TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ಕಂಕಣ'ದ ಕವಿರಾಜನಿಗೆ ಕನ್ನಡಿಗರು ವಿಶ್ ಮಾಡಿ
ಸ್ಯಾಂಡಲ್ ವುಡ್ ನಲ್ಲಿ ಹಿಂದಿನಿಂದಲೂ ಸಾಹಿತ್ಯ ದ ವಿಚಾರಕ್ಕೆ ಬಂದಾಗ ಕವಿರಾಜ್ ಅವರ ಹೆಸರು ಎಲ್ಲೆಡೆ ಕೇಳಿ ಬರುತ್ತಿತ್ತು, ಯಾಕಂದ್ರೆ ಮನಸ್ಸಿಗೆ ತಾಕುವಂತೆ ಸಾಹಿತ್ಯ ಬರೆಯೋದ್ರಲ್ಲಿ ಕವಿರಾಜ್ ಅವರದು ಎತ್ತಿದ ಕೈ ಅಂತ ಸಾಹಿತ್ಯ ಪ್ರಿಯರ ಅಭಿಪ್ರಾಯ.
ಅಂದ ಹಾಗೆ ಸ್ಯಾಂಡಲ್ ವುಡ್ ನ ಅಚ್ಚು-ಮೆಚ್ಚಿನ ಕವಿ ಸಾಹಿತಿಗಳಾದ ಕವಿರಾಜ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಸಂಗೀತ ನಿರ್ದೇಶಕ ಗುರುಕಿರಣ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಾಹಿತಿ ಕವಿರಾಜ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕರಿಯ' ಚಿತ್ರದ 'ನನ್ನಲಿ ನಾನಿಲ್ಲ ಮನಸ್ಸಲಿ ನೀನೆಲ್ಲಾ' ಹಾಡಿಗೆ ಸಾಹಿತ್ಯ ಬರೆಯುವ ಮೂಲಕ ತಮ್ಮ ಸಾಹಿತ್ಯ ಜರ್ನಿ ಪ್ರಾರಂಭಿಸಿದರು. [ಸಹಸ್ರ ಸಂಭ್ರಮದಲ್ಲಿ ಕನ್ನಡ ಗೀತಸಾಹಿತಿ 'ಕವಿರಾಜ್]
ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ಯಡಿಯೂರು ಎನ್ನುವ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ಇವರು ಹುಟ್ಟೂರಿನಲ್ಲಿಯೇ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿ, ಶಿವಮೊಗ್ಗ ಡಿ.ವಿ.ಎಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿ, ಸಹ್ಯಾದ್ರಿ ಕಾಲೇಜು ಶಿವಮೊಗ್ಗದಲ್ಲಿ ಬಿ.ಎಸ್ಸಿ ಪದವಿ ಪಡೆದರು.
ಚಿಕ್ಕಂದಿನಿಂದಲೇ ಸಾಹಿತ್ಯದ ಬಗ್ಗೆ ಅಪಾರ ಒಲವು ಮೂಡಿಸಿಕೊಂಡಿದ್ದ, ಕವಿರಾಜ್ ಕಾಲೇಜು ದಿನಗಳಲ್ಲಿಯೇ ಕಥೆ-ಕವನ ಗೀಚುತ್ತಿದ್ದರಂತೆ ಮಾತ್ರವಲ್ಲದೇ ಪ್ರಶಸ್ತಿ ಕೂಡ ಗಿಟ್ಟಿಸಿಕೊಳ್ಳುತ್ತಿದ್ದರಂತೆ.
ತದನಂತರ ಹಿಂತಿರುಗಿ ನೋಡದೇ ಚಿತ್ರರಂಗದಲ್ಲಿ ಮುನ್ನಡೆದ ಕವಿರಾಜ್ ಸಾಹಿತ್ಯ ಬರಹಗಾರನಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಅನೇಕ ಪ್ರಶಸ್ತಿ ಕೂಡ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.['ಆಕ್ಷನ್ ಕಟ್ ರಾಜ'ನಾಗಲಿರುವ ಚಿತ್ರಸಾಹಿತಿ ಕವಿರಾಜ್]
2011 ರಲ್ಲಿ 'ಸಂಜು ವೆಡ್ಸ್ ಗೀತಾ' ಚಿತ್ರದ 'ಗಗನವೇ ಬಾಗಿ' ಹಾಡಿಗೆ ಅತ್ಯುತ್ತಮ ಸಾಹಿತ್ಯ ಬರಹಗಾರ ಅಂತ ಕವಿರಾಜ್ ಅವರಿಗೆ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಆವಾರ್ಡ್ ಕೂಡ ಸಂದಿದೆ.
ಜೊತೆಗೆ 'ಸಂಜು ವೆಡ್ಸ್ ಗೀತಾ' ಹಾಗೂ 'ಆಪ್ತರಕ್ಷಕ' ಚಿತ್ರಕ್ಕೆ ಫಿಲ್ಮ್ ಫೇರ್ ಆವಾರ್ಡ್ ಹಾಗೂ ಸತತ ಮೂರು ಬಾರಿ ಮಿರ್ಚಿ ಮ್ಯೂಸಿಕ್ ಆವಾರ್ಡ್ ಪ್ರಶಸ್ತಿಯ ಗರಿ ಇವರ ಮುಡಿಗೇರಿದೆ.
ಕವಿರಾಜ್ ಅವರ ಸಾಹಿತ್ಯ ಜರ್ನಿಯಲ್ಲಿ ಇಲ್ಲಿಯವರೆಗೂ ಸುಮಾರು 1000 ಕ್ಕೂ ಮಿಕ್ಕಿ ಚಿತ್ರದ ಹಾಡುಗಳಿಗೆ ಸಾಹಿತ್ಯ ಜೊತೆಗೆ 2,500ಕ್ಕೂ ಹೆಚ್ಚು ಹಾಡುಗಳನ್ನು ಬರೆದ ಹೆಗ್ಗಳಿಕೆ ಇವರದು.
ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಂಬರೀಶ್ ಅಭಿನಯಿಸಿದ್ದ 'ಬುಲ್ ಬುಲ್' ಚಿತ್ರಕ್ಕೆ ಸಹನಿರ್ಮಾಪಕರಾಗಿ ಕೆಲಸ ಮಾಡಿದ ಅನುಭವ ಕೂಡ ಇವರಿಗಿದೆ. ಜೊತೆಗೆ ಸಾಮಾಜಿಕ ಜಾಲ ತಾಣಗಳಲ್ಲಿ 'ಕಂಕಣ' ಎನ್ನುವ ಅಭಿಯಾನವನ್ನು ಪ್ರಾರಂಭಿಸಿದ ಕ್ರೆಡಿಟ್ ಇವರಿಗೆ ಸಲ್ಲುತ್ತದೆ.
ಸದ್ಯಕ್ಕೆ ತೂಗುದೀಪ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಇವರ ಚೊಚ್ಚಲ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಗಿದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಬರಲಿದೆ.
ಒಟ್ಟಿನಲ್ಲಿ ಒಬ್ಬ ಸಾಹಿತಿಯಾಗಿ ನಿರ್ಮಾಪಕ ಇದೀಗ ನಿರ್ದೇಶಕರಾಗಿಯೂ ಚಿತ್ರರಂಗದಲ್ಲಿ ಮುನ್ನಡೆಯುತ್ತಿರುವ ಕವಿರಾಜ್ ಅವರಿಗೆ ನಮ್ಮ ಕಡೆಯಿಂದಲೂ ವಿಶ್ ಯೂ ಹ್ಯಾಪಿ ಬರ್ತ್‌ಡೇ.