For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ಖ್ಯಾತ ಗಾಯಕ ರಘುದೀಕ್ಷಿತ್ ದಂಪತಿ

  |
  ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ ರಘುದೀಕ್ಷಿತ್ | Oneindia Kannada

  ಖ್ಯಾತ ಗಾಯಕ ರಘುದೀಕ್ಷಿತ್ ಬಾಳಲ್ಲಿ ಬಿರುಗಾಳಿ ಎದ್ದಿದೆ. ರಘುದೀಕ್ಷಿತ್ ಮತ್ತು ಪತ್ನಿ ಮಯೂರಿ ಉಪಾಧ್ಯಾಯ ಸಂಸಾರದಲ್ಲಿ ಬಿರುಕು ಮೂಡಿದ್ದು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ ಒಂದು ವರ್ಷದಿಂದ ರಘುದೀಕ್ಷಿತ್ ದಂಪತಿ ಬೇರ ಬೇರೆ ವಾಸಿಸುತ್ತಿದ್ದರು. ಆದ್ರೀಗ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.

  ಕಳೆದ ಶುಕ್ರವಾರ ನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದ ರಘುದೀಕ್ಷಿತ್ ದಂಪತಿ, ಯಾವುದೆ ಆರೋಪ ಪ್ರತ್ಯಾರೋಪ ಮಾಡದೆ ಪರಸ್ಪರ ಒಪ್ಪಿಗೆಯ ಮೇರೆಗೆ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 13B(1) ರ ಅಡಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

  ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈಗ ಗುಪ್ತಚರ ಅಧಿಕಾರಿ

  6 ತಿಂಗಳುಗಳಕಾಲ ಸಮಯಾವಕಾಶ ನೀಡಿರುವ ಕೋರ್ಟ್, ಡಿಸೆಂಬರ್ 9ಕ್ಕೆ ಅರ್ಜಿ ವಿಚಾರಣೆಗೆ ಮುಂದೂಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ರಘುದೀಕ್ಷಿತ್ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗಿ, ಮಲಯಾಳಂ, ತಮಿಳು ಸಿನಿಮಾಗಳಿಗೆ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ.

  ಇನ್ನು ಪತ್ನಿ ಮಯೂರಿ ಉಪಾಧ್ಯಾಯ ಕೂಡ ಖ್ಯಾತ ಶಾಸ್ತ್ರೀಯ ನೃತ್ಯ ಕಲಾವಿದೆ. ಅವರು ಕೂಡ ದೇಶ ವಿದೇಶಗಳಲ್ಲಿ ನೃತ್ಯ ಶೋಗಳನ್ನು ನೀಡಿದ್ದಾರೆ. ಇನ್ನು ರಘುದೀಕ್ಷಿತ್ ವಿರುದ್ಧ ತಮಿಳು ಗಾಯಕಿ ಚಿನ್ಮಯಿ ಶ್ರೀ ಪಾದ್ ಮಿ ಟೂ ಆರೋಪ ಮಾಡಿದ್ದರು. ಅವರ ಅರೋಪವನ್ನು ರಘು ಒಪ್ಪಿಕೊಂಡು ಕ್ಷಮೆ ಕೂಡ ಕೇಳಿದ್ದರು.

  English summary
  Kannada famous singer Raghu dixit and his wife applied for divorce. This couple lived separately from one year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X