»   » ನಮ್ಮ ಕನ್ನಡದ ನಟರು ಎಷ್ಟು ವಿದ್ಯಾವಂತರು?

ನಮ್ಮ ಕನ್ನಡದ ನಟರು ಎಷ್ಟು ವಿದ್ಯಾವಂತರು?

Posted By:
Subscribe to Filmibeat Kannada

ಬೆಳ್ಳಿ ಪರದೆಯ ಮೇಲೆ ನಮ್ಮನ್ನು ರಂಜಿಸುವ ಕಲಾವಿದರ ವಿದ್ಯಾರ್ಹತೆ ಏನು? ಬಣ್ಣದ ಲೋಕದಲ್ಲಿ ನೆಲೆ ಕಾಣುವ ಸಲುವಾಗಿ ಕನಸು ಹೊತ್ತು ಬರುವ ಸೆಲೆಬ್ರಿಟಿಗಳು ತಮ್ಮಮ್ಮ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಿಲ್ಲವೇ?

ಓದು ತಲೆಗೆ ಹತ್ತದೇ, ಬಣ್ಣದ ಲೋಕದ ಆಕರ್ಷಣೆಗೆ ಬಿದ್ದು ಶಾಲೆಗೆ ಚಕ್ಕರ್ ಹೊಡೆದು ಸಿನಿಮಾರಂಗದಲ್ಲಿ ಕಲಾವಿದರು ನೆಲೆ ಕಂಡ ಉದಾಹರಣೆಗಳು ನಮ್ಮ ಮುಂದೆ ಬಹಳಷ್ಟಿವೆ. ಅದಕ್ಕೆ ಕನ್ನಡದಲ್ಲಿ ಈಗಿನ ನಟರಲ್ಲಿ ಕೊಡಬಹುದಾದ ಉದಾಹರಣೆಯೆಂದರೆ ದುನಿಯಾ ವಿಜಯ್.

ಬಡ ಕುಟುಂಬದಿಂದ ಬಂದಿದ್ದ ವಿಜಯ್ ಸಣ್ಣ ವಯಸ್ಸಲ್ಲೇ ಶಾಲೆಗೆ ಟಾಟಾ ಹೇಳಿ, ಸ್ಟಂಟ್ ಮ್ಯಾನ್ ಬಳಿ ಕೆಲಸಕ್ಕೆ ಸೇರಿ, ನಂತರ ಸೂರಿ ಮತ್ತು ಯೋಗರಾಜ್ ಭಟ್ ಅವರ ಬಳಿ ಸಿನಿಮಾ ಲೋಕದಲ್ಲಿ ಅವಕಾಶ ಕೇಳಿ ಬಂದಿದ್ದರು.

ಕನ್ನಡದ ಪ್ರಮುಖ ನಟ/ನಟಿಯರ ವಿದ್ಯಾರ್ಹತೆ ಏನು? ನೋಡೋಣ ಬನ್ನಿ

ದಿಗಂತ್

28.12.1983ರಲ್ಲಿ ಸಾಗರದಲ್ಲಿ ಜನಿಸಿದ ದಿಗಂತ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯ ಸೇವಾ ಭಾರತಿ, ತುಂಗಾ ಮಹಾವಿದ್ಯಾಲಯದಲ್ಲಿ ಮುಗಿಸಿದರು. ಇವರು ಬಿಕಾಂ ಪದವೀಧರ.

ಕಿಚ್ಚ ಸುದೀಪ್

02.09.1973ರಲ್ಲಿ ಶಿವಮೊಗ್ಗದಲ್ಲಿ ಜನಿಸಿದ ಸುದೀಪ್ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶಿವಮೊಗ್ಗದ ವಾಸವಿ ವಿದ್ಯಾಲಯದಲ್ಲಿ ಮುಗಿಸಿದರು. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು.

ರಮೇಶ್ ಅರವಿಂದ್

10.09.1964ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ರಮೇಶ್ ಅರವಿಂದ್, ಬಿಇ ಪದವೀಧರ. ಬೆಂಗಳೂರಿನ ಯುವಿಸಿಇ ವಿದ್ಯಾರ್ಥಿ.

