For Quick Alerts
  ALLOW NOTIFICATIONS  
  For Daily Alerts

  'ಕಲರ್ ಫುಲ್' ಆಗಿ ಬಾಲಿವುಡ್ ಗೆ ಹಾರಿದ ಕನ್ನಡದ 'ಮೈನಾ'

  |

  ನಿರ್ದೇಶಕ ನಾಗಶೇಖರ್ ಬಾಲಿವುಡ್ ಸಿನಿಮಾ ಮಾಡುವುದಾಗಿ ಹೇಳಿ ಅನೇಕ ದಿನಗಳಾಗಿತ್ತು. ಮೊದಲ ಬಾರಿಗೆ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ನಾಗಶೇಖರ್ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದ್ದ ನಗಶೇಖರ್ ಈಗ ಚಿತ್ರದ ಟೈಟಲ್ ಅನ್ನು ಅನೌನ್ಸ್ ಮಾಡಿದ್ದಾರೆ.

  ಅಂದ್ಹಾಗೆ ನಾಗಶೇಖರ್ ಬಾಲಿವುಡ್ ಸಿನಿಮಾಗೆ 'ಕಲರ್ ಫುಲ್' ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಟೈಟಲ್ ಜೊತೆಗೆ ಚಿತ್ರದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ಕಲರ್ ಫುಲ್ ಚಿತ್ರದ ಮೂಲಕ ಬಾಲಿವುಡ್ ನ ಖ್ಯಾತ ನಿರ್ಮಾಪಕನ ಪುತ್ರನನ್ನು ಬಾಲಿವುಡ್ ಬಣ್ಣದ ಲೋಕಕ್ಕೆ ಪರಿಚಯಿಸುತ್ತಿದ್ದಾರೆ. ಇತ್ತೀಚಿಗಷ್ಟೆ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನನ್ನು ಅಮರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದರು ನಾಗಶೇಖರ್.

  ಬಾಲಿವುಡ್ ನ ಖ್ಯಾತ ನಿರ್ಮಾಪಕನ ಪುತ್ರನಿಗೆ ನಾಗಶೇಖರ್ ನಿರ್ದೇಶನ ಬಾಲಿವುಡ್ ನ ಖ್ಯಾತ ನಿರ್ಮಾಪಕನ ಪುತ್ರನಿಗೆ ನಾಗಶೇಖರ್ ನಿರ್ದೇಶನ

  ಈಗ ಬಾಲಿವುಡ್ ನ ಖ್ಯಾತ ನಿರ್ಮಾಪಕ ಜೋಗಿಂದರ್ ಸಿಂಗ್ ಪುತ್ರ ಭವೀಶ್ ನನ್ನು ಚಿತ್ರರಂಗಕ್ಕೆ ಎಂಟ್ರಿ ಕೊಡಿಸುತ್ತಿದ್ದಾರೆ. ವಿಶೇಷ ಅಂದ್ರೆ ಕಲರ್ ಫುಲ್ ಸಿನಿಮಾ ಕನ್ನಡ ಸೂಪರ್ ಹಿಟ್ 'ಮೈನಾ' ಚಿತ್ರದ ಚಿತ್ರದ ರಿಮೇಕ್. 2013ರಲ್ಲಿ ತೆರೆಗೆ ಬಂದಿದ್ದ 'ಮೈನಾ' ಚಿತ್ರದಲ್ಲಿ ಆದಿನಗಳು ಚೇತನ್ ಮತ್ತು ನಿತ್ಯಾ ಮೆನನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. 'ಮೈನಾ' ಚಿತ್ರದಲ್ಲಿ ಕಲರ್ ಫುಲ್ ಎನ್ನುವ ಪದ ಸಖತ್ ಖ್ಯಾತಿ ಗಳಿಸಿತ್ತು. ಈಗ ಅದೇ ಪದವನ್ನು ಟೈಟಲ್ ಮಾಡಿ ಬಾಲಿವುಡ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ನಾಗಶೇಖರ್.

  ಇನ್ನು ಚಿತ್ರದಲ್ಲಿ ಭವೀಶ್ ಗೆ ನಾಯಕಿಯಾಗಿ ತಾನ್ಯಾ ಹೋಪ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ನಿತ್ಯಾ ಮೆನನ್ ನಿಭಾಯಿಸಿದ್ದ ಪಾತ್ರದಲ್ಲಿ ತಾನ್ಯಾ ಮಿಂಚಲಿದ್ದಾರೆ. ಚಿತ್ರದ ಬಹುತೇಕ ಭಾಗ ಚಿತ್ರೀಕರಣ ಗೋವದಲ್ಲಿ ನಡೆದಿತ್ತು. ಗೋವಾದ ಸುಂದರ ತಾಣವನ್ನು ಮೈನಾ ಚಿತ್ರದಲ್ಲಿ ಸೆರೆಹಿಡಿಯಲಾಗಿತ್ತು. 'ಕಲರ್ ಫುಲ್' ಸಿನಿಮಾ ಕೂಡ ಅಲ್ಲೆ ಚಿತ್ರೀಕರಣವಾಗುತ್ತಾ ಎನ್ನುವುದು ಕಾದುನೋಡಬೇಕು.

  'ಕಲರ್ ಫುಲ್' ಚಿತ್ರಕ್ಕೆ ಸತ್ಯ ಹೆಗಡೆ ಸಿನಿಮಾಟೋಗ್ರಾಫಿ ಮಾಡುತ್ತಿದ್ದಾರೆ. ಈ ಮೂಲಕ ಸತ್ಯ ಹೆಗಡೆ ಕೂಡ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ಅರ್ಮಾನ್ ಮಲ್ಲಿಕ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪೋಸ್ಟರ್ ಮೂಲಕ ಬಂದಿರುವ ನಾಗಶೇಖರ್ ಮತ್ತು ತಂಡ ಸಧ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ.

  English summary
  Kannada director Nagashekar bollywood movie title finalized, titled Colorful. This film is remake of sandalwood Myna film.
  Friday, July 26, 2019, 18:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X