»   » ನಟ ಸೂರ್ಯ ಚಿತ್ರಕ್ಕೆ ಕನ್ನಡ ನಿರ್ದೇಶಕ ಆಕ್ಷನ್ ಕಟ್?

ನಟ ಸೂರ್ಯ ಚಿತ್ರಕ್ಕೆ ಕನ್ನಡ ನಿರ್ದೇಶಕ ಆಕ್ಷನ್ ಕಟ್?

Posted By:
Subscribe to Filmibeat Kannada

ಕಾಲಿವುಡ್ ನ ಜನಪ್ರಿಯ ನಟ ಸೂರ್ಯ ಅಭಿನಯದ 'ಮಾಸ್' ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್ ಕಲೆಕ್ಷನ್ ಮಾಡುತ್ತಿದೆ. ನಟ ಸೂರ್ಯ ಕೈಯಲ್ಲಿ ಇನ್ನೆರಡು ಚಿತ್ರಗಳಿವೆ. ಹೀಗಿರುವಾಗಲೇ, ಹೊಸ ಸಿನಿಮಾ ಮಾಡುವ ಬಗ್ಗೆ ನಟ ಸೂರ್ಯ ಯೋಚಿಸುತ್ತಿದ್ದಾರೆ.

ಹೊಸ ಚಿತ್ರಕ್ಕೆ ನಟ ಸೂರ್ಯ ಸೂಚಿಸಿರುವ ನಿರ್ದೇಶಕ ಕನ್ನಡಿಗ ಅನ್ನೋದು ಬ್ರೇಕಿಂಗ್ ನ್ಯೂಸ್. ಅಂದ್ಹಾಗೆ, ಆ ನಿರ್ದೇಶಕ ಯಾರು ಅಂದ್ರೆ, 'ರೋಮಿಯೋ' ಚಿತ್ರದ ಸೂತ್ರಧಾರಿ ಪಿ.ಸಿ.ಶೇಖರ್.

Kannada Director P.C.Shekar to direct Actor Suriya's next?

ಹೌದು, ಕನ್ನಡದಲ್ಲಿ 'ರೋಮಿಯೋ', 'ಚಡ್ಡಿದೋಸ್ತ್' ಗಳಂತಹ ಚಿತ್ರಗಳನ್ನ ಮಾಡಿ ಈಗ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ 'ಸ್ಟೈಲ್ ಕಿಂಗ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಪಿ.ಸಿ.ಶೇಖರ್, ನಟ ಸೂರ್ಯರನ್ನ ಇಂಪ್ರೆಸ್ ಮಾಡಿದ್ದಾರೆ. [ಚಿತ್ರ ವಿಮರ್ಶೆ: 'ಚಡ್ಡಿದೋಸ್ತ್' ಸಿನಿಮಾ ಹೇಗಿದೆ?]

ಮೊಟ್ಟ ಮೊದಲ ಬಾರಿ ಗಣೇಶ್ ಗೆ ಅಂಡರ್ ವರ್ಲ್ಡ್ ಡಾನ್ ಪಾತ್ರಕೊಟ್ಟು, ಮೇಕ್ ಓವರ್ ಮಾಡಿಸಿರುವುದು ಇದೇ ಪಿ.ಸಿ.ಶೇಖರ್. ಈಗಾಗಲೇ ರಿಲೀಸ್ ಆಗಿರುವ 'ಸ್ಟೈಲ್ ಕಿಂಗ್' ಚಿತ್ರದ ಟ್ರೈಲರ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈ ಟ್ರೈಲರ್ ನೋಡಿ, ಪಿ.ಸಿ.ಶೇಖರ್ ಮೇಕಿಂಗ್ ಶೈಲಿ ಕಂಡು, ಅವರೊಂದಿಗೆ ಸಿನಿಮಾ ಮಾಡುವುದಕ್ಕೆ ನಟ ಸೂರ್ಯ ಆಸಕ್ತಿ ತೋರಿದ್ದಾರೆ.

Kannada Director P.C.Shekar to direct Actor Suriya's next?

ಇದು ಗಲ್ಲಿ ಗಾಸಿಪ್ ಅಂದುಕೊಳ್ಳಬೇಡಿ. ಈ ಸುದ್ದಿಯನ್ನ ಖುದ್ದು ತಮಿಳು ದಿನಪತ್ರಿಕೆಗಳು ವರದಿ ಮಾಡಿವೆ. ಅಸಲಿಗೆ, 'ಸ್ಟೈಲ್ ಕಿಂಗ್' ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿರುವುದು ಕ್ಯಾಮರಾ ಮೆನ್ ಪಾಂಡಿ. ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಖ್ಯಾತಿ ಪಡೆದಿರುವ ಪಾಂಡಿ ಮುಖಾಂತರ 'ಸ್ಟೈಲ್ ಕಿಂಗ್' ಮತ್ತು ಪಿ.ಸಿ.ಶೇಖರ್ ಬಗ್ಗೆ ನಟ ಸೂರ್ಯ ತಿಳಿದುಕೊಂಡಿದ್ದಾರಂತೆ.

ಪರಭಾಷೆಯ ಮೇಕಿಂಗ್ ಶೈಲಿ, ಅಲ್ಲಿನ ನಿರ್ದೇಶಕರಿಗೆ ಇಲ್ಲಿನ ನಟರು ಮಾರುಹೋಗುವ ಸಂದರ್ಭದಲ್ಲಿ, ಕನ್ನಡದ ಪ್ರತಿಭೆಗೆ ಕಾಲಿವುಡ್ ನಟ ಕ್ಲೀನ್ ಬೌಲ್ಡ್ ಆಗಿರುವುದು ಕನ್ನಡಿಗರ ಹೆಮ್ಮೆ ಅಲ್ಲವೇ. (ಏಜೆನ್ಸೀಸ್)

English summary
According to the reports of Tamil News Papers, Actor Suriya is inspired by the making style of Kannada Director P.C.Shekar. And hence, Suriya has decided to approach the director for his next flick.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada