»   » ಕನ್ನಡ ಸಿನಿಮಾಗಳಿಗೆ ಎದುರಾಗಿದೆ ಹೊಸ ಚಾಲೆಂಜ್

ಕನ್ನಡ ಸಿನಿಮಾಗಳಿಗೆ ಎದುರಾಗಿದೆ ಹೊಸ ಚಾಲೆಂಜ್

Posted By: ಜೀವನರಸಿಕ
Subscribe to Filmibeat Kannada

ಅಬ್ಬಬ್ಬಾ ಏನೇ ಆದ್ರೂ ಕಷ್ಟ ಐತೆ. ಹೀಗೊಂದು ಮಾತು ಕೇಳಿ ಬರ್ತಿರೋದು ಸ್ಯಾಂಡಲ್ ವುಡ್ ನ ಗಲ್ಲಿ ಗಲ್ಲಿಗಳಲ್ಲಿ. ಬಹುತೇಕ ಕನ್ನಡ ಚಿತ್ರಗಳೇ ಕನ್ನಡ ಚಿತ್ರಗಳನ್ನ ನುಂಗಿ ಹಾಕ್ತಿವೆ. ಹಿಂಗಾದ್ರೆ ನಿರ್ಮಾಪಕರ ಕಥೆ ದೇವರಿಗೇ ಪ್ರೀತಿ ಅಂತಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಥಿಯೇಟರ್ ಬಾಗಿಲು ಕಾಯ್ತಿವೆ. ಆದ್ರೆ ಯಾವ ಥಿಯೇಟರ್ ಗಳೂ ಎರಡು ತಿಂಗಳು ಖಾಲಿ ಇಲ್ಲ. ಹಾಗಂತ ಥಿಯೇಟರ್ ಗಳಲ್ಲಿ ಅಬ್ಬರಿಸ್ತಾ ಇರೋ ಐದೂ ಸಿನಿಮಾಗಳು ತಮಿಳು, ತೆಲುಗು ಸಿನಿಮಾಗಳಲ್ಲ.

ಇದೊಂಥರಾ ಸುವರ್ಣ ಕಾಲ ಅಂದ್ರೂ ತಪ್ಪಿಲ್ಲ ಕನ್ನಡದ ನಾಲ್ಕು ಸಿನಿಮಾಗಳು ಹೆಚ್ಚೂ ಕಡಿಮೆ ಶೇ.80 ಥಿಯೇಟರ್ ಗಳನ್ನ ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿವೆ. ಇದ್ರಿಂದಾಗೆ ವಾರ ವಾರ ತೆರೆಗೆ ಬರೋಕೆ ಕಾದಿರೋ ಉಳಿದ ಹತ್ತಾರು ಚಿತ್ರಗಳು ಥಿಯೇಟರ್ಗೆ ಕಾದು ಕುಳಿತಿವೆ.

ರಣವಿಕ್ರಮ 238ರಲ್ಲೂ ಮುಂದುವರೆದಿದೆ

ಪವರ್ ಸ್ಟಾರ್ 'ರಣವಿಕ್ರಮ' ರಾಜ್ಯಾದ್ಯಂತ ಮುಂದುವರೆದಿದೆ. 238 ಥಿಯೇಟರ್ ಗಳಲ್ಲಿ ತೆರೆಗೆ ಬಂದಿದ್ದ 'ರಣವಿಕ್ರಮ' ಈ ವಾರವೂ ಒಂದೇ ಒಂದೇ ಥಿಯೇಟರನ್ನೂ ಕಡಿಮೆ ಮಾಡಿಕೊಳ್ಳದೆ ಒಳ್ಳೆಯ ಕಲೆಕ್ಷನ್ ನಲ್ಲಿ ಮುನ್ನುಗ್ತಿದೆ.

ವಾಸ್ತುಪ್ರಕಾರ ಉಳಿದಂತೆ

ವಾಸ್ತುಪ್ರಕಾರ ಉಳಿದಂತೆ ತನ್ನ ಪಾರಮ್ಯ ಮುಂದುವರೆಸಿದೆ. ಫ್ಯಾಮಿಲಿ ಪ್ರೇಕ್ಷಕರನ್ನ ರಜಾ ದಿನಗಳಲ್ಲಿ ಸೆಳೀತಾ ಇರೋ ಭಟ್ಟರ ಚಿತ್ರ ಮಲ್ಟಿಪ್ಲೆಕ್ಸ್ ಗಳಲ್ಲಿ ಮೋಡಿ ಮಾಡ್ತಿದ್ದು ಕಲೆಕ್ಷನ್ ಚೆನ್ನಾಗಿದೆ ಅನ್ನೋ ವರದಿ ಬಂದಿದೆ.

ಪಟ್ಟು ಬಿಡದ ರಾಮಾಚಾರಿ

ಯಶ್-ರಾಧಿಕಾ ಪಂಡಿತ್ ಕಮಾಲ್ ನ ರಾಮಾಚಾರಿ ಓಟವನ್ನ ನಿಲ್ಲಿಸಿಲ್ಲ, ಜಯಣ್ಣ ಅಂಡ್ ಭೋಗೇಂದ್ರ ಕಂಪೆನಿ 'ರಣವಿಕ್ರಮ' ಮತ್ತು 'ರಾಮಾಚಾರಿ' ಸೇರಿ ಹೆಚ್ಚೂ ಕಡಿಮೆ ರಾಜ್ಯದ ಶೇ.50 ಥಿಯೇಟರ್ ಗಳನ್ನ ಆವರಿಸಿಕೊಂಡಿದ್ದಾರೆ.

ಕೃಷ್ಣಲೀಲಾ ಸೂಪರ್

ಕೃಷ್ಣಲೀಲಾ ಸದ್ಯಕ್ಕೆ ಕೆಲವು ಚಿತ್ರಮಂದಿರಗಳನ್ನ ಕಳೆದುಕೊಂಡ್ರೂ ಉಳಿದ ಚಿತ್ರಮಂದಿರಗಳಲ್ಲಿ ಭದ್ರವಾಗಿ ನೆಲೆಯೂರಿದೆ. ಶಶಾಂಕ್ ಮತ್ತು ಅಜೆಯ್ ರಾವ್ ನಿರ್ದೇಶಕ - ನಟ ಜೋಡಿ ಗೆಲುವಿನ ಸಂಭ್ರಮದಲ್ಲಿದ್ದಾರೆ.

ಸನ್ ಆಫ್ ಸತ್ಯಮೂರ್ತಿ ಟ್ರಬಲ್

ರಾಜ್ಯಾದ್ಯಂತ 100ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಅಬ್ಬರಿಸ್ತಾ ಇರೋ 'ಸನ್ ಆಫ್ ಸತ್ಯಮೂರ್ತಿ' ಗೆಲುವಿನ ಓಟ ಮುಂದುವರಿಸಿರೋದು ಕನ್ನಡ ಸಿನಿಮಾಗಳಿಗೆ ನುಂಗಲಾರದ ತುತ್ತಾಗಿದೆ.

ಥಿಯೇಟರ್ ಗಳ ಕೊರತೆ

ಇದರಿಂದಾಗಿ ಬೇಸಿಗೆ ರಜೆಯ ಸಮಯದಲ್ಲಿ 50 ವಾರಕ್ಕೆ ಐದರಂತೆ ತೆರೆಗೆ ಬರ್ತಿದ್ರೂ ಥಿಯೇಟರ್ ಗಳ ಕೊರತೆಯಿಂದ ಪರದಾಡ್ತಿವೆ. ಒಂದು ಕಡೆ ಕನ್ನಡ ಸಿನಿಮಾಗಳೇ ಗೆಲ್ತಿರೋ ಖುಷಿಯಾದ್ರೆ ಮತ್ತೊಂದು ಕಡೆ ನಮ್ಮ ಸಿನಿಮಾಗಳಿಂದಾನೆ ನಮ್ಮ ಸಿನಿಮಾಗಳಿಗೆ ಥಿಯೇಟರ್ ಇಲ್ಲದಂತಾಗಿದೆ.

English summary
Kannada films are facing theater problem again. This is a new type of challege for the movies. Five big budget Kannada movies are occupied almost all theaters in Karnataka. Another 50 movies are waiting for release. But these movies are facing shortage of theaters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada