twitter
    For Quick Alerts
    ALLOW NOTIFICATIONS  
    For Daily Alerts

    'ಅಕ್ಕ' ಸಮ್ಮೇಳನದಲ್ಲಿ 'ಕನ್ನಡ ಮಾತಾಡಿ' ಕಿರುಚಿತ್ರ ಸ್ಪರ್ಧೆ

    By Suneetha
    |

    ಕನ್ನಡ ನಾಡಿಗೆ ಏನಾದರೂ ಮಾಡಲೇಬೇಕು ಅಂತ ಕನ್ನಡಕ್ಕಾಗಿ ಹೋರಾಡುತ್ತಿರುವ ಕನ್ನಡದ ಕಣ್ಮಣಿಗಳಿಗೆ ಫಿಲ್ಮಿಬೀಟ್ ಕನ್ನಡ ಒಂದು ಸಿಹಿ ಸುದ್ದಿಯನ್ನು ಹೊತ್ತು ತಂದಿದೆ.

    ಹೌದು ಅಪ್ಪಟ ಕನ್ನಡ ಸಿನಿಮಾ ಮಾಡಿ ತಮ್ಮ ಪ್ರತಿಭೆಯನ್ನು ತೋರುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಬೇಕೆಂದು ಬಯಸುವವರಿಗೆ 'ಅಕ್ಕ ಕನ್ನಡ ಚಲನಚಿತ್ರ ಹಬ್ಬ' ಸಂಘಟನೆಯವರು ಅಪೂರ್ವ ಅವಕಾಶ ನೀಡಿದ್ದಾರೆ.['ಅಕ್ಕ' ಬ್ರಾಂಡ್ ಅಂಬಾಸಡರ್ ಆಗಿ ಪುನೀತ್]

    'Kannada Maathadi' short film contest

    'ಕನ್ನಡ ಮಾತಾಡಿ' ಅನ್ನೋ ಕಿರುಚಿತ್ರ ಸ್ಪರ್ಧೆಯೊಂದನ್ನು ಅಕ್ಕ ಬಳಗದವರು ಏರ್ಪಡಿಸಿದ್ದಾರೆ. ನಿಮ್ಮ-ನಿಮ್ಮಲ್ಲೇ ಲಭ್ಯವಿರುವ ಉಪಕರಣಗಳನ್ನು ಬಳಸಿಕೊಂಡು 3 ರಿಂದ 5 ನಿಮಿಷದೊಳಗಾಗಿ 'ಕನ್ನಡ ಮಾತಾಡಿ' ಅಂತ ಕಿರು ಚಿತ್ರ ತಯಾರು ಮಾಡಿ, ವಿಜೇತರಾದ ಸ್ಪರ್ಧಿಗಳಿಗೆ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಿಂದ ಮನ್ನಣೆ ಪಡೆಯುವ ಅವಕಾಶದ ಜೊತೆಗೆ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ದೊರಕಲಿದೆ.[ಅಕ್ಕ ನೋಂದಾವಣಿ ವಿಶೇಷ ದರ ಮಾ.15ರಂದು ಕೊನೆ]

    ನಿಯಮಗಳು ಹೀಗಿವೆ:

    • ಟೈಟಲ್ ಕಾರ್ಡ್: ನಿಮ್ಮ ತಂಡದ ಹೆಸರು, ದಿನಾಂಕ, ಸ್ಥಳ ಮತ್ತು ಕಿರುಚಿತ್ರದ ಹೆಸರು
    • ಟೈಟಲ್ ಕಾರ್ಡ್: ಈ ಕಿರುಚಿತ್ರವನ್ನು ಅಕ್ಕ ಚಲನಚಿತ್ರ ಹಬ್ಬ 2016 ಕ್ಕೆಂದು ಚಿತ್ರೀಕರಿಸಲಾಗಿದೆ. ಅಂತ ಹೆಸರು ಕೊಡಬೇಕು.
    • ಕಿರುಚಿತ್ರದ ವಿಡಿಯೋ ಫೈಲ್ ಸೈಜ್ 600MB ಗಳಿಗೆ ಮೀರಬಾರದು.
    • ಕಾಲಾವಧಿ: 180 ರಿಂದ 300 ಸೆಕೆಂಡುಗಳು. (3 ರಿಂದ 5 ನಿಮಿಷಗಳು)
    • ವಿಡಿಯೋ ಫೈಲ್ ಮಾದರಿ: AVI, MPG, MOV, ASF, MPEG, XVID, MKV, MP4, WEBM, OGV,[ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ : ಲೇಖನ ಬರೆದು ಕಳಿಸಿ]
    'Kannada Maathadi' short film contest

    ಈ ಕಿರುಚಿತ್ರವನ್ನು ತಂಡದ ಸಂಫೂರ್ಣ ಮಾಹಿತಿಯ ಜೊತೆಗೆ [email protected] ಗೆ ಕಳುಹಿಸಿ. ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್ 15, 2016.

    ಕನ್ನಡ ಸಿನಿಮಾ ಮಾಡಬೇಕು ಅನ್ನೋ ಹುಮ್ಮಸ್ಸಿರುವವರು ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಿ. ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ....

    English summary
    Here is an apportunity to all aspiring film makers and those who want to do something for Kannada. 'Kannada Maathadi' short film contest By Akka Kannada Film Festival.
    Thursday, June 23, 2016, 14:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X