For Quick Alerts
  ALLOW NOTIFICATIONS  
  For Daily Alerts

  ಇದೇ ವಾರ ನಿಮ್ಮೆದುರಿಗೆ ಬರಲಿದೆ ನೀನಾಸಂ ಸತೀಶ್ ಅಭಿನಯದ 'ಚಂಬಲ್'

  |

  ಅಭಿನಯ ಚತುರ ನೀನಾಸಂ ಸತೀಶ್ ಅಭಿನಯದ 'ಚಂಬಲ್' ಸಿನಿಮಾ ಇದೇ ವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಮೊಟ್ಟಮೊದಲ ಬಾರಿಗೆ ಐಎಎಸ್ ಅಧಿಕಾರಿಯಾಗಿ ನೀನಾಸಂ ಸತೀಶ್ ಅಭಿನಯದ ಚಿತ್ರ 'ಚಂಬಲ್'.

  ಈಗಾಗಲೇ ಬಿಡುಗಡೆ ಆಗಿರುವ 'ಚಂಬಲ್' ಚಿತ್ರದ ಟ್ರೈಲರ್ ನೋಡಿ ಇದು ಡಿ.ಕೆ.ರವಿ ಜೀವನಚರಿತ್ರೆ ಆಧಾರಿತ ಚಿತ್ರ ಎಂದು ಹಲವರು ಭಾವಿಸಿದ್ದಾರೆ. ಇದರಿಂದ ಡಿ.ಕೆ.ರವಿ ತಾಯಿ ಕೂಡ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದರು. ಆದ್ರೆ, ಇದು ಒಬ್ಬ ವ್ಯಕ್ತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವ ಚಿತ್ರ ಅಲ್ಲ ಎಂದು ಚಿತ್ರತಂಡ ಸ್ಪಷ್ಟ ಪಡಿಸಿದೆ.

  ಜೇಕಬ್ ಫಿಲಂಸ್ ಲಾಂಛನದಲ್ಲಿ ದಿನೇಶ್ ಕುಮಾರ್ ಹಾಗೂ ಮಾಥ್ಯೂ ವರ್ಗೀಸ್ ಅವರು ನಿರ್ಮಿಸಿರುವ ಚಿತ್ರ 'ಚಂಬಲ್'.

  'ಚಂಬಲ್' ಚಿತ್ರದ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಡಿ.ಕೆ.ರವಿ ತಾಯಿ.!

  ಜೇಕಬ್ ವರ್ಗೀಸ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಹಾಗೂ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಶಶಿಕುಮಾರ್ ಛಾಯಾಗ್ರಹಣ ಹಾಗೂ ಭುವನ್ ಅವರ ಸಂಕಲನವಿರುವ ಈ ಚಿತ್ರಕ್ಕೆ ನಂದೀಶ್ ಚಿತ್ರಕಥೆ ಬರೆದಿದ್ದಾರೆ. ಬಿ.ಎ.ಮಧು ಹಾಗೂ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ.

  ನೀನಾಸಂ ಸತೀಶ್, ಸೋನುಗೌಡ, ಕಿಶೋರ್, ರೋಜರ್ ನಾರಾಯಣ್, ಅಚ್ಯುತಕುಮಾರ್, ಸರ್ದಾರ್ ಸತ್ಯ, ಮಹಂತೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಫೆಬ್ರವರಿ 22 ರಂದು 'ಚಂಬಲ್' ನಿಮ್ಮೆಲ್ಲರ ಮುಂದೆ ಬರಲಿದೆ. ಬೆಂಗಳೂರಿನ ಮೂವಿಲ್ಯಾಂಡ್ ಥಿಯೇಟರ್ ಸೇರಿದಂತೆ ರಾಜ್ಯಾದ್ಯಂತ ತೆರೆ ಕಾಣಲಿದೆ. ನೋಡಲು ನೀವು ರೆಡಿನಾ.?

  English summary
  Kannada Movie 'Chambal' to release on Feb 22nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X