»   » ಸೆನ್ಸಾರ್ ನಲ್ಲೂ 'ಸಕ್ಕರೆ' ಸವಿದ ಗೋಲ್ಡನ್ ಸ್ಟಾರ್

ಸೆನ್ಸಾರ್ ನಲ್ಲೂ 'ಸಕ್ಕರೆ' ಸವಿದ ಗೋಲ್ಡನ್ ಸ್ಟಾರ್

Posted By:
Subscribe to Filmibeat Kannada

ಗಣೇಶ ಚತುರ್ಥಿ ಬೇರೆ ಹತ್ತಿರ ಬರುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರವೂ ಬಿಡುಗಡೆಗೆ ಹತ್ತಿರವಾಗುತ್ತಿದೆ. ಈ ಬಾರಿ ಅವರು ಬೆನಕಪ್ಪನ ಹಬ್ಬಕ್ಕೂ ಮುನ್ನವೇ ಕಡುಬು ತಿಂದಷ್ಟು ಖುಷಿಯಾಗಿದ್ದಾರೆ. ಕಾರಣ ಅವರ ಅಭಿನಯದ 'ಸಕ್ಕರೆ' ಚಿತ್ರ ಸೆನ್ಸಾರ್ ನಲ್ಲಿ ಯು ಸರ್ಟಿಫಿಕೇಟ್ ನೊಂದಿಗೆ ಪಾಸ್ ಆಗಿದೆ.

ಅಭಯ್ ಸಿಂಹ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದ್ದು 'ಯು' ಸರ್ಟಿಫಿಕೇಟ್ ನೀಡಿದೆ. ಚಿತ್ರ ನೋಡುತ್ತಿದ್ದಷ್ಟು ಹೊತ್ತೂ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗ ಮಾಡುವುದನ್ನೇ ಮರೆತುಹೋಗಿದೆ! ಅಷ್ಟರ ಮಟ್ಟಿಗೆ ಚಿತ್ರ ಸೆನ್ಸಾರ್ ಮಂಡಳಿ ಸದಸ್ಯರನ್ನು ಆಕರ್ಷಿಸಿದೆ.


ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ದೀಪಾ ಸನ್ನಿಧಿ ಜೊತೆಯಾಗುತ್ತಿದ್ದಾರೆ. ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಮಾಣದ ಚಿತ್ರಕ್ಕೆ 'ಗುಬ್ಬಚ್ಚಿಗಳು' ಖ್ಯಾತಿಯ ಅಭಯ್ ಸಿಂಹ ನಿರ್ದೇಶನವಿದೆ. ಶೀಘ್ರದಲ್ಲೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಸಕ್ಕರೆ ಸವಿರುಚಿ ನೋಡಬಹುದು.

ಮಡಿಕೇರಿ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಈ ರೊಮ್ಯಾಂಟಿಕ್ ಲವ್ ಸ್ಟೋರಿ ನಿರೀಕ್ಷೆಯಲ್ಲಿ ಗೋಲ್ಡನ್ ಸ್ಟಾರ್ ಅಭಿಮಾನಿಗಳಿದ್ದಾರೆ. (ಏಜೆನ್ಸೀಸ್)

English summary
Golden Star Ganesh and Deepa Sannidhi lead Kannada film Sakkare has got U certificate from the Regional Censor Board. The romantic drama film written and directed by Abhaya Simha and produced jointly by B. Suresha and Shylaja Nag of Media House Productions.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada