»   » ಕ್ರೇಜಿ ಸ್ಟಾರ್ ರವಿಚಂದ್ರನ್ ವಿರುದ್ಧ ರೊಚ್ಚಿಗೆದ್ದ ನಿರ್ಮಾಪಕರು

ಕ್ರೇಜಿ ಸ್ಟಾರ್ ರವಿಚಂದ್ರನ್ ವಿರುದ್ಧ ರೊಚ್ಚಿಗೆದ್ದ ನಿರ್ಮಾಪಕರು

Posted By:
Subscribe to Filmibeat Kannada

ನಿರ್ಮಾಪಕರು ಬೀದಿಗಿಳಿದು ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಮಾಡಿ ಒಂದು ತಿಂಗಳಾಗಿದೆ ಅಷ್ಟೆ. ಅಷ್ಟು ಬೇಗ ಮತ್ತೊಂದು ಸಮಸ್ಯೆ ಈಗ ಸ್ಯಾಂಡಲ್ ವುಡ್ ನಲ್ಲಿ ಭುಗಿಲೆದ್ದಿದೆ.

ಕನ್ನಡ ಖಾಸಗಿ ವಾಹಿನಿಗಳು ಕನ್ನಡ ಚಿತ್ರಗಳ ಸ್ಯಾಟೆಲೈಟ್ ಹಕ್ಕುಗಳನ್ನ ಕೊಂಡುಕೊಳ್ಳುತ್ತಾಯಿಲ್ಲ. ಹೀಗಿದ್ದರೂ, ಕನ್ನಡ ಸ್ಟಾರ್ ನಟರು ಅದೇ ವಾಹಿನಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ನಿರ್ಮಾಪಕರಿಗೆ ಕಲಾವಿದರು ಸ್ಪಂದಿಸುತ್ತಿಲ್ಲ ಅಂತ ನಿರ್ಮಾಪಕರು ಫಿಲ್ಮ್ ಚೇಂಬರ್ ನಲ್ಲಿ ಧರಣಿ ನಡೆಸಿದರು. [ಬ್ರೇಕಿಂಗ್ ; ನಿರ್ಮಾಪಕರ ಧರಣಿಗೆ ಕದನ ವಿರಾಮ]

ಕರ್ನಾಟಕ ಸರ್ಕಾರ ಮಧ್ಯ ಪ್ರವೇಶಿಸಿದ ನಂತರ ನಿರ್ಮಾಪಕರು ಪ್ರತಿಭಟನೆಯನ್ನ ಹಿಂಪಡೆದರು. ಕೆಲ ಕಾಲ ತಣ್ಣಗಿದ್ದ ಕನ್ನಡ ಚಿತ್ರ ನಿರ್ಮಾಪಕರು ಈಗ ಏಕ್ದಂ ಕ್ರೇಜಿ ಸ್ಟಾರ್ ರವಿಚಂದ್ರನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ರವಿಮಾಮನ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೆ ನಿರ್ಮಾಪಕರು ಪತ್ರ ಬರೆದಿದ್ದಾರೆ. ಮುಂದೆ ಓದಿ.....

ರವಿಚಂದ್ರನ್ ಮೇಲೆ ನಿರ್ಮಾಪಕರು ಗರಂ

ಕ್ರೇಜಿ ಸ್ಟಾರ್ ರವಿಚಂದ್ರನ್ ಮೇಲೆ ನಿರ್ಮಾಪಕರು ಗರಂ ಆಗಿದ್ದಾರೆ. ಖುದ್ದು ನಿರ್ಮಾಪಕನಾಗಿರುವ ರವಿಚಂದ್ರನ್ ಅವರು ನಿರ್ಮಾಪಕರು ಎದುರಿಸುತ್ತಿರುವ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಅಂತ ಅನೇಕ ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಏನು ಅಂತ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....[ನೊಂದ ನಿರ್ಮಾಪಕರಿಂದ ಅಂಬರೀಶ್ ಗೆ ಮಹಾ ಮಂಗಳಾರತಿ]

ನಿರ್ಮಾಪಕರ ಕಷ್ಟಕ್ಕೆ ರವಿಚಂದ್ರನ್ ಸ್ಪಂದಿಸಲಿಲ್ಲ

ನಿರ್ಮಾಪಕರು ಸತ್ಯಾಗ್ರಹ, ಸರಣಿ ಉಪವಾಸ ಸತ್ಯಾಗ್ರಹ ಹಾಗೂ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ, ರವಿಚಂದ್ರನ್ ಪ್ರತಿಕ್ರಿಯೆ ನೀಡಲಿಲ್ಲ. ಕಲಾವಿದರ ಸಂಘದ ಸಭೆಯಲ್ಲೂ ಹಿರಿಯ ನಟನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಭಾಗವಹಿಸಲಿಲ್ಲ ಅಂತ ನಿರ್ಮಾಪಕರು ಈಗ ರೊಚ್ಚಿಗೆದ್ದಿದ್ದಾರೆ. [ಇಂದಿನಿಂದ ನಿರ್ಮಾಪಕರ ಸರಣಿ ಉಪವಾಸ ಸತ್ಯಾಗ್ರಹ]

ರಿಯಾಲಿಟಿ ಶೋಗಳಲ್ಲಿ ಕ್ರೇಜಿ ಸ್ಟಾರ್ ಮಗ್ನ

ನಿರ್ಮಾಪಕರ ಕಷ್ಟಕ್ಕೆ ಸ್ಪಂದಿಸದೆ, ರಿಯಾಲಿಟಿ ಶೋಗಳಲ್ಲಿ ಮಗ್ನರಾಗಿ ನಿರ್ಮಾಪಕರ ಹೋರಾಟವನ್ನ ರವಿಚಂದ್ರನ್ ಲಘುವಾಗಿ ಪರಿಗಣಿಸಿದ್ದಾರೆ. ರಿಯಾಲಿಟಿ ಶೋಗಳ ವಿರುದ್ಧ ನಿರ್ಮಾಪಕರು ಧಿಕ್ಕಾರ ಕೂಗಿದ್ದರೂ, ಅದೇ ಶೋಗಳಿಗೆ ಮನ್ನಣೆ ನೀಡಿ ನಿರ್ಮಾಪಕರನ್ನ ರವಿಚಂದ್ರನ್ ತಿರಸ್ಕಾರದ ದೃಷ್ಟಿಯಲ್ಲಿ ನೋಡಿದ್ದಾರೆ ಅಂತ ನಿರ್ಮಾಪಕರು ರವಿಚಂದ್ರನ್ ವಿರುದ್ಧ ಬೆಟ್ಟು ಮಾಡುತ್ತಿದ್ದಾರೆ. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

ವೇತನ ಪರಿಷ್ಕರಣೆ ಮೂಲ ಕಾರಣ!

ಅಸಲಿಗೆ ಅಶೋಕ್ ನಾಯಕತ್ವದ ಕಾರ್ಮಿಕರ ಸಂಘದ ವೇತನ ಪರಿಷ್ಕರಿಸುವ ಬಗ್ಗೆ ವಾಣಿಜ್ಯ ಮಂಡಳಿ ಸಮಿತಿ ರಚಿಸಿತ್ತು. ಆ ಸಮಿತಿಯ ಅಧ್ಯಕ್ಷತೆ ವಹಿಸಿದವರು ಕನಸುಗಾರ ರವಿಚಂದ್ರನ್. ತಮ್ಮ ಅಧ್ಯಕ್ಷತೆಯಲ್ಲಿ ಇತ್ತೀಚೆಗಷ್ಟೆ ತಮ್ಮ ಮನೆಯಲ್ಲೇ ಸಭೆ ನಡೆಸಿ, ಕಾರ್ಮಿಕರ ವೇತನ ಹೆಚ್ಚಳದ ಬಗ್ಗೆ ನಿರ್ಣಯ ಕೈಗೊಂಡಿದ್ದರು. [ಫಿಲ್ಮ್ ಚೇಂಬರ್ ನಲ್ಲಿ ಕೂಗಾಟ-ಕಿತ್ತಾಟ-ರಂಪಾಟ]

