»   » ತೆರೆಗೆ ಬರಲು ರೆಡಿಯಾಗುತ್ತಿದೆ 'ಫೇರ್ ಅಂಡ್ ಲವ್ಲಿ'

ತೆರೆಗೆ ಬರಲು ರೆಡಿಯಾಗುತ್ತಿದೆ 'ಫೇರ್ ಅಂಡ್ ಲವ್ಲಿ'

Posted By:
Subscribe to Filmibeat Kannada

ಚಿತ್ರದ ಶೀರ್ಷಿಕೆಯಿಂದಲೇ ಒಂದು ಆಪ್ಯಾಯಮಾನ ಸಂತೋಷವನ್ನು ನೀಡಿರುವ ನಿರ್ಮಾಪಕಿ ಡಾಕ್ಟರ್ ಶಿಲ್ಪಾ ರಮೇಶ್ ರಮಣಿ. ಅವರ ಜೇಡ್ ಪ್ಲಾಂಟ್ ಲಾಂಛನದಲ್ಲಿ ತಯಾರಾಗಿರುವ 'ಫೇರ್ ಅಂಡ್ ಲವ್ಲಿ' ಚಿತ್ರವನ್ನು ಸೆನ್ಸಾರ್ ಬಳಿ ಇಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಚಿತ್ರದ ನಿರ್ದೇಶಕ ರಘುರಾಮ್ ಅವರು 'ಫೇರ್ ಅಂಡ್ ಲವ್ಲಿ' ಚಿತ್ರಕ್ಕೆ 7.1 ಸೌಂಡ್ ಸಿದ್ಧತೆ ಸಹ ಅಳವಡಿಸಿ ಚಿತ್ರದ ಮೆರಗನ್ನು ಇನ್ನಷ್ಟು ತಾಂತ್ರಿಕವಾಗಿ ಹೆಚ್ಚಿಸಿದ್ದಾರೆ. ರಘುರಾಮ್ ಅವರು ಚಿತ್ರಕಥೆಯಲ್ಲಿ ಹೊಸ ಪ್ರಯತ್ನ ಮಾಡಿದ್ದಾರೆ. ಕನ್ನಡ ಸಿನಿಮಾ ಒಂದರಲ್ಲಿ ಕೆಲವು ಹಿರಿಯ ಕಲಾವಿದರುಗಳ ಮಿಮಿಕ್ರಿ ಉಪಯೋಗಿಸಿ ಶೀರ್ಷಿಕೆ ಮಾಡಿರುವುದು ಒಂದು ವಿಶೇಷ. [ತಾಜಾ ಅನುಭವದ 'ಫೇರ್ ಅಂಡ್ ಲವ್ಲಿ' ಹಾಡುಗಳು]

A still from movie Fair & Lovely

ತೆರೆಯ ಮೇಲೆ ಬರುವ ಪರಿಚಯ ಪ್ರತಿ ಕಲಾವಿದ, ತಂತ್ರಜ್ಞರಿಗೆ ಒಂದು ಪುಟ್ಟ ಮುನ್ನುಡಿ ಮಾಡಲಾಗಿದ್ದು ಆ ಮುನ್ನುಡಿಯನ್ನು ಕೆಲವು ಜನಪ್ರಿಯ ಕಲಾವಿದರ ಮಿಮಿಕ್ರಿಯಿಂದ ಅದನ್ನು ಕೇಳಬಹುದು. ಚಿತ್ರಕ್ಕೆ ಕಥೆಯನ್ನು ಒದಗಿಸಿರುವವರು ನಟ ಹಾಗೂ ಪತ್ರಕರ್ತ ಯತಿರಾಜ್.

ಫೇರ್ ಆಗಿ ಶ್ವೇತಾ ಶ್ರೀವತ್ಸ ಇದ್ದರೆ, ಲವ್ಲಿ ಆಗಿ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಇದ್ದಾರೆ. ಹಿರಿಯ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಪುತ್ರಿ ನಕ್ಷತ್ರಾ ಸಹ ಅಭಿನಯಿಸಿದ್ದು ಆನಂದಪ್ರಿಯ ಅವರು ಚುರುಕು ಸಂಭಾಷಣೆ ಹಾಗೂ ಚಿತ್ರಕಥೆ ಇದೆ.

ವಿ ಹರಿಕೃಷ್ಣ ಅವರ ಸಂಗೀತದ ಹಾಡುಗಳು ಈಗಾಗಲೇ ಭರ್ಜರಿ ಯಶಸ್ಸನ್ನು ಕಂಡಿವೆ. ರಿಂಗಾಗಿದೆ ನನ್ನೆದೆ ಫೋನು....ಅನಿರೀಕ್ಷಿತ ಲೈಫ್ ಅಲ್ಲಿ....ಹಾಗೆ ಒಂದು ಮಾತು ಹೇಳುವೆ....ಈ ಕಾಣದ ಕಣ್ಣಿಗೆ... ಹಾಡುಗಳು ಸಖತ್ ಮೇಲೋಡಿ ತುಂಬಿವೆ.

ಚಿತ್ರದ ನಾಯಕ, ನಾಯಕಿ ಅನೇಕ ಪ್ರದೇಶಗಳಲ್ಲಿ ಸಾವಿರಾರು ಸಿ ಡಿ ಗಳನ್ನು ಉಚಿತವಾಗಿ ನೀಡಿದ್ದಾರೆ. ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ, ಜೋನಿ ಹರ್ಷ ಅವರ ಸಂಕಲನ, ಮದನ್ ಹರಿಣಿ ಹಾಗೂ ಕಲೈ ಅವರ ನೃತ್ಯ ನಿರ್ದೇಶನವಿದೆ. (ಫಿಲ್ಮಿಬೀಟ್ ಕನ್ನಡ)

English summary
Kannada movie 'Fair & Lovely' is ready for censor. The movie directed by Raghuram. starring Prem Kumar, Shwetha Srivatsav, Nakshatra. V Harikrishna is the music director the movie produced by Dr Shilpa Ramesh Ramani.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada