For Quick Alerts
  ALLOW NOTIFICATIONS  
  For Daily Alerts

  ವಿಲನ್ ರವಿಶಂಕರ್ ತುಂಬಾ ಬದಲಾಗೋದ್ರು....!

  By Bharath Kumar
  |

  ಅಲೆಮಾರಿ ಸಂತು ನಿರ್ದೇಶನ ಮಾಡುತ್ತಿರುವ 'ಕಾಲೇಜ್ ಕುಮಾರ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. 'ಕೆಂಡಸಂಪಿಗೆ' ಖ್ಯಾತಿಯ ವಿಕ್ಕಿ ಚಿತ್ರದ ನಾಯಕನಾಗಿದ್ದು, 'ಕಿರಿಕ್ ಪಾರ್ಟಿ' ಖ್ಯಾತಿಯ ನಟಿ ಸಂಯುಕ್ತ ಹೆಗಡೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  ಇನ್ನು ಈ ಚಿತ್ರದಲ್ಲಿ ಕನ್ನಡದ ಖ್ಯಾತ ಖಳನಾಯಕ ರವಿಶಂಕರ್ ಮತ್ತು ನಟಿ ಶ್ರುತಿ ಕೂಡ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ದಿದ್ದಾರೆ. ಇದೇ ಮೊದಲ ಬಾರಿಗೆ ಶ್ರುತಿ ಅವರ ಜೊತೆಯಲ್ಲಿ ರವಿಶಂಕರ್ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ.

  'ಕಾಲೇಜ್ ಕುಮಾರ್'ನಿಗೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್

  ಅದ್ರಲ್ಲೂ, ರವಿಶಂಕರ್ ಅವರ ಗೆಟಪ್ ತುಂಬಾ ಕ್ಲಾಸ್ ಆಗಿದೆ. ಪ್ರತಿಯೊಂದು ಸಿನಿಮಾಗಳಲ್ಲೂ ಭಯಾನಕ, ಕ್ರೂರಿ, ರಗಡ್ ಆಗಿ ಕಾಣಿಸಿಕೊಳ್ಳುವ ರವಿಶಂಕರ್, ಕಾಲೇಜ್ ಕುಮಾರ್ ಚಿತ್ರದಲ್ಲಿ ಓರ್ವ ಜವಾಬ್ದಾರಿಯುತ ತಂದೆಯಾಗಿ ಮಿಂಚಲಿದ್ದಾರಂತೆ. ಹೀಗಾಗಿ, ರವಿಶಂಕರ್ ಅವರ ಪಾತ್ರದ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಹುಟ್ಟಿಕೊಂಡಿದೆ.

  ಅಂದ್ಹಾಗೆ, 'ಕಾಲೇಜ್ ಕುಮಾರ್' ಸಿನಿಮಾ ಒಬ್ಬ ಕಾಲೇಜ್ ಹುಡುಗನ ಲೈಫ್ ಸ್ಟೋರಿಯಂತೆ. ಟೈಟಲ್ ಹೇಳುವ ಹಾಗೆ ಪಕ್ಕಾ ಯೂತ್ ಓರಿಯೆಂಟೆಡ್ ಚಿತ್ರವಾಗಿದ್ದು, ಮಿಡಲ್ ಕ್ಲಾಸ್ ಮನೆಯ ಸೆಂಟಿಮೆಂಟ್ ಸ್ಟೋರಿ ಕೂಡ ಹೊಂದಿದೆಯಂತೆ.

  ಕನ್ನಡ ಚಿತ್ರಕ್ಕೆ ಕೈ ಎತ್ತಿದ ನಟಿ ಸಂಯುಕ್ತ ಬಗ್ಗೆ ಫೇಸ್ ಬುಕ್ ನಲ್ಲಿ ಲೇವಡಿ

  ಈ ಹಿಂದೆ 'ಅಲೆಮಾರಿ', 'ಡಾರ್ಲಿಂಗ್', 'ಡವ್' ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ಸಂತು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಉಳಿದಂತೆ, ಮುತ್ತಪ್ಪ ರೈ ಅವರ ಎಂ.ಆರ್.ಪಿಕ್ಚರ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಈ ಹಿಂದೆ 'ಜಾನ್ ಜಾನಿ ಜನಾರ್ಧನ್' ಚಿತ್ರವನ್ನ ನಿರ್ಮಿಸಿದ್ದ ಪದ್ಮನಾಭ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಬೆಂಗಳೂರಿನ ಸುತ್ತಾಮುತ್ತಾ ಮೊದಲ ಶೆಡ್ಯೂಲ್ ಶೂಟ್ ಮಾಡಲಿದ್ದಾರಂತೆ.

  English summary
  KendaSampige Fame Vicky and Kirik Party Samyuktha Hegade Starrer Kannada Movie 'College Kumar' first look poster is out. The movie is direted by Alemari Santhu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X