»   » ಇಂದು(ಫೆ.16) 'ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಲಿ' ಟ್ವಿಟರ್ ಅಭಿಯಾನ

ಇಂದು(ಫೆ.16) 'ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಲಿ' ಟ್ವಿಟರ್ ಅಭಿಯಾನ

Posted By:
Subscribe to Filmibeat Kannada
ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾ ಗಳು ತೆರೆಗೆ ಬರುತ್ತವಾ ಎನ್ನುವ ಪ್ರಶ್ನೆ ಹಲವು ವರ್ಷದಿಂದ ಸ್ಯಾಂಡಲ್ ವುಡ್ ನಲ್ಲಿ ಗಿರಕಿ ಹೊಡೆಯುತ್ತಿತ್ತು. ಚರ್ಚೆಗೆ ಮಾತ್ರ ಸೀಮಿತವಾಗಿದ್ದ ಡಬ್ಬಿಂಗ್ ವಿಚಾರ ಇಂದು ಕಾರ್ಯರೂಪಕ್ಕೆ ಬರುತ್ತಿದೆ.['ಬಾಹುಬಲಿ-2' ನಲ್ಲಿ ಶಾರುಖ್: ಚಿತ್ರತಂಡ ಕೊಟ್ಟ ಉತ್ತರ ಇದು..]

ಹೌದು, ಇಂದು (ಫೆಬ್ರವರಿ 16) 'ಬಾಹುಬಲಿ 2 ಕನ್ನಡ ಕ್ಕೆ ಡಬ್ ಆಗಿ ಬರಲಿ' ಎಂಬ ಟ್ವಿಟರ್ ಅಭಿಯಾನ ನಡೆಯಲಿದ್ದು, ಪರಭಾಷಾ ಸಿನಿಮಾ ಗಳು ಕನ್ನಡಕ್ಕೆ ಡಬ್ ವಿಚಾರಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಕನ್ನಡ ಗ್ರಾಹಕರ ಕೂಟ ನಡೆಸಲಿರುವ 'ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಿ ಬರಲಿ' ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಹೇಗೆ, ಯಾವಾಗ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

'ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಿ ಬರಲಿ' ಟ್ವಿಟರ್ ಅಭಿಯಾನ

'ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಿ ಬರಲಿ' ಟ್ವಿಟರ್ ಅಭಿಯಾನ ಇಂದು ಸಂಜೆ 6:30 ರಿಂದ 8 ಗಂಟೆ ವರೆಗೆ ನಡೆಯಲಿದೆ.

ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಹೇಗೆ?

'ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಿ ಬರಲಿ' ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಳ್ಳಲು #Bahubali2InKannada ಹ್ಯಾಶ್ ಟ್ಯಾಗ್ ಬಳಸಿ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಬಹುದು.

'ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಿ ಬರಲಿ' ಟ್ವಿಟರ್ ಅಭಿಯಾನದ ಉದ್ದೇಶ

ಕನ್ನಡ ಗ್ರಾಹಕರ ಕೂಟದ ಸದಸ್ಯರು, ಪರಭಾಷಾ ಸಿನಿಮಾಗಳನ್ನು ನಮ್ಮ ಭಾಷೆಯಲ್ಲಿಯೇ ನೋಡಬೇಕು ಎನ್ನುವ ಉದ್ದೇಶದಿಂದ ''ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಿ ಬರಲಿ' ಟ್ವಿಟರ್ ಅಭಿಯಾನವನ್ನು ಕೈಗೊಂಡಿದ್ದಾರೆ. ಅಲ್ಲದೇ ಇತರೆ ಭಾಷೆ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬರುವುದರಿಂದ ಕನ್ನಡ ಚಿತ್ರಗಳ ವಿತರಕರಿಗೂ ಸಹಾಯಕವಾಗುತ್ತದೆ ಎಂದು ಕನ್ನಡ ಗ್ರಾಹಕರ ಕೂಟದ ಆನಂದ್ ಜಿ ಅವರು ಹೇಳಿದ್ದಾರೆ

ಕನ್ನಡಕ್ಕೆ ಡಬ್ ಆಗಿ ರಿಲೀಸ್ ಗೆ ರೆಡಿಯಾದ ಸಿನಿಮಾಗಳು

ಸದ್ಯದಲ್ಲಿ ತಮಿಳಿನ ಹೆಸರಾಂತ ನಟ ಅಜಿತ್ ಅವರ ಎರಡು ಚಿತ್ರಗಳು ರಿಲೀಸ್ ಗೆ ರೆಡಿ ಆಗಿವೆ. ಅಜಿತ್ ಅಭಿನಯದ 'ಎನ್ನೈ ಅರಿಂದಾಲ್' ಮತ್ತು 'ಆರಂಭಂ' ಕನ್ನಡಕ್ಕೆ ಡಬ್ಬಿಂಗ್ ಆಗಿದ್ದು. 'ಎನ್ನೈ ಅರಿಂದಾಲ್' ಕನ್ನಡದಲ್ಲಿ 'ಸತ್ಯದೇವ್ ಐಪಿಎಸ್' ಹೆಸರಿನಲ್ಲಿ ಸದ್ಯದಲ್ಲೇ ತೆರೆ ಕಾಣಲಿದೆಯಂತೆ.

English summary
Kannada Grahara Koota is demanding for 'Baahubali 2 dubbing in kannada'. A twitter campaign #Bahubali2InKannada is today(February 16) at 6:30 to 8 o clock.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada