ನಾಟಕ, ಸಿನಿಮಾ ನಂತರ ವೆಬ್ ಸೀರಿಸ್ ಶುರು ಮಾಡಲಿದ್ದಾರೆ ಗಿರಿರಾಜ್

By Naveen

ಕನ್ನಡದಲ್ಲಿ ಈಗ ವೆಬ್ ಸೀರಿಸ್ ಗಳು ಹೆಚ್ಚಾಗುತ್ತಿದೆ. ವೆಬ್ ಸೀರಿಸ್ ಗಳು ಕನ್ನಡಕ್ಕೆ ತೀರಾ ಹೊಸದಾಗಿದ್ದರು ಕೂಡ ಇತ್ತೀಚಿಗೆ ಅದರ ಜನಪ್ರಿಯತೆ ದೊಡ್ಡದಾಗಿತ್ತಿದೆ. ಈಗ ಖ್ಯಾತ ನಿರ್ದೇಶಕ ಗಿರಿರಾಜ್ ಕೂಡ ವೆಬ್ ಸೀರಿಸ್ ಮಾಡಲು ಮುಂದಾಗಿದ್ದಾರೆ.

ಗಿರಿರಾಜ್ 'ರಕ್ತ ಚಂದನ' ಎಂಬ ಹೆಸರಿನಲ್ಲಿ ಹೊಸ ವೆಬ್ ಸೀರಿಸ್ ಶುರು ಮಾಡಲಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಕಥೆ ಹೊಂದಿದೆ. ವಿಶೇಷ ಅಂದರೆ ತಮ್ಮ ರಂಗಭೂಮಿ ತಂಡವಾದ ನಿರ್ಗುಣ ತಂಡದ ಆದ್ವಿಕಾ ಎಂಬುವವರು ಈ ವೆಬ್ ಸೀರಿಸ್ ನಲ್ಲಿ ಮುಖ್ಯ ಪಾತ್ರ ಮಾಡಲಿದ್ದಾರೆ. ಎಂಟು ಕಂತುಗಳಲ್ಲಿ ಈ ವೆಬ್ ಸೀರಿಸ್ ಬರಲಿದೆ. ಉಳಿದಂತೆ, ಪ್ರದೀಪ್ ರೆಡ್ಡಿ ಛಾಯಾಗ್ರಹಣ, ಅಭಿ ಸಂಗೀತ ನೀಡಲಿದ್ದಾರೆ. ಮೇ ಕೊನೆಯಲ್ಲಿ ಚಿತ್ರೀಕರಣ ಶುರು ಆಗಲಿದೆ.

kannada director giriraj doing new web series

ಅಂದಹಾಗೆ, ಗಿರಿರಾಜ್ 'ಜಟ್ಟ', 'ಮೈತ್ರಿ' 'ಅಮರಾವತಿ' ರೀತಿಯ ಒಳ್ಳೆಯ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಇತ್ತೀಚಿಗಷ್ಟೆ ಅವರ 'ಸುಗಂಧದ ಸೀಮೆಯಾಚೆ' ನಾಟಕ ಜನಮನ್ನಣೆ ಪಡೆದಿತ್ತು. ನಾಟಕ ಸಿನಿಮಾದ ನಂತರ ಈಗ ಈ ಡಿಜಿಟಲ್ ಯುಗಕ್ಕೆ ತಕ್ಕಂತೆ ಗಿರಿರಾಜ್ ವೆಬ್ ಸೀರಿಸ್ ಪ್ಲಾನ್ ಮಾಡಿದ್ದಾರೆ.

More from Filmibeat

English summary
'Jatta' movie fame Kannada director Giriraj doing new web series. The web series titled as 'Raktha Chandana'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X