For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟರ ಚೆಂದದ ಮನೆಯ ಹೆಸರಿನ ಹಿಂದೆ ಅಡಗಿರುವ ಕುತೂಹಲಕಾರಿ ವಿಷಯಗಳು

  By Naveen
  |

  ಒಂದು ಒಳ್ಳೆಯ ಮನೆ ಕಟ್ಟಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ದುಡಿದು ಒಂದು ಹಂತಕ್ಕೆ ಬಂದು ಕನಸಿನ ಮನೆ ಕಟ್ಟಿ ಅಲ್ಲಿ ನೆಮ್ಮದಿಯಾಗಿರಬೇಕು ಎನ್ನುವುದು ಎಲ್ಲರ ಮನಸಿನಲ್ಲಿಯೂ ಇರುತ್ತದೆ. ಇನ್ನು ಮನೆ ಕಟ್ಟಿದ ಮೇಲೆ ಅದಕ್ಕೆ ಇಡುವ ಹೆಸರು ಕೂಡ ತುಂಬ ಮುಖ್ಯವಾಗಿರುತ್ತದೆ.

  ಈ 'ಚಿನ್ನ'ದಂಥ ಬಂಗಲೆ ಯಾರದ್ದು ಅಂತ ಗೊತ್ತಾದ್ರೆ ಸರ್ಪ್ರೈಸ್ ಆಗ್ತೀರಾ.!

  ಅದೇ ರೀತಿ ಸಿನಿಮಾ ತಾರೆಯರು ಕೂಡ ತಮ್ಮ ಕನಸಿನ ಮನೆಯನ್ನು ಕಟ್ಟಿದ್ದಾರೆ. ತಮ್ಮ ಆ ಚಂದದ ಮನೆಗೆ ಅಷ್ಟೆ ಸುಂದರವಾದ ಹೆಸರುಗಳನ್ನು ಇಟ್ಟಿದ್ದಾರೆ. ಶಿವಣ್ಣ, ಪುನೀತ್, ಉಪೇಂದ್ರ, ದರ್ಶನ್, ಸುದೀಪ್ ಹೀಗೆ ಸ್ಟಾರ್ ನಟರ ಮನೆಯ ಹೆಸರಿನ ಹಿಂದೆ ಒಂದೊಂದು ಕುತೂಹಲಕಾರಿ ವಿಷಯ ಅಡಗಿದೆ. ಮುಂದೆ ಓದಿ....

  'S U ಮನೆ' (ಸುಮ್ಮನೆ)

  'S U ಮನೆ' (ಸುಮ್ಮನೆ)

  ಡಿಫರೆಂಟ್ ಸಿನಿಮಾಗಳಿಗೆ ಹೆಸರುವಾಸಿ ಆಗಿರುವ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಮನೆಗೆ 'S U ಮನೆ' ಅಂತ ಇಟ್ಟಿದ್ದಾರೆ. ಉಪ್ಪಿ ಅಣ್ಣನ ಹೆಸರು ಸುಧೀಂದ್ರ(S) ಮತ್ತು ಉಪೇಂದ್ರ (U) ಈ ಎರಡನ್ನೂ ಸೇರಿಸಿ 'S U ಮನೆ' ಎಂದು ತಮ್ಮ ಮನೆಗೆ ಉಪ್ಪಿ ನಾಮಕರಣ ಮಾಡಿದ್ದಾರೆ.

  'ಶ್ರೀ ಮುತ್ತು'

  'ಶ್ರೀ ಮುತ್ತು'

  ನಟ ಶಿವರಾಜ್ ಕುಮಾರ್ ಅವರ ನಿವಾಸ ಬೆಂಗಳೂರಿನ ನಾಗಾವರ ಬಳಿ ಇದೆ. ತಮ್ಮ ಮನೆಗೆ ತಂದೆ ರಾಜ್ ಕುಮಾರ್ ಅವರ ಮೊದಲ ಹೆಸರು 'ಶ್ರೀ ಮುತ್ತು' (ಮುತ್ತುರಾಜ್) ಎಂದು ಇಟ್ಟಿದ್ದಾರೆ ಶಿವಣ್ಣ.

  'ದೊಡ್ಮನೆ'

  'ದೊಡ್ಮನೆ'

  ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಮನೆ ಸದಾಶಿವನಗರದಲ್ಲಿದೆ. ಡಾ.ರಾಜ್ ವಾಸಿಸಿದ್ದ ಈ ಮನೆಗೆ ಯಾವ ಹೆಸರನ್ನೂ ಇಟ್ಟಿಲ್ಲ. ಆದರೆ ಅಭಿಮಾನಿಗಳು ಮಾತ್ರ ಅವರ ಮನೆಯನ್ನ ಪ್ರೀತಿಯಿಂದ 'ದೊಡ್ಮನೆ' ಅಂತ ಕರೆಯುತ್ತಾರೆ.

  'ತೂಗುದೀಪ ನಿಲಯ'

  'ತೂಗುದೀಪ ನಿಲಯ'

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿವಾಸ ರಾಜರಾಜೇಶ್ವರಿ ನಗರದಲ್ಲಿದ್ದು, 'ತೂಗುದೀಪ' ನಿಲಯ ಎಂದು ತಮ್ಮ ತಂದೆಯ ಹೆಸರನ್ನು ಅದಕ್ಕೆ ಇಟ್ಟಿದ್ದಾರೆ.

  'ಶ್ರೀ ಈಶ್ವರಿ ಕೃಪಾ ರವಿಕಲಾ ನಿವಾಸ'

  'ಶ್ರೀ ಈಶ್ವರಿ ಕೃಪಾ ರವಿಕಲಾ ನಿವಾಸ'

  ನಟ ರವಿಚಂದ್ರನ್ ರವರ ಮನೆಯ ಹೆಸರು 'ಶ್ರೀ ಈಶ್ವರಿ ಕೃಪಾ ರವಿಕಲಾ ನಿವಾಸ'. ತಂದೆ ವೀರಸ್ವಾಮಿ ಅವರು ಕಟ್ಟಿದ ಮನೆ ಇದಾಗಿದ್ದು, ಇದು ನಗರದ ರಾಜ್ ಕುಮಾರ್ ರಸ್ತೆಯಲ್ಲಿದೆ.

  'ಶ್ರೀ ನಿಧಿ'

  'ಶ್ರೀ ನಿಧಿ'

  ಕಿಚ್ಚ ಸುದೀಪ್ ರವರ ನಿವಾಸದ ಹೆಸರು 'ಶ್ರೀ ನಿಧಿ' ನಿಲಯ. ಪುಟ್ಟೇನಹಳ್ಳಿಯಲ್ಲಿರುವ ಈ ಮನೆಯನ್ನು 1991 ರಲ್ಲಿ ಸುದೀಪ್ ತಂದೆ ಕಟ್ಟಿಸಿದ್ದರು.

  'ಗಣಪ'

  'ಗಣಪ'

  ರಾಜರಾಜೇಶ್ವರಿ ನಗರದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಮನೆಯ ಹೆಸರು 'ಗಣಪ'. ಗಣೇಶ ದೇವರನ್ನು ತುಂಬಾ ನಂಬುವ ನಟ ಗಣೇಶ್, ತಮ್ಮ ಮನೆಗೂ ಅದೇ ಹೆಸರನ್ನು ಇಟ್ಟಿದ್ದಾರೆ. ಅಲ್ಲದೇ, ಯೋಗರಾಜ್ ಭಟ್ ಸೇರಿದಂತೆ ಅನೇಕರು ನಟ ಗಣೇಶ್ ರನ್ನ 'ಗಣಪ' ಅಂತಲೇ ಕರೆಯುತ್ತಾರೆ.

  'ಪರಿಮಳ ನಿಲಯ'

  'ಪರಿಮಳ ನಿಲಯ'

  ಜಗ್ಗೇಶ್ ತಮ್ಮ ಪ್ರೀತಿಯ ಮನೆಗೆ ತಮ್ಮ ಪ್ರೀತಿಯ ಪತ್ನಿ ಪರಿಮಳ ಅವರ ಹೆಸರನ್ನು ಇಟ್ಟಿದ್ದಾರೆ.

  'ಎಂ.ಎಚ್.ಅಮರನಾಥ್'

  'ಎಂ.ಎಚ್.ಅಮರನಾಥ್'

  'ಎಂ.ಎಚ್.ಅಮರನಾಥ್' ಎಂಬ ಅಂಬರೀಶ್ ಅವರ ಮೊದಲ ಹೆಸರೇ ಅವರ ನಿವಾಸದ ಹೆಸರು ಕೂಡ ಆಗಿದೆ.

  'ದುನಿಯಾ ಋಣ'

  'ದುನಿಯಾ ಋಣ'

  'ದುನಿಯಾ' ಚಿತ್ರದಿಂದ ನಾಯಕ ನಟನಾದ ದುನಿಯಾ ವಿಜಯ್ ಮನೆಯ ಹೆಸರು 'ದುನಿಯಾ ಋಣ'.

  'ಚಿಗುರು'

  'ಚಿಗುರು'

  ನಟಿ ತಾರಾ ಅನುರಾಧ ತಮ್ಮ ನಿವಾಸಕ್ಕೆ 'ಚಿಗುರು' ಎಂಬ ಹೆಸರನ್ನು ಇಟ್ಟಿದ್ದಾರೆ.

  'ಸೂರ್ಯ'

  'ಸೂರ್ಯ'

  ನಟಿ ರಕ್ಷಿತಾ ಪ್ರೇಮ್ ತಮ್ಮ ಮಗ ಸೂರ್ಯ ಹುಟ್ಟಿದ ನಂತರ ಹೊಸ ಮನೆ ಕಟ್ಟಿಸಿದ್ದು, ಆ ಮನೆಗೆ 'ಸೂರ್ಯ' ಎಂಬ ಹೆಸರನ್ನು ಇಟ್ಟಿದ್ದಾರೆ.

  English summary
  Do you know what Kannada Film Stars have named their Houses.? If not read this article.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X