For Quick Alerts
  ALLOW NOTIFICATIONS  
  For Daily Alerts

  ನಿಜ ಜೀವನದಲ್ಲಿ ವಿಲನ್ ಆದ ಖಳನಟ: ಅತ್ಯಾಚಾರ ಪ್ರಕರಣದಲ್ಲಿ ಬಂಧನ

  |

  ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟ ಶೇಷಗಿರಿ ಬಸವರಾಜ್ ಎಂಬಾತನನ್ನು ಅತ್ಯಾಚಾರ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.

  ನಟ ಶೇಷಗಿರಿ ಬಸವರಾಜ್, ಯುವತಿಯೊಬ್ಬರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದ. ಆ ಯುವತಿಯೊಟ್ಟಿಗೆ ಅಸಭ್ಯವಾಗಿ ವರ್ತಿಸಿದ್ದ ಈ ಬಗ್ಗೆ ಯುವತಿಯು ಕೆಲ ದಿನಗಳ ಹಿಂದೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

  ಅತ್ಯಾಚಾರ, ಹಲ್ಲೆ, ವಂಚನೆ, ಅಶ್ಲೀಲ ಪದಗಳಿಂದ ನಿಂದನೆ ಆರೋಪಗಳನ್ನು ಯುವತಿಯು ನಟನ ವಿರುದ್ಧ ಮಾಡಿದ್ದರು.

  ಯುವತಿ ದೂರು ನೀಡಿದ ಬಳಿಕ ನಾಪತ್ತೆಯಾಗಿದ್ದ ಶೇಷಗಿರಿ ಬಸವರಾಜ್‌ಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಕೊನೆಗೂ ನಟನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಶೇಷಗಿರಿ ಬಸವರಾಜ್ ಮೈಸೂರಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದು, ಆತನನ್ನು ಬೆಂಗಳೂರಿಗೆ ಕರೆತರಲಾಗಿದೆ.

  ಬ್ಯಾಂಕ್ ಉದ್ಯೋಗಿ ಆಗಿದ್ದ ಶೇಷಗಿರಿ ಬಸವರಾಜ್ ಬ್ಯಾಂಕ್ ಉದ್ಯೋಗ ಬಿಟ್ಟು ಸಿನಿಮಾಗಳಲ್ಲಿ ನಟನೆ ಮಾಡಲು ಆರಂಭಿಸಿದ. ಕನ್ನಡದ 'ಡಾರ್ಕ್', 'ಸಸ್ಪೆನ್ಸ್', 'ಕಿಲಾಡಿಗಳು', 'ಆಶಿಕಿ 3' ಇನ್ನೂ ಕೆಲವು ಸಿನಿಮಾಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ಶೇಷಗಿರಿ ಬಸವರಾಜ್ ನಟಿಸಿದ್ದಾನೆ.

  English summary
  Kannada movie actor Sheshagiri Basavaraj arrested in rape case. Bengaluru Subrahmanya Nagar police arrested Sheshagiri Basavaraj in Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X