»   » ಜೀ ಕನ್ನಡದ 'ವಾರಸ್ದಾರ' ಧಾರಾವಾಹಿಯಿಂದ ನಟಿ ಯಜ್ಞಾ ಶೆಟ್ಟಿ ಹೊರನಡೆದದ್ಯಾಕೆ.?

ಜೀ ಕನ್ನಡದ 'ವಾರಸ್ದಾರ' ಧಾರಾವಾಹಿಯಿಂದ ನಟಿ ಯಜ್ಞಾ ಶೆಟ್ಟಿ ಹೊರನಡೆದದ್ಯಾಕೆ.?

Posted By: Naveen
Subscribe to Filmibeat Kannada

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳ ಪೈಕಿ 'ವಾರಸ್ದಾರ' ಕೂಡ ಒಂದು. ಈ ಧಾರಾವಾಹಿ ಮೂಲಕ ನಟಿ ಯಜ್ಞಾ ಶೆಟ್ಟಿ ಕಿರುತೆರೆಗೆ ಕಾಲಿಟ್ಟಿದ್ದರು. ಆದರೆ ಈಗ ಯಜ್ಞಾ ಶೆಟ್ಟಿ 'ವಾರಸ್ದಾರ' ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಈ ವಿಷಯವನ್ನ ಸ್ವತಃ ಯಜ್ಞಾ ಶೆಟ್ಟಿ 'ಫಿಲ್ಮಿ ಬೀಟ್ ಕನ್ನಡ'ಕ್ಕೆ ಸ್ಪಷ್ಟ ಪಡಿಸಿದ್ದಾರೆ.

ಕಿಚ್ಚು ಸುದೀಪ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ವಾರಸ್ದಾರ' ಧಾರಾವಾಹಿಯಲ್ಲಿ ನಟಿ ಯಜ್ಞಾ ಶೆಟ್ಟಿ ಹಾಗೂ 'ಡ್ರಾಮಾ ಜ್ಯೂನಿಯರ್ಸ್' ಖ್ಯಾತಿಯ ಚಿತ್ರಾಲಿ ಪ್ರಮುಖ ಪಾತ್ರಧಾರಿಗಳು. ಚಿತ್ರಾಲಿ ತಾಯಿ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಅಭಿನಯಿಸುತ್ತಿದ್ದರು. ಯಶಸ್ವಿಯಾಗಿ ಸಾಗಿಬರುತ್ತಿರುವ ಈ ಧಾರಾವಾಹಿಯಿಂದ ಇದೀಗ ಯಜ್ಞಾ ಶೆಟ್ಟಿ ಹೊರನಡೆದಿರುವುದೇಕೆ.? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿರಿ....

ಹೊರ ಬಂದಿರುವುದು ನಿಜ

''ವಾರಸ್ದಾರ' ಧಾರಾವಾಹಿ ಯಿಂದ ಹೊರಬಂದಿರುವುದು ನಿಜ'' ಅಂತ ಒಪ್ಪಿಕೊಳ್ಳುವ ನಟಿ ಯಜ್ಞಾ ಶೆಟ್ಟಿ, ಅದಕ್ಕೆ ಏನು ಕಾರಣವನ್ನೂ ಕೊಟ್ಟಿದ್ದಾರೆ.

ನನಗೆ ಇಷ್ಟ ಇಲ್ಲ

''ವಾರಸ್ದಾರ' ಧಾರಾವಾಹಿಯಲ್ಲಿನ ಕಥಾ ಹಂದರ ಇನ್ನು ಮುಂದೆ ಬದಲಾಗಲಿದೆ. ಬದಲಾಗಲಿರುವ ಕಥೆ ನನಗೆ ಇಷ್ಟ ಆಗಲಿಲ್ಲ'' ಎಂದು ಕಡ್ಡಿತುಂಡು ಮಾಡಿದ ಹಾಗೆ ಹೇಳುತ್ತಾರೆ ನಟಿ ಯಜ್ಞಾ ಶೆಟ್ಟಿ, ನಟಿ

ನಾನು ತಾಯಿ ಆಗಲ್ಲ

''ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿ ಚಿತ್ರಾಲಿ ಪಾತ್ರ ದೊಡ್ಡ ಹುಡುಗಿಯಾಗಿ ಬದಲಾಗಲಿದೆ. ಆ ದೊಡ್ಡ ಹುಡುಗಿಗೆ ತಾಯಿ ಆಗಿ ನಟಿಸುವುದು ನನಗೆ ಸರಿ ಅನಿಸಲಿಲ್ಲ'' ಎನ್ನುತ್ತಾರೆ ನಟಿ ಯಜ್ಞಾ ಶೆಟ್ಟಿ, ನಟಿ

ಅಷ್ಟೊಂದು ವಯಸ್ಸಾಗಿಲ್ಲ

''ಚಿತ್ರಾಲಿ ಅಂತಹ ಚಿಕ್ಕ ಮಗುವಿಗೆ ತಾಯಿ ಆಗುವುದು ಓಕೆ. ಆದರೆ ಹೇಗೆ ನಾನು ದೊಡ್ಡ ಹುಡುಗಿಗೆ ತಾಯಿಯಾಗಿ ನಟಿಸಲಿ. ಆ ಪಾತ್ರವನ್ನ ಮಾಡುವುದಕ್ಕೆ ನನಗೆ ಇನ್ನೂ ಅಷ್ಟೊಂದು ವಯಸ್ಸಾಗಿಲ್ಲ'' - ಯಜ್ಞಾ ಶೆಟ್ಟಿ, ನಟಿ

ಮೊದಲು ಹೇಳಿರಲಿಲ್ಲ

''ಧಾರಾವಾಹಿಯ ಶುರುವಿನಲ್ಲಿ ನಾನು ಚಿತ್ರಾಲಿ ಪಾತ್ರಕ್ಕೆ ತಾಯಿ ಅಂತ ಹೇಳಿದ್ದರು. ಆದರೆ ಆ ಪಾತ್ರದ ಹುಡುಗಿ ದೊಡ್ಡವಳಾಗುವ ಬಗ್ಗೆ ನನಗೆ ತಿಳಿಸಿರಲಿಲ್ಲ'' - ಯಜ್ಞಾ ಶೆಟ್ಟಿ, ನಟಿ

ಧಾರಾವಾಹಿ ತಂಡಕ್ಕೆ ಹೇಳಿದ್ದೇನೆ.!

''ವಾರಸ್ದಾರ' ಧಾರಾವಾಹಿಯ ತಂಡಕ್ಕೆ ಈಗಾಗಲೇ ನಾನು ನಟಿಸಲು ಆಗುವುದಿಲ್ಲ ಅಂತ ಹೇಳಿದ್ದೇನೆ. ಅವರು ಸಹ ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ'' - ಯಜ್ಞಾ ಶೆಟ್ಟಿ, ನಟಿ

ಹೊಸಬರ ಎಂಟ್ರಿ

ಯಜ್ಞಾ ಶೆಟ್ಟಿ ಮಾಡಿದ ತಾಯಿಯ ಪಾತ್ರಕ್ಕಾಗಿ ಧಾರಾವಾಹಿ ತಂಡ ಇನ್ನೊಬ್ಬ ನಟಿಯನ್ನ ಆಯ್ಕೆಮಾಡಿದೆಯಂತೆ. ಆದರೆ ಅದು ಯಾರು ಎನ್ನುವ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ.

English summary
Kannada Actress Yagna Shetty walks out from Zee Kannada Channel's popular 'Varasdara' serial

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada