For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಗಳ ಕೆಲವು ಇಂಟರೆಸ್ಟಿಂಗ್ ರೆಸಲ್ಯೂಷನ್ಸ್

  By ಜೀವನರಸಿಕ
  |

  ನಿಮಗೆ ಇಂತಹಾ ರೆಸಲ್ಯೂಷನ್ ನಿಜಕ್ಕೂ ಪರಿಚಯ ಇರೋದಿಲ್ಲ. ಸ್ಯಾಂಡಲ್ವುಡ್ ಸ್ಟಾರ್ ಗಳ ರೆಸೊಲ್ಯೂಷನ್ ಹೀಗೂ ಇರುತ್ತಾ ಅನ್ನೋ ಕ್ಯೂರಿಯಾಸಿಟಿ ನಿಮಗೂ ಇರುತ್ತೆ. ಅಂತಹಾ ವಿಶೇಷ ವಿಚಿತ್ರ ಹೈ ರೆಸಲ್ಯೂಷನ್ ಲಿಸ್ಟ್ ಇಲ್ಲಿದೆ. ನೋಡ್ತಾ ಹೋಗಿ

  ಸ್ಯಾಂಡಲ್ ವುಡ್ ಕಿಂಗ್ ಕೋಪ ಕಡಿಮೆ ಮಾಡ್ಕೋಬೇಕಂತೆ ಪ್ರತೀ ವರ್ಷದ ಶಿವರಾಜ್ ಕುಮಾರ್ ರೆಸಲ್ಯೂಷನ್ ಕೋಪವನ್ನ ಕಡಿಮೆ ಮಾಡಿಕೊಳ್ಳೋದು. ಹೌದಾ ಅನ್ನೋದು ನಿಮ್ಮ ಪ್ರಶ್ನೆ ಆದರೆ ಶಿವಣ್ಣ ಹೌದು ಅಂತಾರೆ. ಯಾಕಂದ್ರೆ ಶಿವಣ್ಣಗೆ ಬಹಳ ಬೇಗ ಕೋಪ ಬಂದು ಬಿಡುತ್ತೆ. ಶೂಟಿಂಗ್ ಟೈಮಲ್ಲಿ ಪತ್ರಕರ್ತರ ಮುಂದೇನೂ ಕೋಪದಿಂದ ಕೂಗಾಡಿಬಿಡೋ ಶಿವಣ್ಣ ಮರುಕ್ಷಣ ಮಗುವಿನಂತಾಗಿ ಬಿಡ್ತಾರೆ.

  ಧೃವ ಸರ್ಜಾ ನಾರ್ಮಲ್ ಆಗಿ ಫೋನ್ ರಿಸೀವ್ ಮಾಡೋ ವಿಷ್ಯದಲ್ಲಿ ಲೇಜಿ. ಬೇಕಾದ್ರೆ ಗಂಟೆ ಗಟ್ಟಲೆ ಜಿಮ್ ನಲ್ಲಿ ಮೈದಂಡಿಸೋ ಧೃವಗೆ ಪಕ್ಕದಲ್ಲೇ ಇರೋ ಫೋನ್ ರಿಸೀವ್ ಮಾಡೋದು ಅದ್ಯಾಕೋ ಆಗದ ಕೆಲ್ಸ. ಹಾಗಾಗೀನೇ ಫೋನ್ ರಿಸೀವ್ ಮಾಡೋ ಪ್ಲಾನ್ ದೃವ ಅವ್ರದ್ದು. ಸ್ಲೈಡ್ ನಲ್ಲಿವೆ ನೋಡಿ ಪುನೀತ್, ಜಗ್ಗೇಶ್, ಸುದೀಪ್ ಹಾಗೂ ರಮ್ಯಾ ರೆಸಲ್ಯೂಷನ್ಸ್....

  ಮಾಧ್ಯಮಗಳಿಗೆ ಚಾಲೆಂಜ್ ಮಾಡಬಾರದು

  ಮಾಧ್ಯಮಗಳಿಗೆ ಚಾಲೆಂಜ್ ಮಾಡಬಾರದು

  ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಗೆ ಒಂದು ವಿಚಿತ್ರ ರೆಸಲ್ಯೂಷನ್ ಇದೆ. ಆದರೆ ಇದು ಅಭಿಮಾನಿಗಳ ರೆಸಲ್ಯೂಷನ್. ದರ್ಶನ್ ಮಾಧ್ಯಮಗಳಿಗೆ ಹತ್ತಿರವಾಗಬೇಕಂತೆ. ಅಂದ್ರೆ ಮೀಡಿಯಾ ಫ್ರೆಂಡ್ಲೀ ಆಗಬೇಕು. ಆಗ ದರ್ಶನ್ ರ ಮಾತನ್ನ ಹೆಚ್ಚು ಕೇಳ್ಬಹುದು ಆಗಾಗ ನೋಡ್ಬಹುದು. ಮತ್ತು ದರ್ಶನ್ ಖಾಸಗಿ ಪ್ರೋಗ್ರಾಮ್ ಗಳಲ್ಲಿ ಭಾಗವಹಿಸಬೇಕು. ಯಾಕಂದ್ರೆ ತಮ್ಮ ಸಿನಿಮಾದ ಕಾರ್ಯಕ್ರಮಗಳಿಗೆ ದರ್ಶನ್ ಬರೋದು ಅಪರೂಪ.

  ರಮ್ಯಾ ಯಾವಾಗ್ಲೂ ಅಂದ್ಕೊಳ್ಳೋದು ಇದೊಂದೆ

  ರಮ್ಯಾ ಯಾವಾಗ್ಲೂ ಅಂದ್ಕೊಳ್ಳೋದು ಇದೊಂದೆ

  ಸದಾ ವಿವಾದಗಳಿಗೆ ಸಿಕ್ಕಾಕಿಕೊಂಡು ಕಿರಿಕ್ ಕ್ವೀನ್ ಅಂತ ಕರೆಸಿಕೊಳ್ಳೋ ರಮ್ಯಾ ರಾಜಕೀಯಕ್ಕೆ ಹೋಗೋವಾಗ್ಲೂ ಅಂದುಕೊಂಡಿದ್ರಂತೆ ಇಲ್ಲಾದ್ರೂ ವಿವಾದಗಳಿಂದ ದೂರವಿರ್ಬೇಕು ಅಂತ. ಆದರೆ ರಾಜಕೀಯದಲ್ಲೂ ವಿವಾದಗಳು ಮೋಹಕತಾರೆಯನ್ನ ಬಿಡ್ತಿಲ್ಲ. ಪಾಪ 2014 ಆದ್ರೂ ರಮ್ಯಾಗೆ ಬದಲಾವಣೆ ತರ್ಲಿ.

  ಸುಮ್ ಸುಮ್ನೆ ರಾಂಗಾಗ್ ಬಾರ್ದು ಸೂಪರ್ ನನ್ಮಗ

  ಸುಮ್ ಸುಮ್ನೆ ರಾಂಗಾಗ್ ಬಾರ್ದು ಸೂಪರ್ ನನ್ಮಗ

  ಇತ್ತೀಚೆಗೆ ಜಗ್ಗೇಶ್ ಸಣ್ಣ ಸಣ್ಣ ವಿಷಯಗಳಿಗೆಲ್ಲ ರಾಂಗಾಗ್ತಿದ್ದಾರೆ. ಇತ್ತೀಚೆಗೆ ಸ್ಯಾಂಡಲ್ ವುಡ್ ನ ಹೊಸ ಹೀರೋಗಳ ಮೇಲೆ ರಾಂಗಾಗಿದ್ರು, ರಮ್ಯಾ ಮೇಲಂತೂ ಯರ್ರಾಬಿರ್ರಿ ಎಗರಾಡ್ತಿದ್ರು. ಹೀಗಾಗ್ಬಾರ್ದು ಅಂತ ಅಭಿಮಾನಿಗಳು ನವರಸನಾಯಕನಿಗೆ ಹೊಸ ರೆಸಲ್ಯೂಷನ್ ಕೊಟ್ಟಿದ್ದಾರೆ.

  ಕಿಚ್ಚ ಕಿತ್ತಾಡಬಾರ್ದು, ಅಭಿಮಾನಿಗಳ ಕೈಗೆ ಸಿಗ್ಬೇಕು

  ಕಿಚ್ಚ ಕಿತ್ತಾಡಬಾರ್ದು, ಅಭಿಮಾನಿಗಳ ಕೈಗೆ ಸಿಗ್ಬೇಕು

  ಕಿಚ್ಚ ಸುದೀಪ್ ಸಣ್ಣ ಸಣ್ಣ ಮಾತಿಗೆಲ್ಲಾ ವಿರೋಧ ಕಟ್ಟಿಕೊಳ್ಳಬಾರ್ದು. ತಮ್ಮ ಸಿನಿಮಾ ರಿಲೀಸಾದ್ರೆ ಥಿಯೇಟರ್ಗೆ ಬರೋದು ಕಿಚ್ಚ ಕಡಿಮೆಯಾಗಿದೆ. ಅಭಿಮಾನಿಗಳಿಗೆ ಕೈಕೊಡೋದೂ ಕಡಿಮೆಯಾಗಿದೆ. ಕಿಚ್ಚ ಫ್ಯಾನ್ ಫ್ರೆಂಡ್ಲೀ ಆಗ್ಲಿ ಅನ್ನೋದು ಅಭಿಮಾನಿಗಳ ಆಸೆ.

  ಇನ್ಯಾವಾಗ್ಲೂ ಆಗ್ಬಾರ್ದು ಪವರ್ ಕಟ್

  ಇನ್ಯಾವಾಗ್ಲೂ ಆಗ್ಬಾರ್ದು ಪವರ್ ಕಟ್

  ಈ ವರ್ಷ ಪುನೀತ್ ಅಭಿಮಾನಿಗಳಿಗೆ ಥಿಯೇಟರ್ನಲ್ಲಿ ಪವರ್ ಕಟ್ ಆದ ಅನುಭವ. ಪ್ರತೀ ವರ್ಷ ಪವರ್ ಫುಲ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನ ರಂಜಿಸ್ತಿದ್ದ ಪುನೀತ್ ಗೆ ಈ ವರ್ಷ ಒಂದೂ ಸಿನಿಮಾ ರಿಲೀಸಾಗಿಲ್ಲ ಅನ್ನೋ ಬೇಸರವಿದೆ. ಮುಂದಿನ ವರ್ಷದಿಂದ ಅಭಿಮಾನಿಗಳಿಗೆ ಬೇಸರ ಮಾಡ್ಬಾರ್ದು ಅಂತ ಮನಸು ಮಾಡಿದ್ದಾರೆ ಪುನೀತ್.

  English summary
  Kannada film stars some interesting new year resolutions are really interesting. Shivrajkumar decides to manage his anger. Here is some sound advice to our favourite stars for a better new year for themselves and their fans. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X