"><li class="next"><a href="/news/actress-shruti-break-the-back-of-the-beast-085313.html">Next »</a></li></ul>

  ನಟಿ ಶ್ರುತಿ ಅವರು ತಮ್ಮ ಮನೆಕೆಲಸದಾಕೆ ಶೋಭಾ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಸಂಬಂಧ ಅವರು ತಕ್ಷಣ ಪ್ರತಿಕ್ರಿಯಿಸಿದ್ದು, ತಮ್ಮ ಮೇಲಿನ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

  ತಮ್ಮ ಹಾಗೂ ಮನೆಕೆಲಸದಾಕೆ ನಡುವಿನ ಸಂಬಂಧದ ಬಗ್ಗೆ ಶ್ರುತಿ ಅವರು ಏನು ಹೇಳುತ್ತಾರೆ, ಯಾಕೆ ಈ ಆರೋಪಗಳನ್ನು ಹೊರಿಸಲಾಗಿದೆ, ಇದರ ಹಿಂದಿನ ಉದ್ದೇಶ ಏನು ಎಂಬುದನ್ನು ಅವರ ಮಾತುಗಳಲ್ಲೇ ಕೇಳೋಣ ಬನ್ನಿ. ಓವರು ಟು ಶ್ರುತಿ. [ಮೂರಕ್ಷರದ ಮದುವೆ ಬಗ್ಗೆ ಶ್ರುತಿ ನಾಲ್ಕು ಮಾತು]

  "ಆಕೆಯ ಮೇಲೆ ನಾನು ಖಂಡಿತ ಹಲ್ಲೆ ಮಾಡಿಲ್ಲ. ಆಕೆ ನನಗೆ ನಂಬಿಕೆ ದ್ರೋಹ ಮಾಡಿದ್ದು ನಿಜ. ಆಕೆ ಆ ರೀತಿ ಮಾಡಿದ್ದಾರೆ ಎಂದು ಗೊತ್ತಾದ ಕೂಡಲೆ ಮನೆಗೆ ಕರೆಸಿಕೊಂಡು ಬೈದು, ಕೆಲಸದಿಂದ ತೆಗೆದದ್ದೂ ನಿಜ. ಈ ಪ್ರಕರಣ ಆಗಿ ಎರಡು ತಿಂಗಳಾಗಿದೆ. ಕೆಲಸದಿಂದ ತೆಗೆದಿದ್ದೀನಿ, ಬೈದಿದ್ದೀನಿ. ಆಕೆ ನನಗೆ ಮಾಡಿದ ದ್ರೋಹಕ್ಕೆ ಬೇರೆಯವರಾಗಿದ್ದರೆ ಏನು ಮಾಡುತ್ತಿದ್ದರೋ ಏನೋ.

  ನನ್ನ ಜೀವನವನ್ನೇ ಹಾಳು ಮಾಡುವಂತಹ ದ್ರೋಹ ಮಾಡಿದ್ದಾಳೆ ಅವಳು. ನನ್ನ ಮನೆಯ ವಿಚಾರಗಳನ್ನು ಎತ್ತಿಕೊಂಡು ನನಗೆ ಬೇಕಾಗದೆ ಇರುವವರ ಮನೆಗೆ ಹೋಗಿ ಅವರ ಬಳಿ ದುಡ್ಡು ತೆಗೆದುಕೊಂಡು, ನನ್ನ ಮನೆಯ ಎಲ್ಲಾ ವಿಚಾರಗಳನ್ನು ಅಲ್ಲಿ ಹೇಳುತ್ತಿದ್ದಳು. [ಮನೆಕೆಲಸದಾಕೆ ಮೇಲೆ ನಟಿ ಶ್ರುತಿ ಹಲ್ಲೆ ಆರೋಪ]

  ನಾನು ಎಷ್ಟು ಹೊತ್ತಿಗೆ ಬರ್ತೀನಿ, ನಾನು ಎಷ್ಟು ಹೊತ್ತಿಗೆ ಹೋಗ್ತೀನಿ, ನಮ್ಮ ಮನೆಗೆ ಯಾರ್ಯಾರು ಬರ್ತಾರೆ, ಅಪ್ಪಅಮ್ಮ ಇರ್ತಾರಾ, ಅವರು ಎಷ್ಟೊತ್ತಿಗೆ ಇರಲ್ಲ, ಈ ರೀತಿಯ ಎಲ್ಲಾ ವಿಚಾರಗಳನ್ನೂ ಅವರ ಬಳಿ ಹೇಳುತ್ತಿದ್ದಳು. ಬೇಕು ಬೇಡದ ಎಲ್ಲಾ ವಿಚಾರಗಳನ್ನು ಅದಕ್ಕೆ ರೆಕ್ಕೆಪುಕ್ಕ ಸೇರಿಸಿ ಹೇಳುತ್ತಿದ್ದಳು.

  ನಮ್ಮ ಮನೆಯ ಎಲ್ಲಾ ವಿಚಾರಗಳನ್ನು ಮೂರನೇ ವ್ಯಕ್ತಿ ಕಿವಿಗೆ ಹಾಕುತ್ತಿದ್ದಳು. ಆ ಮೂರನೇ ವ್ಯಕ್ತಿಯಿಂದ ನನಗೆ ಕಿರುಕುಳ ಆಗ್ತಾ ಇತ್ತು. ಅಲ್ಲೇ ನನಗೆ ಗೊತ್ತಾಗಿದ್ದು, ನಮ್ಮ ಮನೆಯ ವಿಚಾರವನ್ನೆಲ್ಲಾ ಇವಳೇ ಲೀಕ್ ಮಾಡುತ್ತಿರುವುದು ಎಂದು. ಆಗ ಕರೆದು ನೋಡಿದಾಗ ಗೊತ್ತಾಯಿತು ಇವಳು ನನಗೆ ಗೊತ್ತಿಲ್ಲದಂತೆ ದ್ರೋಹ ಮಾಡುತ್ತಿದ್ದಾಳೆ ಎಂದು.

  <ul id="pagination-digg"><li class="next"><a href="/news/actress-shruti-break-the-back-of-the-beast-085313.html">Next »</a></li></ul>
  English summary
  Kannada actress Shruti has strongly reacted by denying all the allegations made by maid servent Shobha, at her Basaveshwar Nagar resident. Servant had alleged that Shruti had assaulted and threatened her. In turn, Shruti said she has been betrayed by the servant.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X