For Quick Alerts
  ALLOW NOTIFICATIONS  
  For Daily Alerts

  ಚೆನ್ನೈಲ್ಲಿ ಕನ್ನಡ ಸಿನಿಮಾ ತಾರೆಗಳ ಹಂಗಾಮ

  By Rajendra
  |

  ಭಾರತೀಯ ಸಿನಿಮಾ ಶತಮಾನೋತ್ಸವಕ್ಕೆ ಅಡಿಯಿಟ್ಟಿರುವ ಈ ಶುಭ ಸಂದರ್ಭದಲ್ಲಿ ದಕ್ಷಿಣ ಭಾರತದ ಚಿತ್ರರಂಗ ನೂರು ವರ್ಷಗಳ ಸಿನಿಮಾ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಇದಕ್ಕೆ ಚೆನ್ನೈನ ಜವಹಾರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣ ಸಾಕ್ಷಿಯಾಗಿದೆ.

  ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಸೆಪ್ಟೆಂಬರ್ 21ರಂದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ತಾರೆಗಳು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡು ಎಲ್ಲರ ಕಣ್ಮನ ಸೆಳೆದರು.

  ಕನ್ನಡ ಚಿತ್ರರಂಗದ ತಾರೆಗಳಾದ ಶಿವರಾಂ, ಭಾರತಿ ವಿಷ್ಣುವರ್ಧನ್, ಜಯಂತಿ, ಶ್ರೀನಾಥ್, ಬಿ ಸರೋಜಾ ದೇವಿ, ಹೇಮಾ ಚೌದರಿ, ದೊಡ್ಡಣ್ಣ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇವರ ಜೊತೆಗೆ ಈ ತಲೆಮಾರಿನ ನಟರಾದ ರಮೇಶ್ ಅರವಿಂದ್, ವಿಜಯ್ ರಾಘವೇಂದ್ರ, ಮೋಹನ್, ರಿಷಿಕಾ ಸಿಂಗ್ ಹಾಗೂ ರೂಪಿಕಾ ಸಹ ವೇದಿಕೆ ಮೇಲೆ ಹೆಜ್ಜೆ ಹಾಕಿದರು.

  ಸೈಮಾ (SIIMa 2013) ಪ್ರಶಸ್ತಿಗಳ ಬಳಿಕ ದಕ್ಷಿಣ ಭಾರತ ಚಿತ್ರರಂಗ ಮತ್ತೊಮ್ಮೆ ಒಟ್ಟಿಗೆ ವೇದಿಕೆ ಮೇಲೆ ಕಾಣಿಸಿಕೊಂಡು ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು. ಸ್ಲೈಡ್ ಗಳಲ್ಲಿ ಕನ್ನಡ ಚಿತ್ರ ತಾರೆಗಳ ಸಂಭ್ರಮವನ್ನು ಕಣ್ಣಾರೆ ನೋಡಿ ಆನಂದಿಸಿ.

  ಪ್ರಣಯರಾಜನ ಜೊತೆ ಜಯಂತಿ, ಭಾರತಿ

  ಪ್ರಣಯರಾಜನ ಜೊತೆ ಜಯಂತಿ, ಭಾರತಿ

  ಪ್ರಣಯರಾಜ ಶ್ರೀನಾಥ್, ಅಭಿನಯ ಶಾರದೆ ಜಯಂತಿ, ಭಾರತಿ ವಿಷ್ಣುವರ್ಧನ್ ಸಂಭ್ರಮಿಸಿದ ಘಳಿಗೆ.

  ಕಮಲ್ ಹಾಸನ್ ಜೊತೆ ಕನ್ನಡ ತಾರೆಗಳು

  ಕಮಲ್ ಹಾಸನ್ ಜೊತೆ ಕನ್ನಡ ತಾರೆಗಳು

  ನಟ ಕಮಲ್ ಹಾಸನ್ ಜೊತೆಗೆ ಜಯಮಾಲಾ, ಹೇಮಾ ಚೌದರಿ, ಬಿ ಸರೋಜಾ ದೇವಿ, ಶ್ರೀನಾಥ್, ಜಯಂತಿ ಹಾಗೂ ಭಾರತಿ ವಿಷ್ಣುವರ್ಧನ್.

  ಬಾಬು ಜೊತೆ ಎಸ್ ಶಿವರಾಂ ಕಂಡ ರೀತಿ

  ಬಾಬು ಜೊತೆ ಎಸ್ ಶಿವರಾಂ ಕಂಡ ರೀತಿ

  ಎಸ್ ವಿ ರಾಜೇಂದ್ರ ಸಿಂಗ್ ಬಾಬು ಜೊತೆ ಹಿರಿಯ ನಟ ಎಸ್ ಶಿವರಾಂ.

  ರಾಜೇಶ್ ಕೃಷ್ಣನ್ ಗೆ ಸನ್ಮಾನ

  ರಾಜೇಶ್ ಕೃಷ್ಣನ್ ಗೆ ಸನ್ಮಾನ

  ಜನಪ್ರಿಯ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹಾಗೂ ಕರ್ನಾಟಕ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಂದ ಸನ್ಮಾನ.

  ವಾಸು ಜೊತೆ ತಾರಾ ಅನುರಾಧಾ

  ವಾಸು ಜೊತೆ ತಾರಾ ಅನುರಾಧಾ

  ಆಪ್ತಮಿತ್ರ, ಆಪ್ತರಕ್ಷಕ ನಿರ್ದೇಶಕ ಪಿ ವಾಸು ಜೊತೆ ಕನ್ನಡದ ತಾರಾ ಅನುರಾಧಾ ಕಂಡುಬಂದ ಬಗೆ.

  ವೇದಿಕೆ ಮೇಲೆ ಹಳಬರ ಸಮಾಗಮ

  ವೇದಿಕೆ ಮೇಲೆ ಹಳಬರ ಸಮಾಗಮ

  ಖ್ಯಾತ ಹಿನ್ನೆಲೆ ಗಾಯಕಿ ಬಿಕೆ ಸುಮಿತ್ರಾ ಅವರ ಜೊತೆ ಹಿರಿಯ ಕಲಾವಿದೆ ಪ್ರತಿಮಾ ದೇವಿ. ನಡುವೆ ಇರುವವರು ಹಿರಿಯ ನಟಿ ಹರಿಣಿ.

  ವಿಜಯ್ ರಾಘವೇಂದ್ರ ಜೊತೆ ಹೆಜ್ಜೆ ಹಾಕಿದವರು

  ವಿಜಯ್ ರಾಘವೇಂದ್ರ ಜೊತೆ ಹೆಜ್ಜೆ ಹಾಕಿದವರು

  ವಿಜಯ್ ರಾಘವೇಂದ್ರ, ರಿಷಿಕಾ ಸಿಂಗ್ ಹಾಗೂ ಮೋಹನ್ ವೇದಿಕೆ ಮೇಲೆ ಹೆಜ್ಜೆ ಹಾಕಿದ ಕ್ಷಣಗಳು.

  ರೂಪಿಕಾ ಜೊತೆ ರಮೇಶ್ ಅರವಿಂದ ಹೆಜ್ಜೆ

  ರೂಪಿಕಾ ಜೊತೆ ರಮೇಶ್ ಅರವಿಂದ ಹೆಜ್ಜೆ

  ರೂಪಿಕಾ ಜೊತೆ ನಟ ರಮೇಶ್ ಅರವಿಂದ್ ಅವರು ಹೆಜ್ಜೆ ಹಾಕಿದ ಸಂಭ್ರಮದ ಕ್ಷಣಗಳು.

  ದೊಡ್ಡಣ್ಣ ಕಾಣಿಸಿಕೊಂಡದ್ದು ಹೀಗೆ

  ದೊಡ್ಡಣ್ಣ ಕಾಣಿಸಿಕೊಂಡದ್ದು ಹೀಗೆ

  ಪೋಷಕ ನಟ ದೊಡ್ಡಣ್ಣ ಅವರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಹೀಗೆ.

  ಜಯಲಲಿತಾರಿಂದ ಮೀನಾಗೆ ಸನ್ಮಾನ

  ಜಯಲಲಿತಾರಿಂದ ಮೀನಾಗೆ ಸನ್ಮಾನ

  ನಟಿ ಮೀನಾ ಅವರಿಗೆ ಜಯಲಲಿತಾ ಅವರಿಂದ ಸನ್ಮಾನ. ಕನ್ನಡದ ಪುಟ್ನಂಜ, ಮೈ ಆಟೋಗ್ರಾಫ್ ಹಾಗೂ ಸ್ವಾತಿಮುತ್ತು ಚಿತ್ರಗಳಲ್ಲಿ ಮೀನಾ ಅಭಿನಯಿಸಿದ್ದಾರೆ.

  ತಂಗಿ ಜೊತೆ ಕಾರ್ತಿಕಾ ನಾಯರ್

  ತಂಗಿ ಜೊತೆ ಕಾರ್ತಿಕಾ ನಾಯರ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಬೃಂದಾವನ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಾರ್ತಿಕಾ ನಾಯರ್ ತನ್ನ ತಂಗಿ ತುಲಸಿ ನಾಯರ್ ಜೊತೆ ದರ್ಶನ ನೀಡಿದ್ದು ಹೀಗೆ.

  English summary
  Kannada Celebrities At 100 Years Of Indian Cinema Celebration, was organised by South Indian Film Chamber of Commerce in Chennai, at Jawaharlal Nehru Indoor Stadium.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X