»   » ಕನ್ನಡ ಕೇಬಲ್ ಚಾನೆಲ್ ಗಳಲ್ಲಿ 'ಡಬ್ಬಿಂಗ್'ನದ್ದೇ ಪಾರುಪತ್ಯ

ಕನ್ನಡ ಕೇಬಲ್ ಚಾನೆಲ್ ಗಳಲ್ಲಿ 'ಡಬ್ಬಿಂಗ್'ನದ್ದೇ ಪಾರುಪತ್ಯ

Posted By:
Subscribe to Filmibeat Kannada

''ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಂಸ್ಕೃತಿಗೆ ಅವಕಾಶ ಇಲ್ಲ. ಡಬ್ಬಿಂಗ್ ಬರುವುದಕ್ಕೆ ನಾವು ಬಿಡುವುದಿಲ್ಲ'' ಅಂತ ಕನ್ನಡ ಪರ ಸಂಘಟನೆಗಳು ಮತ್ತು ಡಬ್ಬಿಂಗ್ ವಿರೋಧಿಗಳು ಪ್ರತಿಭಟಿಸುತ್ತಲೇ ಇದ್ದಾರೆ.

ಆದ್ರೆ, ಸದ್ದಿಲ್ಲದಂತೆ ಕನ್ನಡಕ್ಕೆ ಡಬ್ಬಿಂಗ್ ನುಸುಳಿ ಕೇಬಲ್ ಚಾನೆಲ್ ಗಳಲ್ಲಿ ನೆಲೆಕಾಣುತ್ತಿವೆ. ಕನ್ನಡ ಕೇಬಲ್ ಚಾನೆಲ್ ಗಳಲ್ಲಿ 'ಡಬ್ಬಿಂಗ್' ಹಾಡುಗಳು ಪ್ರಸಾರವಾಗುತ್ತಿವೆ.

ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಅಭಿನಯದ ಸೂಪರ್ ಹಿಟ್ ಸಾಂಗ್ ''ಬೇಬಿ ಡಾಲ್'' ಕನ್ನಡದಲ್ಲಿ ''ಚಿನ್ನದ ಹುಡುಗಿನಾ'' ಅಂತ ಡಬ್ ಆಗಿದೆ. ಇನ್ನೂ ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ 'ಬಾಡಿಗಾರ್ಡ್' ಚಿತ್ರದ ''ತೇರಿ ಮೇರಿ ಪ್ರೇಮ್ ಕಹಾನಿ..'' ಹಾಡು ''ನನ್ನ ನಿನ್ನ..ನಿನ್ನ ನನ್ನ ಪ್ರೀತಿ...'' ಅಂತ ಪ್ಲೇ ಆಗುತ್ತಿದೆ.

sunny leone

ಹಾಡುಗಳು ಡಬ್ ಆಗಿವೆ ಅಂದ್ರೆ, ಇಡೀ ಸಿನಿಮಾದ ಡಬ್ಬಿಂಗ್ ಕಾರ್ಯ ಈಗಾಗಲೇ ಮುಗಿದಿದೆ ಅಂತರ್ಥ. ಇದನ್ನೆಲ್ಲಾ ನೋಡಿರುವ ಡಬ್ಬಿಂಗ್ ವಿರೋಧಿಗಳು ಕೆಂಡ ಕಾರುತ್ತಿದ್ದಾರೆ. [ಕನ್ನಡ ಚಾನೆಲ್ ನಲ್ಲಿ ಬಂದೇಬಿಡ್ತು ಡಬ್ಬಿಂಗ್ ಸಿನಿಮಾ?]

''ಎಲೆಕ್ಷನ್ ಕೌಂಟಿಂಗ್ ಮುಗಿಯಲಿ. ಆಮೇಲೆ ಡಬ್ಬಿಂಗ್ ವಿರುದ್ಧ ಸಭೆ ನಡೆಸಿ, ಬೃಹತ್ ಪ್ರತಿಭಟನೆ ಮಾಡಿ, ಸರ್ಕಾರಕ್ಕೆ ಮನವಿ ಮಾಡುತ್ತೇವೆ'' ಅಂತ ವಾಟಾಳ್ ನಾಗರಾಜ್ ಹೇಳುತ್ತಾರೆ. [ಡಬ್ಬಿಂಗ್ ಬಂದ್ರೆ ಏನಾಗ್ಬಹುದು? ಸಣ್ಣ ಲೆಕ್ಕಾಚಾರ..]

ಯಾರು ಏನೇ ಅಂದರೂ, ಏನೇ ಮಾಡಿದರೂ ಡಬ್ಬಿಂಗ್ ತಡೆಯಲು ಸಾಧ್ಯವಿಲ್ಲ ಅಂತ ಕೆಲವರು ಒಳಗೊಳಗೇ ನಗುತ್ತಿದ್ದಾರೆ.

English summary
Slowly, Dubbing is entering into Kannada Film Industry. Kannada Cable channels are telecasting Hindi songs Dubbed into Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada