For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಗೆ 'ಲೂಸಿಯಾ' ಬೆಡಗಿ ಶ್ರುತಿ ಹರಿಹರನ್ ಗ್ರ್ಯಾಂಡ್ ಎಂಟ್ರಿ

  By Suneetha
  |

  ನಟ ನಿನಾಸಂ ಸತೀಶ್ ಅವರ ಜೊತೆ 'ಲೂಸಿಯಾ' ಸಿನಿಮಾದ ಮೂಲಕ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟ ಮಲ್ಲು ಕುಟ್ಟಿ ನಟಿ ಶ್ರುತಿ ಹರಿಹರನ್ ಅವರು ಇದೀಗ ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ.

  ಮೊದಲ ಬಾರಿಗೆ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಅವರ ನೃತ್ಯ ನಿರ್ದೇಶನದಲ್ಲಿ ಹಿನ್ನಲೆ ನೃತ್ಯಗಾತಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಶ್ರುತಿ ಹರಿಹರನ್ ಅವರು ಕನ್ನಡ, ತಮಿಳು ಮತ್ತು ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ಭದ್ರವಾಗಿ ತಳವೂರಿದರು.[33 ವರ್ಷದ ಮಹಿಳೆಯ ಪಾತ್ರದಲ್ಲಿ ಮಿಂಚಲಿರುವ ಶ್ರುತಿ ಹರಿಹರನ್..!]

  ಕೇವಲ ನಟಿ ಮಾತ್ರವಲ್ಲದೇ, ಒಬ್ಬ ಉತ್ತಮ ನೃತ್ಯಗಾತಿಯೂ ಆಗಿರುವ ನಟಿ ಶ್ರುತಿ ಹರಿಹರನ್ ಅವರು ಇದೀಗ ಕನ್ನಡ ಖಾಸಗಿ ಚಾನಲ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಡ್ಯಾನ್ಸ್ ಡ್ಯಾನ್ಸ್' ಶೋ ಕಾರ್ಯಕ್ರಮದ ನಿರ್ಣಾಯಕಿಯಾಗಿ ಕಿರುತೆರೆ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

  ಇವರ ಜೊತೆ 'ಸಜನಿ', 'ನವಗ್ರಹ' ಖ್ಯಾತಿಯ ನಟಿ ಶರ್ಮಿಳಾ ಮಾಂಡ್ರೆ ಮತ್ತು ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರು ಕಾಣಿಸಿಕೊಳ್ಳಲಿದ್ದಾರೆ. ಫೆಬ್ರವರಿ 1 ರಿಂದ ಸುವರ್ಣ ವಾಹಿನಿಯಲ್ಲಿ 'ಡ್ಯಾನ್ಸ್ ಡ್ಯಾನ್ಸ್' ರಿಯಾಲಿಟಿ ಶೋ ಆರಂಭವಾಗಲಿದೆ. ಅಕುಲ್ ಬಾಲಾಜಿ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.[ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಡ್ಯಾನ್ಸ್ ಶೋ.!]

  'ನನಗೆ ನೃತ್ಯ ಎಂದರೆ ಪ್ರಾಣ. ನಾನು ಭರತನಾಟ್ಯ ಮತ್ತು ಆಧುನಿಕ ನೃತ್ಯದಲ್ಲಿ ತರಬೇತಿ ಪಡೆದುಕೊಂಡಿದ್ದೇನೆ. ಇದನ್ನು ತಿಳಿದ ಸುವರ್ಣ ವಾಹಿನಿಯವರು ನಿರ್ಣಾಯಕಿಯಾಗಿ ನನಗೆ ಆಹ್ವಾನ ನೀಡಿದ್ದಾರೆ'. ಎಂದು ಶ್ರುತಿ ಹರಿಹರನ್ ಅವರು ಸಂಭ್ರಮದಿಂದ ನುಡಿಯುತ್ತಾರೆ.[ಮಾದನಿಗೆ ಮಾನಸಿಯಾಗಿ 'ರಾಟೆ' ರಾಣಿ ಶ್ರುತಿ ಹರಿಹರನ್]

  ಸದ್ಯಕ್ಕೆ ನಟಿ ಶ್ರುತಿ ಹರಿಹರನ್ ಅವರು ಕನ್ನಡದಲ್ಲಿ ನಿರ್ದೇಶಕ ಹರ್ಷ ಅವರ 'ಜೈ ಮಾರುತಿ 800' ಮತ್ತು ನಟ ಪ್ರಜ್ವಲ್ ದೇವರಾಜ್ ಅವರ ಜೊತೆ 'ಮಾದ ಮತ್ತು ಮಾನಸಿ'ಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಮೂರು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಕನ್ನಡದ 'ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು' ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

  English summary
  Sruthi Hariharan who started as a background dancer with choreographer Imran Sardariya has proved her mettle as an actor in Kannada, Tamil and Malayalam films. And, she is now all set to come on the small screen and will be seen as a celebrity judge in a dance reality show called Dance Dance in Kannada. The show will be hosted by popular anchor Akul Balaji and is likely to be aired from February first week on Suvarna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X