ರಮ್ಯಾ ಯಾನೆ ದಿವ್ಯ ಸ್ಪಂದನ

29.11.1982ರಲ್ಲಿ ಜನಿಸಿದ ರಮ್ಯಾ, ಊಟಿಯ ಸೈಂಟ್ ಹಿಲ್ಡಾ ಮತ್ತು ಚೆನ್ನೈನ ಸೇಕ್ರೆಡ್ ಹರ್ಟ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿ, ಬೆಂಗಳೂರಿನ ಸೈಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಮುಂದುವರಿಸಿದರೂ discontinued ಮಾಡಿದರು.

ರಾಧಿಕಾ ಪಂಡಿತ್

07.03.1984ರಲ್ಲಿ ಉತ್ತರ ಕರ್ನಾಟಕದಲ್ಲಿ ಜನಿಸಿದ ರಾಧಿಕಾ, ಸಲೋನಿ ಕಾನ್ವೆಂಟ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವೀಧರರಾದರು.

ಪುನೀತ್ ರಾಜಕುಮಾರ್

17.03.1975ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಪುನೀತ್, ಬಾಲ್ಯದಲ್ಲೇ ತಮ್ಮನ್ನು ಚಿತ್ರರಂಗದಲ್ಲಿ ತೊಡಗಿಸಿಕೊಂಡದ್ದರಿಂದ ಖಾಸಾಗಿ ಟೀಚರ್ ಮೂಲಕ ಮನೆಯಲ್ಲೇ ಪ್ರಾಥಮಿಕ ಶಿಕ್ಷಣ ಮಾಡಿದರು. ನಂತರ ಅವರು ಡಿಪ್ಲಮೋ ಇನ್ ಕಂಪ್ಯೂಟರ್ ಸೈನ್ಸ್ ಮುಗಿಸಿದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

12.07.1962ರಲ್ಲಿ ತಮಿಳುನಾಡಿನ ಗಾಜನೂರಿನಲ್ಲಿ ಜನಿಸಿದ ಅಣ್ಣಾವ್ರ ಮೊದಲ ಪುತ್ರ ಶಿವಣ್ಣ ಮದ್ರಾಸ್ ವಿಶ್ವವಿದ್ಯಾಲಯದ ಪದವೀಧರ.

ದರ್ಶನ್ ತೂಗುದೀಪ್

16.02.1973ರಲ್ಲಿ ಮೈಸೂರಿನಲ್ಲಿ ಜನಿಸಿದ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ತೂಗುದೀಪ ದಂಪತಿಗಳ ಮೊದಲ ಮಗನಾದ ದರ್ಶನ್ ಪಿಯುಸಿ ವರೆಗಿನ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು.

ಚಿರಂಜೀವಿ ಸರ್ಜಾ

17.10.1984ರಲ್ಲಿ ಚಿರು, ಬೆಂಗಳೂರಿನ ಬಾಲ್ಡ್ ವಿನ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ವಿಜಯಾ ಕಾಲೇಜಿನ ಪದವೀಧರ.

ಗೋಲ್ಡನ್ ಸ್ಟಾರ್ ಗಣೇಶ್

02.07.1980ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಗಣೇಶ್, ಡಿಪ್ಲಮೋ ಇನ್ ಇಲೆಕ್ಟ್ರಾನಿಕ್ ಮುಗಿಸಿದ್ದಾರೆ.

ಡಾ. ರಾಜಕುಮಾರ್

ಕನ್ನಡದ ವರನಟ ಡಾ. ರಾಜಕುಮಾರ್ ಓದಿದ್ದು ನಾಲ್ಕನೇ ಕ್ಲಾಸ್, ಆದರೆ ಕಲಾ ಜಗತ್ತಿನಲ್ಲಿ ಸಾಧಿಸಿದ್ದು ಬೆಟ್ಟದಷ್ಟು.

English summary
Kannada film industries leading actors and actresses qualification details.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada