»   » ಪಾರ್ವತಮ್ಮ ಪರಿಚಯಿಸಿದ ನಟಿಯರಿಂದು 'ದೊಡ್ಡ ಸ್ಟಾರ್'ಗಳು

ಪಾರ್ವತಮ್ಮ ಪರಿಚಯಿಸಿದ ನಟಿಯರಿಂದು 'ದೊಡ್ಡ ಸ್ಟಾರ್'ಗಳು

Posted By:
Subscribe to Filmibeat Kannada

ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಪಾಲಿಗೆ ಮರೆಯಲಾಗದ ಅಮ್ಮ. ಕನ್ನಡದ ನಟಿಯರಿಗಂತೂ ಪಾರ್ವತಮ್ಮ ಅಕ್ಷರಶಃ ತಾಯಿಯಾಗಿದ್ದರು. ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ನಟಿಯರನ್ನು ಪರಿಚಯಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.

ತಮ್ಮ ಪೂರ್ಣಿಮಾ ಮತ್ತು ವಜ್ರೇಶ್ವರಿ ಸಂಸ್ಥೆಯ ಮೂಲಕ ಕನ್ನಡ ಸಿನಿಮಾರಂಗಕ್ಕೆ ಅನೇಕ ಪ್ರತಿಭಾವಂತ ಕಲಾವಿದರನ್ನು ಪಾರ್ವತಮ್ಮ ರಾಜ್ ಕುಮಾರ್ ನೀಡಿದ್ದಾರೆ. ಮಲಾಶ್ರೀ, ಪ್ರೇಮಾ, ಸುಧಾರಾಣಿ, ರಕ್ಷಿತಾ, ರಮ್ಯ ಸೇರಿದಂತೆ ಸಾಕಷ್ಟು ನಟಿಯರನ್ನು ಪರಿಚಯಿಸಿದ್ದಾರೆ. ಪ್ರತಿಭೆಗೆ ಅವಕಾಶ ನೀಡಿ ಅದನ್ನು ಪ್ರೋತ್ಸಾಹಿಸುವ ಗುಣ ಅವರಲ್ಲಿ ಅಧಿಕವಾಗಿತ್ತು. ಮುಂದೆ ಓದಿ....

ಮಾಲಾಶ್ರೀ

ಆಕ್ಷನ್ ಕ್ವೀನ್ ಮಾಲಾಶ್ರೀ ಅವರನ್ನು ಚಿತ್ರರಂಗಕ್ಕೆ ಮೊದಲು ಪರಿಚಯಿಸಿದ್ದು ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರೇ. 1979ರಲ್ಲಿ ಬಂದ 'ನಂಜುಂಡಿ ಕಲ್ಯಾಣ' ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ಜೋಡಿಯಾಗಿ ಮಾಲಾಶ್ರೀ ನಟಿಸಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾವಾಗಿತ್ತು.

ಸುಧಾರಾಣಿ

ಕೆಲ ಸಿನಿಮಾಗಳ ಮೂಲಕ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದ ಸುಧಾರಾಣಿ ಅವರನ್ನು ನಟಿಯಾಗಿ ಮಾಡಿದ್ದು ಸಹ ಪಾರ್ವತಮ್ಮ ರಾಜ್ ಕುಮಾರ್. ಶಿವರಾಜ್ ಕುಮಾರ್ ನಟನೆಯ ಮೊದಲ ಸಿನಿಮಾ 'ಆನಂದ್' ಚಿತ್ರದಲ್ಲಿ ಸುಧಾರಾಣಿ ನಟಿಸುವ ಮೂಲಕ ನಾಯಕಿಯಾದರು.

ಪ್ರೇಮಾ

'ಸವ್ಯಸಾಚಿ' ಎನ್ನುವ ಸಿನಿಮಾ ಮಾಡಿದ್ದ ಪ್ರೇಮಾ ಅವರಿಗೆ ಬ್ರೇಕ್ ಕೊಟ್ಟಿದ್ದು 'ಓಂ' ಸಿನಿಮಾ. 'ಓಂ' ಸಿನಿಮಾದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಪ್ರೇಮಾ ಕಾಣಿಸಿಕೊಂಡಿದ್ದು, ಈ ಸಿನಿಮಾವನ್ನು ಸಹ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ ಮಾಡಿದ್ದರು.

ರಕ್ಷಿತಾ

'ಅಪ್ಪು' ಸಿನಿಮಾದ ಮೂಲಕ ಕ್ರೇಜಿ ಕ್ವೀನ್ ರಕ್ಷಿತಾ ಸಿನಿಮಾರಂಗಕ್ಕೆ ಎಂಟ್ರಿಯಾದರು. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೋಡಿಯಾಗಿ ಅವರು ನಟಿಸಿದ್ದು, ಪೂರ್ಣಿಮಾ ಎಂಟರ್ ಪ್ರೈಸಸ್ ನಲ್ಲಿ ಈ ಚಿತ್ರ ಮೂಡಿ ಬಂದಿತ್ತು.

ರಮ್ಯಾ

ಪುನೀತ್ ರಾಜ್ ಕುಮಾರ್ ನಟನೆಯ ಎರಡನೇ ಸಿನಿಮಾ 'ಅಭಿ'. ಈ ಚಿತ್ರದಲ್ಲಿ ನಟಿಯಾಗಿ ರಮ್ಯಾ ಅವರಿಗೆ ಆಯ್ಕೆ ಮಾಡಿ ಚಿತ್ರರಂಗದಲ್ಲಿ ಅವರಿಗೆ ದೊಡ್ಡ ನಟಿಯಾಗಿ ಬೆಳೆಯುವುದಕ್ಕೆ ಅವಕಾಶ ಮಾಡಿಕೊಟ್ಟರು.

ಸುಮಲತಾ

ನಟಿ ಸುಮಲತಾ ಅಂಬರೀಶ್ 'ರವಿಚಂದ್ರ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನು ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ ಮಾಡಿದ್ದು, 1980ರಲ್ಲಿ ಚಿತ್ರ ಬಿಡುಗಡೆಯಾಗಿತ್ತು.

ಅನು ಪ್ರಭಾಕರ್ , ನಟಿ

ನಟಿ ಅನು ಪ್ರಭಾಕರ್ ಅವರಿಗೆ ಚಿತ್ರರಂಗದಲ್ಲಿ ಒಂದು ದಾರಿ ಮಾಡಿ ಕೊಟ್ಟಿದ್ದು ಸಹ ಪಾರ್ವತಮ್ಮ ರಾಜ್ ಕುಮಾರ್. ''ಹೃದಯ ಹೃದಯ ಸಿನಿಮಾದಲ್ಲಿ ಅವಕಾಶ ಸಿಗದಿದ್ದರೇ ನಾನು ಅನು ಪ್ರಭಾಕರ್ ಆಗುತ್ತಿರಲಿಲ್ಲ.'' ಅಂತ ಸ್ವತಃ ಅನು ಪ್ರಭಾಕರ್ ಅವರೇ ಹೇಳಿಕೊಂಡಿದ್ದಾರೆ.

English summary
Here is the list of Kannada Actresses Who got Introduced By Producer Parvathamma Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada