For Quick Alerts
  ALLOW NOTIFICATIONS  
  For Daily Alerts

  ನರಸಿಂಹರಾಜು ಅವರ ಬಗ್ಗೆ ಹೊರ ಬರಲಿದೆ ಪುಸ್ತಕ

  By Naveen
  |

  ಹಾಸ್ಯ ನಟ ನರಸಿಂಹರಾಜು ಕನ್ನಡ ಚಿತ್ರರಂಗದ ಹಾಸ್ಯ ದೊರೆ. ನೂರಾರು ಸಿನಿಮಾಗಳನ್ನು ಮಾಡಿರುವ ಈ ಶ್ರೇಷ್ಠ ನಟನ ಚರಿತ್ರೆ ಈಗ ಪುಸ್ತಕ ರೂಪದಲ್ಲಿ ಹೊರ ಬರುತ್ತಿದೆ. ಅಂದಹಾಗೆ, ಈ ಪುಸ್ತಕವನ್ನು ಬರೆಯುತ್ತಿರುವುದು ನರಸಿಂಹರಾಜು ಅವರ ಪುತ್ರಿ.

  ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ತಮ್ಮ ತಂದೆಯ ಬಗ್ಗೆ ಪುಸ್ತಕವನ್ನು ಬರೆಯಲು ಮುಂದಾಗಿದ್ದಾರೆ. ತಂದೆಯ ರೀತಿಯ ಸಿನಿಮಾಗಳನ್ನು ಸಹ ಮಾಡಿರುವ ಅವರು ಅಪ್ಪನ ಚರಿತ್ರೆ ಹೇಳಲು ತಯಾರಿ ಮಾಡಿಕೊಂಡಿದ್ದಾರೆ.

   ನರಸಿಂಹರಾಜು ಹೆಸರಿನಲ್ಲಿ ನಡೆಯಲಿದೆ ಫಿಲ್ಮ್ ಫೆಸ್ಟಿವಲ್ ನರಸಿಂಹರಾಜು ಹೆಸರಿನಲ್ಲಿ ನಡೆಯಲಿದೆ ಫಿಲ್ಮ್ ಫೆಸ್ಟಿವಲ್

  ಸದ್ಯ ಈ ಪುಸ್ತಕಕ್ಕಾಗಿ ಅನೇಕ ವಿಷಯಗಳನ್ನು ಸಂಗ್ರಹ ಮಾಡುತ್ತಿದ್ದಾರಂತೆ. ತಮ್ಮ ತಾಯಿಯ ಸಹಾಯದೊಂದಿಗೆ ನರಸಿಂಹರಾಜು ಅವರ ಜೀವನದ ಮಹತ್ವದ ಘಟನೆಗಳನ್ನು ಅಕ್ಷರ ರೂಪಕ್ಕೆ ತರುತ್ತಿದ್ದಾರೆ.

  ಇದರ ಜೊತೆಗೆ ತಿಪಟೂರಿನಲ್ಲಿ ನರಸಿಂಹರಾಜು ಅವರ ಹೆಸರಿನಲ್ಲಿ ಒಂದು ರಂಗಮಂದಿರ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಎಲ್ಲರ ಪ್ರೋತ್ಸಾಹ ಬೇಕು ಎಂದರು ಸುಧಾ ನರಸಿಂಹರಾಜು. ತಾಲ್ಲುಕು ಮಟ್ಟದಲ್ಲಿ ಒಂದು ಸುಂದರ ರಂಗಮಂದಿರ ಕಟ್ಟುತ್ತಿದ್ದು, ಇದಕ್ಕೆ ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

  ಅಂದಹಾಗೆ, Bengalore International Comedy Shorts (BICS) ಎಂಬ ಹೆಸರಿನಲ್ಲಿ ಹಾಸ್ಯ ಕಿರು ಚಿತ್ರೋತ್ಸವ ನಡೆಸಲು ನರಸಿಂಹರಾಜು ಅವರ ಮೊಮ್ಮಗ ಅರವಿಂದ್ ನರಸಿಂಹರಾಜು ಪ್ಲಾನ್ ಮಾಡಿದ್ದಾರೆ. ನರಸಿಂಹರಾಜು ಅವರ 95ನೇ ಹುಟ್ಟುಹಬ್ಬದ ವಿಶೇಷವಾಗಿ ಈ ಚಿತ್ರೋತ್ಸವ ಸಪ್ಟೆಂಬರ್ ನಲ್ಲಿ ನಡೆಯಲಿದೆ.

  English summary
  Kannada comedy actor Narasimharaju's daughter Sudha Narasimharaju planning to write a biography on Narasimharaju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X