20-70% ವೇತನ ಹೆಚ್ಚಳ

ಮೂಲಗಳ ಪ್ರಕಾರ 20-70% ವರೆಗೆ ಕಾರ್ಮಿಕರಿಗೆ ವೇತನವನ್ನ ಹೆಚ್ಚಿಸಬೇಕು ಅಂತ ರವಿಚಂದ್ರನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು. ಈ ಸಂಬಂಧ ಈಗ ರವಿಚಂದ್ರನ್, ವಾಣಿಜ್ಯ ಮಂಡಳಿಗೆ ವರದಿ ನೀಡಲಿದ್ದಾರೆ. ವರದಿ ವಿರುದ್ಧ ಈಗ ನಿರ್ಮಾಪಕರು ತಿರುಗಿಬಿದ್ದಿದ್ದಾರೆ. [ಅಂಬಿ ಮಾತಿಗೆ 'ಇವರಿಂದ' ಕವಡೆ ಕಾಸಿನ ಕಿಮ್ಮತ್ತಿಲ್ಲ]

ನಿರ್ಮಾಪಕರು ಮತ್ತು ಕಾರ್ಮಿಕರ ಬಿಕ್ಕಟ್ಟು

ನಿರ್ಮಾಪಕರು ಮತ್ತು ಕಾರ್ಮಿಕರ ಬಿಕ್ಕಟ್ಟು ಇಂದು ನಿನ್ನೆಯದ್ದಲ್ಲ. ವೇತನ ಪರಿಷ್ಕರಿಸುವ ಬಗ್ಗೆ ಕಾರ್ಮಿಕರ ಒಕ್ಕೂಟ ಆಗಾಗ ಮನವಿ ಮಾಡಿದ್ದರೂ, ನಿರ್ಮಾಪಕರ ಸಂಘ ಸ್ಪಂದಿಸಿರಲಿಲ್ಲ. ಆದ್ರೆ, ಕಳೆದ ವರ್ಷ ನಡೆದ ಕಾರ್ಮಿಕರ ಬೃಹತ್ ಪ್ರತಿಭಟನೆ ನಂತ್ರ ವಾಣಿಜ್ಯ ಮಂಡಳಿ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ರವಿಚಂದ್ರನ್ ಮೇಲೆ ನಂಬಿಕೆ ಇಲ್ಲ!

ನಿರ್ಮಾಪಕರು ಪ್ರತಿಭಟನೆ ಮಾಡುತ್ತಿರುವಾಗ ಕ್ಯಾರೆ ಅನ್ನದ ರವಿಚಂದ್ರನ್ ನಿರ್ಮಾಪಕರಿಗೆ ಪೂರಕವಾದ, ನ್ಯಾಯಯುತವಾದ ವರದಿ ನೀಡುತ್ತಾರೆ ಅಂತ ಯಾವುದೇ ನಂಬಿಕೆ ಇಲ್ಲ ಅಂತ ಈಗ ಎಲ್ಲಾ ನಿರ್ಮಾಪಕರು ಹೊಸ ರಾಗ ಎಳೆದಿದ್ದಾರೆ.

ರವಿಚಂದ್ರನ್ ಸಮಿತಿ ರದ್ದುಗೊಳಿಸಿ!

ವೇತನ ಪರಿಷ್ಕರಣೆ ಬಗ್ಗೆ ರವಿಚಂದ್ರನ್ ನೀಡುವ ವರದಿಯನ್ನು ಖಂಡಿತ ಒಪ್ಪಿಕೊಳ್ಳುವುದಿಲ್ಲ ಅಂತ ನಿರ್ಮಾಪಕರು ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಸಮಿತಿಯನ್ನ ರದ್ದುಗೊಳಿಸಿ, ನಿರ್ಮಾಪಕರನ್ನ ಸ್ಪಂದಿಸುವ ಹೊಸ ಸಮಿತಿಯನ್ನು ರಚಿಸಬೇಕೆಂದು ವಾಣಿಜ್ಯ ಮಂಡಳಿಗೆ ನಿರ್ಮಾಪಕರೆಲ್ಲಾ ಸೇರಿ ಪತ್ರ ಬರೆದಿದ್ದಾರೆ.

English summary
Kannada Film Producers are now annoyed with Crazy Star V.Ravichandran. Producers claim that Ravichandran did not support them during the strike. Read the article to know more.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada