For Quick Alerts
  ALLOW NOTIFICATIONS  
  For Daily Alerts

  ಧನಂಜಯ್ ಗೆ 'ಕೇಡಿ' ಎಂದ ಪ್ರಣಿತಾ: ಮೇಘನಾ, ಸಂಗೀತಾ ಫುಲ್ ಹ್ಯಾಪಿ

  By Bharath Kumar
  |

  ಡೈರೆಕ್ಟರ್ ಸ್ಪೆಷಲ್, ರಾಟೆ, ಬಾಕ್ಸರ್, ಜೆಸ್ಸಿ, ಎರಡನೇ ಸಲ, ಬದ್ಮಾಶ್....ಹೀಗೆ ಪ್ರತಿಯೊಂದು ಚಿತ್ರದಲ್ಲೂ ಒಂದೊಂದು ರೀತಿಯಲ್ಲಿ ಮೇಕ್ ಓವರ್ ಮಾಡಿಕೊಂಡು ಪ್ರೇಕ್ಷಕರ ಮುಂದೆ ಬರ್ತಿದ್ದ ನಟ ಧನಂಜಯ್. ಆಗಲೇ ಈ ಸ್ಪೆಷಲ್ ಸ್ಟಾರ್ ಗೆ ಹಲವು ಹುಡುಗಿಯರು ಫ್ಯಾನ್ಸ್ ಆಗಿದ್ದರು. ಅದರಲ್ಲಿ, ಸ್ಯಾಂಡಲ್ ವುಡ್ ನಟಿಯರು ಕೂಡ ಫಿದಾ ಆಗಿದ್ದರು ಎನ್ನುವುದು ವಿಶೇಷ.

  ನಾಯಕನಾಗಿ ಮೆಚ್ಚಿಗೆ ಗಳಿಸಿಕೊಂಡಿದ್ದ ನಟ ಈಗ ಖಳನಾಯಕನಾಗಿಯೂ ಅಬ್ಬರಿಸುವ ಸೂಚನೆ ನೀಡಿದ್ದಾರೆ. ದುನಿಯಾ ಸೂರಿ ನಿರ್ದೇಶನದ 'ಟಗರು' ಚಿತ್ರದಲ್ಲಿ ಧನಂಜಯ್ ವಿಲನ್ ಆಗಿ ಅಭಿನಯಿಸಿದ್ದಾರೆ. ಈಗಾಗಲೇ ಧನಂಜಯ್ ಅವರ ಫಸ್ಟ್ ಲುಕ್ ಸಖತ್ ಹವಾ ಸೃಷ್ಟಿಸಿದೆ.

  ಧನಂಜಯ್ 'ಕಿಲ್ಲಿಂಗ್' ಲುಕ್ ಗೆ ಅಭಿಮಾನಿಗಳಿಂದ 'ಡೆಡ್ಲಿ' ಕಾಮೆಂಟ್ಸ್.!

  ಇದೀಗ, 'ಟಗರು' ಚಿತ್ರದ 'ಬಲಮ' ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಧನಂಜಯ್ ಮತ್ತು ವಸಿಷ್ಠ ಸಿಂಹ ಅಬ್ಬರಕ್ಕೆ ಸ್ಯಾಂಡಲ್ ವುಡ್ ನಟಿಯರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಪ್ರಣಿತಾ ಸುಭಾಷ್, ಮೇಘನಾ ರಾಜ್, ಸಂಗೀತ ಭಟ್ ಸೇರಿದಂತೆ ಹಲವರು ಮೆಚ್ಚಿಕೊಂಡಿದ್ದಾರೆ. ಮುಂದೆ ಓದಿ.....

  'ಕೇಡಿ' ಎಂದ ಪ್ರಣಿತಾ

  'ಕೇಡಿ' ಎಂದ ಪ್ರಣಿತಾ

  'ಟಗರು' ಚಿತ್ರದ 'ಬಲಮ' ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಈ ಹಾಡಿನಲ್ಲಿ ಧನಂಜಯ್ 'ರಾ' ಸ್ಟೈಲ್ ನಲ್ಲಿ ಘರ್ಜಿಸಿದ್ದಾರೆ. ಈ ಹಾಡನ್ನ ನೋಡಿದ ನಟಿ ಪ್ರಣಿತಾ ಸುಭಾಷ್ ''ಕೇಡಿಯಾಗಿ ಡಾಲಿ ಸೂಪರ್'' ಎಂದು ಕಾಮೆಂಟ್ ಮಾಡಿದ್ದಾರೆ.

  ಮೇಘನಾ ರಾಜ್ ಫಿದಾ

  ಮೇಘನಾ ರಾಜ್ ಫಿದಾ

  ಪ್ರತಿಯೊಂದು ಪಾತ್ರಗಳಲ್ಲಿಯೂ ಅದ್ಭುತ ಅಭಿನಯ ನೀಡುವ ಧನಂಜಯ್, 'ಡಾಲಿ' ಪಾತ್ರದ ನಂತರ ಮತ್ತಷ್ಟು ಯಶಸ್ಸು ಸಿಗಲಿದೆ ಎಂಬ ಭರವಸೆ ನನಗಿದೆ ಎಂದು ಮೇಘನಾ ರಾಜ್ ಹೊಗಳಿದ್ದಾರೆ.

  ಸಂಗೀತಾ ಭಟ್ ಬೌಲ್ಡ್

  ಸಂಗೀತಾ ಭಟ್ ಬೌಲ್ಡ್

  'ಟಗರು' ಚಿತ್ರದ ಬಲಮ ಹಾಡು ನೋಡಿದೆ. ನಿಜಕ್ಕೂ ಇದು ಅದ್ಭುತವಾಗಿದೆ ಎಂದು ಧನಂಜಯ್ ಜೊತೆ ನಾಯಕಿಯಾಗಿ ನಟಿಸಿದ್ದ ಸಂಗೀತ ಭಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  'ಬಲಮ' ಮೆಚ್ಚಿದ ಜನ

  'ಬಲಮ' ಮೆಚ್ಚಿದ ಜನ

  'ಟಗರು' ಚಿತ್ರದ ಬಲುಮ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಪ್ರೇಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಹಾಡಿನಲ್ಲಿ ವಸಿಷ್ಠ ಮತ್ತು ಧನಂಜಯ್ ಅವರ ಪಾತ್ರದ ಪರಿಚಯ ಮಾಡಲಾಗಿದ್ದು, ಇಬ್ಬರು ರಾ ಸ್ಟೈಲ್ ನಲ್ಲಿ ಅಬ್ಬರಿಸಿದ್ದಾರೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ.

  English summary
  Kannada Actress meghana raj, sangeetha bhatt, pranitha subhash has taken her twitter account to express their happiness about dhananjaya character in tagaru. hatric hero shiva rajkumar lead role in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X