»   » 'ಕಾಲೇಜ್ ಕುಮಾರ್'ನಿಗೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್

'ಕಾಲೇಜ್ ಕುಮಾರ್'ನಿಗೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್

Posted By: Naveen
Subscribe to Filmibeat Kannada

'ಕಾಲೇಜ್ ಕುಮಾರ್'... ಹೆಸರು ಕೇಳ್ತಿದ್ದ ಹಾಗೆ 'ಓಂ' ಸಿನಿಮಾದ ಶಿವಣ್ಣ ನೆನಪಿಗೆ ಬರ್ತಾರೆ. ಅದಕ್ಕೆ ಕಾರಣ, ''ಕಾಲೇಜ್ ಕುಮಾರ್... ಕಿಸ್ಸಿಗೆ ಢಮಾರ್... ಕೇಳಣ್ಣ...'' ಹಾಡು. ಈಗ ಇದೇ ಹಾಡಿನ ಮೊದಲೆರಡು ಪದ ಚಿತ್ರದ ಶೀರ್ಷಿಕೆ ಆಗಿದೆ. ಚಂದನವನಕ್ಕೆ ಹೊಸ ಕಾಲೇಜ್ ಕುಮಾರ್ ಕಾಲಿಟ್ಟಿದ್ದಾನೆ.

'ಕೆಂಡಸಂಪಿಗೆ' ಸಿನಿಮಾದಲ್ಲಿ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದ ವಿಕ್ಕಿ ಈಗ ಕಾಲೇಜ್ ಕುಮಾರ್ ಆಗಿದ್ದಾರೆ.

'ಅಲೆಮಾರಿ ಸಂತು' ನಿರ್ದೇಶನದಲ್ಲಿ ಬರುತ್ತಿರುವ 'ಕಾಲೇಜ್ ಕುಮಾರ್' ಸಿನಿಮಾದ ಫೋಟೋಶೂಟ್ ಇತ್ತೀಚೆಗಷ್ಟೆ ನಡೆದಿತ್ತು. ಇಂದು (ಮೇ 1) ಸಿನಿಮಾದ ಮುಹೂರ್ತ ಕಾರ್ಯಕ್ರಮ ಸಹ ಗ್ರಾಂಡ್ ಆಗಿ ನೆರವೇರಿದೆ.

ನಟ ಕಿಚ್ಚ ಸುದೀಪ್ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ್ದಾರೆ. ಅಂದಹಾಗೆ, ಲೇಟೆಸ್ಟ್ 'ಕಾಲೇಜ್ ಕುಮಾರ್'ನ ಬಗ್ಗೆ ಒಂದಷ್ಟು ವಿವರ ಮುಂದಿದೆ ಓದಿ...

ಸುದೀಪ್ ಚಾಲನೆ

'ಕಾಲೇಜ್ ಕುಮಾರ್' ಸಿನಿಮಾದ ಮುಹೂರ್ತ ಇಂದು (ಮೇ 1) ಬೆಂಗಳೂರಿನ ಪ್ಯಾಲೇಸ್ ರೋಡ್ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ನೆರವೇರಿತು. ಸಿನಿಮಾದ ಮೊದಲ ದೃಶ್ಯಕ್ಕೆ ಕಿಚ್ಚ ಸುದೀಪ್ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಸಂತು ನಿರ್ದೇಶನ

ಈ ಹಿಂದೆ 'ಅಲೆಮಾರಿ', 'ಡಾರ್ಲಿಂಗ್', 'ಡವ್' ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ಸಂತು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಟೈಟಲ್ ಹೇಳುವ ಹಾಗೆ ಇದು ಪಕ್ಕಾ ಯೂತ್ ಓರಿಯೆಂಟೆಡ್ ಸಿನಿಮಾ.

ಕುಮಾರ್ ಜೊತೆ 'ಕಿರಿಕ್' ಹುಡುಗಿ

'ಕಿರಿಕ್ ಪಾರ್ಟಿ' ಚಿತ್ರದ ಭರ್ಜರಿ ಸಕ್ಸಸ್ ಬಳಿಕ ಸಂಯುಕ್ತ ಹೆಗಡೆ ಕಾಲೇಜ್ ಕುಮಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಫೋಟೋಶೂಟ್ ಆಗಿದ್ದು, ವಿಕ್ಕಿ ಮತ್ತು ಸಂಯುಕ್ತ ಜೋಡಿ ಸಖತ್ ಆಗಿ ಕಾಣ್ತಿದೆ.['ರೋಡೀಸ್'ನಲ್ಲಿ ಕಿಸ್ ಕೊಟ್ಟ 'ಕಿರಿಕ್' ಹುಡುಗಿ: ಬಯಲಾಯ್ತು ಸಂಯುಕ್ತ ಲವ್ ಸ್ಟೋರಿ!
]

ಮುತ್ತಪ್ಪ ರೈ ಬ್ಯಾನರ್ ನಲ್ಲಿ ನಿರ್ಮಾಣ

ಮುತ್ತಪ್ಪ ರೈ ಅವರ ಎಂ.ಆರ್.ಪಿಕ್ಚರ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಈ ಹಿಂದೆ 'ಜಾನ್ ಜಾನಿ ಜನಾರ್ಧನ್' ಚಿತ್ರವನ್ನ ನಿರ್ಮಿಸಿದ್ದ ಪದ್ಮನಾಭ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಒನ್ ಲೈನ್ ಸ್ಟೋರಿ

'ಕಾಲೇಜ್ ಕುಮಾರ್' ಸಿನಿಮಾ ಒಬ್ಬ ಕಾಲೇಜ್ ಹುಡುಗನ ಲೈಫ್ ಸ್ಟೋರಿಯಾಗಿದೆಯಂತೆ. ಜೊತೆಗೆ ಮಿಡಲ್ ಕ್ಲಾಸ್ ಮನೆಯ ಸೆಂಟಿಮೆಂಟ್ ಸ್ಟೋರಿ ಹೊಂದಿದೆಯಂತೆ.

ತಾರಬಳಗ

ಸಿನಿಮಾದ ಡಿಫರೆಂಟ್ ರೋಲ್ ಒಂದರಲ್ಲಿ ನಟ ರವಿಶಂಕರ್ ಕಾಣಿಸಿಕೊಳ್ತಿದ್ದಾರೆ. ಜೊತೆಗೆ ಇದೇ ಮೊದಲ ಬಾರಿಗೆ ನಟಿ ಶ್ರುತಿ ಜೊತೆಗೆ ರವಿಶಂಕರ್ ನಟಿಸುತ್ತಿದ್ದಾರೆ.

ಮುಂದುವರೆದ ಜನ್ಯ- ಸಂತು ಕಾಂಬಿನೇಷನ್

ಈ ಹಿಂದೆ ಸಂತು ನಿರ್ದೇಶನ ಮಾಡಿದ್ದ ಎಲ್ಲ ಸಿನಿಮಾಗಳಿಗೂ ಅರ್ಜುನ್ ಜನ್ಯ ಮ್ಯೂಸಿಕ್‌ ನೀಡಿದ್ರು. ಇನ್ನೂ ಈ ಚಿತ್ರದ ಮೂಲಕ ಸಹ ಮತ್ತೆ ಅರ್ಜುನ್ ಜನ್ಯ ಮತ್ತು ಸಂತು ಒಂದಾಗಿದ್ದಾರೆ.

ಚಿತ್ರೀಕರಣ ಯಾವಾಗ.. ?

ಇದೇ ತಿಂಗಳು ಅಂದ್ರೆ ಮೇ 9ರಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಒಂದೇ ಶೆಡ್ಯೂಲ್ ನಲ್ಲಿ ಬೆಂಗಳೂರಿನ ಸುತ್ತ ಮುತ್ತ 50 ದಿನ ಶೂಟಿಂಗ್ ಮಾಡುವ ಪ್ಲಾನ್ ನಲ್ಲಿದೆ ಚಿತ್ರತಂಡ.

English summary
Kannada director 'Alemaari' Santhu's new movie titled 'College Kumar' launched today (May 1st) in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada