For Quick Alerts
  ALLOW NOTIFICATIONS  
  For Daily Alerts

  'ಕಬಾಲಿ'ಯ ಕಂಡಕ್ಟರ್ ದಿನಗಳು ಕನ್ನಡಿಗ ಕಂಡಂತೆ!

  By ಜನಾರ್ಧನ ರಾವ್ ಸಾಳಂಕೆ
  |
  ರಜಿನಿಕಾಂತ್ ತಮ್ಮ ರಾಜಕೀಯ ಪ್ರವೇಶವನ್ನ ಖಚಿತಪಡಿಸಿದ್ದಾರೆ | Filmibeat Kananda

  ಇಡೀ ಭಾರತೀಯ ಚಿತ್ರರಂಗದಲ್ಲಿ ಯಾವುದೇ ಚಿತ್ರ ಪಡೆಯದಷ್ಟು ಪ್ರಚಾರವನ್ನು ಗಿಟ್ಟಿಸಿ ರಜನಿಕಾಂತ್ ಅವರ 'ಕಬಾಲಿ' ಸುನಾಮಿಯಂತೆ ಅಪ್ಪಳಿಸಿದೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ತೆರೆದ ಪುಟದಂತಿರುವ ರಜನಿ ಅವರು ಉತ್ತುಂಗ ತಲುಪಲು ಏನೆಲ್ಲ ಕಷ್ಟಪಟ್ಟಿದ್ದಾರೆ ಎಂಬುದು ಕೂಡ ಜನರಿಗೆ ತಿಳಿದಿದೆ. ಅವರು ಬೆಂಗಳೂರಿನಲ್ಲಿ ಕಂಡಕ್ಟರಾಗಿದ್ದಾಗ ಹೇಗಿದ್ದರು, ಸ್ಟೈಲಿಶ್ ಜೀವನಶೈಲಿ ಹೇಗಿತ್ತು ಎಂಬುದನ್ನು ಅವರನ್ನು ಹತ್ತಿರದಿಂದ ಕಂಡಂಥ ಪತ್ರಕರ್ತ ಜನಾರ್ಧನ ರಾವ್ ಸಾಳಂಕೆ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ - ಸಂಪಾದಕ.

  ***
  ರಜನಿಕಾಂತ್ ಅವರ ಜನ್ಮನಾಮ ಶಿವಾಜಿರಾವ್ ಗಾಯಕ್ವಾಡ್. ಕನ್ನಡ ಚಿತ್ರರಂಗವಲ್ಲದೆ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿಯೂ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ ವಿಶ್ವವ್ಯಾಪ್ತಿ ಅಭಿಮಾನಿ ಬಳಗವನ್ನು ಪಡೆದಿದ್ದಾರೆ. ದೇವರು ಎಷ್ಟೇ ಆಸ್ತಿ-ಅಂತಸ್ತು ಕೊಟ್ಟರೂ ಸಹ ಇಂದಿಗೂ ಅವರು ತಮ್ಮ ಸ್ನೇಹಿತರ ಮನೆಯಲ್ಲಿ ಚಾಪೆ ಮತ್ತು ದಿಂಬಿನ ಮೇಲೆ ಮಲಗಲು ಇಷ್ಟ ಪಡುತ್ತಾರೆ. ಸರಳತನಕ್ಕೆ ಇವರು ಉದಾಹರಣೆ. ಇವರು ಬೆಂಗಳೂರು ಮಹಾನಗರ ಸಾರಿಗೆಯಲ್ಲಿ ನಿರ್ವಾಹಕರಾಗಿದ್ದುಕೊಂಡು ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು.['ಕಬಾಲಿ' ನೋಡಲು ಹೋಗಿ 'ಕುರಿ' ಆದ ಪ್ರೇಕ್ಷಕರು.!]

  1971ರ ಸಮಯದಲ್ಲಿ ರಜನಿ ಬಿ.ಟಿ.ಎಸ್ (ಈಗ ಬಿ.ಎಂ.ಟಿ.ಸಿ) ಸಾರಿಗೆಯಲ್ಲಿ ನಿರ್ವಾಹಕರಾಗಿ ಕೆಲಸಕ್ಕೆ ಸೇರಿಕೊಂಡರು. ಈ ಸಂಸ್ಥೆಯಲ್ಲಿ ಸುಮಾರು ಒಂದು ವರ್ಷ ಕೆಲಸ ಮಾಡಿರಬಹುದು. ನಾಟಕ ಮತ್ತು ಚಲನಚಿತ್ರಗಳ ಹಪಾಹಪಿ ಅವರಲ್ಲಿತ್ತು. ತಮ್ಮ ಕೆಲಸದ ಶಿಫ್ಟ್ ಮುಗಿಸಿ ಡಿಪೋ ಹೊರಗಡೆ ಬರಬೇಕಾದರೆ ಎದುರುಗಡೆ ಒಂದು ಚಿಕ್ಕ ಗೂಡಂಗಡಿಯಲ್ಲಿ ಇತ್ತು. ಅಲ್ಲಿ ಬೊಂಡ, ಬಜ್ಜಿ, ವಡೆ, ಚಿತ್ರಾನ್ನ, ಬೀಡಿ, ಸಿಗರೇಟು ಇತ್ಯಾದಿಗಳನ್ನು ಮಾರುತ್ತಿದ್ದರು. ಆ ಕಾಲದಲ್ಲಿ ರಜನಿಗೆ ಸಿಗರೇಟು ಚಿಮ್ಮಿಸಿ ಬಾಯಿಯಲ್ಲಿ ಕಚ್ಚಿ ಬೆಂಕಿ ಹಚ್ಚುವುದೆಂದರೆ ಬಹಳ ಇಷ್ಟ. ಗೂಡಂಗಡಿಯ ಬಳಿ ಬಂದು ತಮಗೆ ಪ್ರಿಯವಾದ ಟೀ ಮತ್ತು 'ಚಿಗರೇಟು' ಕೊಳ್ಳುತ್ತಿದ್ದರು. ಅಂಗಡಿಯ ಬಳಿ ಬರುತ್ತಿದ್ದಂತೆ "ರಾವ್ ಟೀ ಮತ್ತು ಚಿಗರೇಟು" ಕೊಡಪ್ಪ ಎಂದು ಕೇಳುತ್ತಿದ್ದರು.[ಕಬಾಲಿ 'ಬೆಂಕಿ' ಯಲ್ಲಿ ಚಳಿ ಕಾಯಿಸಿಕೊಂಡ ಸ್ಟಾರ್ ಗಳು]

  ಆ ಅಂಗಡಿಯನ್ನು ಪರಶುರಾಮ ರಾವ್ ಎಂಬ ಚಿಕ್ಕ ಹುಡುಗ ನೋಡಿಕೊಳ್ಳುತ್ತಿದ್ದ. ಈತ ಅದೇ ಬಿ.ಟಿ.ಎಸ್ ನಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರರಾವ್ ಸಾಳಂಕೆಯವರ ಜೇಷ್ಠ ಪುತ್ರ. ರಜನಿ ನೋಡಲು ಸಣ್ಣಗೆ, ಉದ್ದಕೆ ಮತ್ತು ಸಾಧಾರಣ ಮೈ ಬಣ್ಣದ ಸ್ಟೈಲಿಶ್ ವ್ಯಕ್ತಿಯಾಗಿದ್ದರು. ಸೈಡ್ ಕ್ರಾಪ್ ಮಾಡಿಕೊಳ್ಳುತ್ತಿದ್ದರು. ಗಾಳಿಗೆ ಕೂದಲು ಕಣ್ಣ ಮೇಲೆ ಜಾರಿದರೆ ತಮ್ಮ ಕೈಯಿಂದ ಬಾಚಣಿಕೆಯಂತೆ ಹಿಂದೆ ತಳ್ಳುತ್ತಿದ್ದರು. ಅದು ಆತನ ಸ್ಟೈಲ್.

  Kannada journalist recalls Rajinikanth's olden days in Bengaluru

  ಕೆಲಸದ ಸಂದರ್ಭದಲ್ಲಿ ಟಿಕೆಟ್ ಹರಿದು ಕೊಡುವುದು, ಪೆನ್ನನ್ನು ಗಾಳಿಯಲ್ಲಿ ಚಿಮ್ಮಿಸಿ ಹಿಡಿದು ಟ್ರಿಪ್ ಶೀಟ್ ಮೇಲೆ ಎಂಟ್ರಿ ಹಾಕುತಿದ್ದುದು, ಫುಟ್ ಬೋರ್ಡ್ ಮೇಲೆ ಒಂದು ಕಾಲು ಮೇಲೆ ಮತ್ತೊಂದು ಕಾಲು ಕೆಳಕ್ಕೆ ಬಿಟ್ಟು ನಿಲ್ಲುತ್ತಿದ್ದ ಭಂಗಿ, ಸಿಗರೇಟ್ ಹಚ್ಚಿ ಹೊಗೆ ಬಿಡುತ್ತಿದ್ದ ಸ್ಟೈಲ್ ನೋಡುಗರನ್ನು ರಂಜಿಸುತಿತ್ತು. ನೀವೇಕೆ ಚಿತ್ರಗಳಲ್ಲಿ ಪಾರ್ಟ್ ಮಾಡಬಾರದು ಎಂಬ ಉಚಿತ ಸಲಹೆ ಪ್ರಯಾಣಿಕರಿಂದ ಬರುತಿತ್ತು.[ಟ್ವಿಟ್ಟರ್ ವಿಮರ್ಶೆ: ರಜನಿ ಓಕೆ ಆದ್ರೆ 'ಕಬಾಲಿ' ಅಷ್ಟಕಷ್ಟೆ.!]

  ನೋಡಲು ಸ್ವಲ್ಪ ಒರಟು ಸ್ವಭಾವದ ವ್ಯಕ್ತಿ ಎನ್ನಿಸಿದರೂ ಹಾಲಿನಂತಹ ಮನಸ್ಸು ಅವರದಾಗಿತ್ತು. ಇದೇ ರೀತಿ ರಾಮಚಂದ್ರ ರಾವ್ ಮತ್ತು ರಜನಿಕಾಂತ್ ಅವರ ಸ್ನೇಹ ಬೆಳೆದಿತ್ತು. ತರುವಾಯ 1973ರಲ್ಲಿ ಇವರು ಅಭಿನಯದಲ್ಲಿ ಡಿಪ್ಲೊಮಾ ಪಡೆಯಲು ಮದ್ರಾಸ್ ಚಲನಚಿತ್ರ ಸಂಸ್ಥೆ ಸೇರಿಕೊಂಡರು. ಇವರ ಚೊಚ್ಚಲ ಚಿತ್ರ "ಅಪೂರ್ವ ರಾಗಂಗಳ್"ನ ನಂತರ ಕೆಲ ಸಮಯ ತಮಿಳು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ತೃಪ್ತಿ ಪಡಬೇಕಾಯಿತು. ಇವತ್ತಿನ ದಿನಕ್ಕೆ ರಜನಿಕಾಂತ್ ಏನು ಎಂದು ಇದೇ ವಿಶ್ವಕ್ಕೆ ಗೊತ್ತು.


  ರಾಮಚಂದ್ರ ರಾವ್ ಅವರ ನಾಲ್ಕನೇ ಪುತ್ರ ಜನಾರ್ಧನ ರಾವ್ ಸಾಳಂಕೆ (ಪತ್ರಕರ್ತ). ಇವರು ಹೇಳುವ ಪ್ರಕಾರ "ಸ್ನೇಹ ಪೂರ್ವಕವಾಗಿ ನಮ್ಮ ತಂದೆಗೆ ಪೋಸ್ಟ್ ಕಾರ್ಡ್ ಅಳತೆಯ ಕಪ್ಪು ಬಿಳುಪಿನ ಫೋಟೋ ಕೊಟ್ಟು ಅದರ ಮೇಲೆ ತಮ್ಮ ಸಹಿ ಹಾಕಿದ್ದರು. ನಮ್ಮ ಮನೆಯಲ್ಲಿ ಬಹಳ ವರ್ಷ ರಜನಿಯ ಫೋಟೋ ಇಟ್ಟುಕೊಂಡಿದ್ದೆವು. ಆಮೇಲೆ ಅದು ಎಲ್ಲಿ ಹೋಯಿತು ಎಂದು ತಿಳಿಯಲಿಲ್ಲ. ಸ್ವಾಭಿಮಾನಿಯಾದ ನಮ್ಮ ತಂದೆ ಎಂದಿಗೂ ಸಹ ರಜನಿಯ ಸ್ನೇಹವನ್ನು ದುರುಪಯೋಗ ಪಡೆಸಿಕೊಳ್ಳಲಿಲ್ಲ. ರಜನಿ ಎಲ್ಲೇ ಇದ್ದರು ದೇವರು ಅವರಿಗೆ ಚೆನ್ನಾಗಿ ಇಟ್ಟರಲಿ ಎಂದು ಹರಸುತ್ತಿದ್ದರು. ನಾನು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ನಮ್ಮ ತಂದೆ ಈ ವಿಷಯಗಳನ್ನು ಹೇಳುತ್ತಿದ್ದದ್ದು ಇನ್ನೂ ನನ್ನ ಮನದಲ್ಲಿ ಹಸಿರಾಗಿದೆ. ಆದರೆ ಇಂದು ನನ್ನ ತಂದೆ ರಾಮಚಂದ್ರ ರಾವ್ ಮತ್ತು ನನ್ನ ಅಣ್ಣ ಪರಶುರಾಮ ರಾವ್ ಇಬ್ಬರೂ ಇಲ್ಲ. ರಜನಿಯ ನೆನಪಾದಾಗಲೆಲ್ಲ ಈ ವಿಷಯ ರಜನಿಯ ದಿನಗಳು ನೆನಪಾಗುತ್ತವೆ. ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಈ ವಿಷಯಗಳು ಬಹುಷಃ ನೆನಪಿರಬಹುದೆಂದು ಭಾವಿಸುವೆ". [ಶಿಕ್ಷಕಿಯ ಕಷ್ಟಕ್ಕೆ ಮಿಡಿದ ರಜನಿಕಾಂತ್ ಹೃದಯ!]


  (ಜನಾರ್ಧನ ರಾವ್ ಸಾಳಂಕೆ ಯವರು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಬಗ್ಗೆ 4 ಪುಸ್ತಕಗಳನ್ನು ಬರೆದಿದ್ದಾರೆ. ವಿಷ್ಣು ಅವರ ನಿವಾಸದಲ್ಲಿ ಅಂತಿಮ ಸಂದರ್ಶನ್ ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ತಾತ ಮಾಧವ ರಾವ್ ಸಾಳಂಕೆ ಆ ಕಾಲಕ್ಕೆ ಗುಬ್ಬಿ ನಾಟಕ ಕಂಪನಿಯಲ್ಲಿ ಲಾಟೀನು (ಟಾರ್ಚ್-ಬೆಳಕು) ವ್ಯವಸ್ಥೆ ಮಾಡುವ ಕೆಲಸ ಮಾಡುತ್ತಿದ್ದರು)
  English summary
  Kannada journalist Janardhan Rao Salanke has recalled super star Rajinikanth's olden days in Bengaluru as conductor. The writer's father Ramachandra Rao worked with Rajinikanth as bus driver. 'ಕಬಾಲಿ'ಯ ಕಂಡಕ್ಟರ್ ದಿನಗಳು ಕನ್ನಡಿಗ ಕಂಡಂತೆ!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X