»   » ಆಗಸ್ಟ್ 14ಕ್ಕೆ ತೆರೆಯ ಮೇಲೆ 'ಬುಗುರಿ' ಆಡಿಸಲಿರುವ ಚಿನ್ನದ ಹುಡುಗ

ಆಗಸ್ಟ್ 14ಕ್ಕೆ ತೆರೆಯ ಮೇಲೆ 'ಬುಗುರಿ' ಆಡಿಸಲಿರುವ ಚಿನ್ನದ ಹುಡುಗ

Posted By:
Subscribe to Filmibeat Kannada

ಮಳೆ ಹುಡುಗನ 'ಬುಗುರಿ' ಆಟಕ್ಕೆ ಡೇಟ್ ಪಕ್ಕಾ ಆಗಿದೆ. ಆಗಸ್ಟ್ 14 ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್, 'ಪ್ರೀತಿಯ ಸುತ್ತಾ ಸುತ್ತುವ', 'ಬುಗುರಿ' ಯ ಜೊತೆ ನಿಮ್ಮ ಮುಂದೆ ಹಾಜರಾಗಲಿದ್ದಾರೆ. ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ದೇಶಕ ಎಂ.ಡಿ. ಶ್ರೀಧರ್ ಹಾಗೂ ನಿರ್ಮಾಪಕ ಗೋಪಾಲಕೃಷ್ಣ ನಿರ್ಧರಿಸಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರ 25ನೇ ಚಿತ್ರವಾದ 'ಬುಗುರಿ' ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಚಿನ್ನದ ಹುಡುಗನ ಈ ವರ್ಷದ ಬಹುನಿರೀಕ್ಷಿತ ಚಿತ್ರದಲ್ಲಿ ಪ್ರೀತಿ ಜೊತೆಗೆ ಸಾಧನೆ ಹೈಲೈಟ್ ಅಂತೆ. [ಗೋಲ್ಡನ್ ಸ್ಟಾರ್ ಜೊತೆ ಬುಗುರಿ ಆಡಲಿರುವ ಎರಿಕಾ]


Kannada movie 'Buguri' releasing on August 14th

ಈಗಾಗಲೇ 'ಬುಗುರಿ' ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದು, ಆಗಸ್ಟ್ 14 ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. 'ಚೆಲ್ಲಾಟ', 'ಕೃಷ್ಣ', ದಂತಹ ಹಿಟ್ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಎಂ.ಡಿ.ಶ್ರೀಧರ್ ಹಾಗೂ ಗಣೇಶ್ ಕಾಂಬಿನೇಷನ್ ನಲ್ಲಿ 'ಬುಗುರಿ' ಪ್ರೇಕ್ಷಕರನ್ನು ಕಮಾಲ್ ಮಾಡಲು ಹೊರಟಿದೆ.


ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ಬಾಲಿವುಡ್ ಬೆಡಗಿ ರೀಚಾ ಪನೈ ಹಾಗೂ 'ನಿನ್ನಿಂದಲೇ ಸೋತೇ ಒಪ್ಪಿಕೋ' ಅಂದ ಎರಿಕಾ ಫರ್ನಾಂಡಿಸ್ ಚಿನ್ನದ ಹುಡುಗನ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಮೊದಲ ನೋಟಕ್ಕೆ 'ಬುಗುರಿ' ಒಂಥರಾ ತ್ರಿಕೋನ ಪ್ರೇಮಕಥೆ ಇದ್ದಂತೆ ಕಾಣುತ್ತದೆ. ['ಬುಗುರಿ' ಗೆ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ವಾಯ್ಸ್]


Kannada movie 'Buguri' releasing on August 14th

ಗೋಲ್ಡನ್ ಸ್ಟಾರ್ ಗಣೇಶ್ ಎಂದಿನಂತೆ ಲವರ್ ಬಾಯ್ ಲುಕ್ ನಲ್ಲಿ ಮಿಂಚಿದ್ದು, ಪ್ರೀತಿ, ಸೆಂಟಿಮೆಂಟ್, ಎಮೋಷನಲ್ ಹಾಗೂ ಪಕ್ಕಾ ಫ್ಯಾಮಿಲಿ ಎಂರ್ಟಟೈನ್ಮೆಂಟ್ ನ ಹೂರಣವೇ 'ಬುಗುರಿ' ಚಿತ್ರದಲ್ಲಿ ಇದೆಯಂತೆ.[ಗಣೇಶ್ ಬರ್ತಡೆಗೆ 'ಬುಗುರಿ' ಟ್ರೈಲರ್ ಗಿಫ್ಟ್]


ವಿಶೇಷವಾಗಿ ಕಾರ್ಕಳ, ಮಲ್ಪೆ, ಮಣಿಪಾಲ್, ಮಂಗಳೂರು, ಬೆಂಗಳೂರು ಮುಂತಾದೆಡೆ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಮಲೇಷ್ಯಾ ದಲ್ಲಿ ಚಿತ್ರದ ಎರಡು ಹಾಡುಗಳನ್ನು ಚಿತ್ರೀಕರಿಸಲಾಗಿದೆ.


ಮಿಕ್ಕಿ.ಜೆ.ಮೇಯರ್ ಮ್ಯೂಸಿಕ್ ಕಂಪೋಸೀಷನ್ ನಲ್ಲಿ 'ಬುಗುರಿ' ಯ ಸುಂದರ ಹಾಡುಗಳು ಸಖತ್ ಆಗಿ ಮೂಡಿ ಬಂದಿವೆ. ಇನ್ನುಳಿದಂತೆ ಸಾಧು ಕೋಕಿಲ ಅವರ ಕಾಮಿಡಿ ಪಂಚ್ ಪ್ರೇಕ್ಷಕನಿಗೆ ಇಷ್ಟವಾಗಬಹುದು. ಒಟ್ನಲ್ಲಿ 'ಬುಗುರಿ' ಪಕ್ಕಾ ಫ್ಯಾಮಿಲಿಯೊಂದಿಗೆ ಕುಳಿತು ನೋಡಬಹುದಾದ ಚಿತ್ರವಾಗಿದೆ.

English summary
Kannada movie 'Buguri' gets U/A Certificate from the Censor Board. And All set to releasing on August 14th. 'Buguri' features Kannada actor Ganesh, Actress Erica fernandes, Actress Richa Panai in the lead role, The movie is directed by M.D Sridhar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada