»   » ರಾಕಿಂಗ್ ಸ್ಟಾರ್ ಯಶ್ 'ಗಜಕೇಸರಿ' ಚಿತ್ರದ ಹೈಲೈಟ್ಸ್

ರಾಕಿಂಗ್ ಸ್ಟಾರ್ ಯಶ್ 'ಗಜಕೇಸರಿ' ಚಿತ್ರದ ಹೈಲೈಟ್ಸ್

By: ಉದಯರವಿ
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಗಜಕೇಸರಿ' ಇದೇ ಶುಕ್ರವಾರ (ಮೇ.23) ತೆರೆಗೆ ದಾಂಗುಡಿ ಇಡುತ್ತಿದೆ. ಸರಿಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು ಪ್ರೇಕ್ಷಕರಲ್ಲಿ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.

ಭಾರಿ ಬಜೆಟ್ ನ ಪರಭಾಷಾ ಚಿತ್ರಗಳಾದ 'ಕೊಚಡಿಯಾನ್' (ತಮಿಳು) ಹಾಗೂ 'ಮನಂ' (ತೆಲುಗು) ಚಿತ್ರಗಳು 'ಗಜಕೇಸರಿ' ಚಿತ್ರದ ಜೊತೆಗೆ ಸ್ಪರ್ಧಿಸುತ್ತಿರುವುದು ಇನ್ನೊಂದು ವಿಶೇಷ. ಆದರೆ ತಮ್ಮ ಚಿತ್ರಕ್ಕೆ ಯಾವುದೇ ಚಿತ್ರ ಸ್ಪರ್ಧಿಯಲ್ಲ ಎಂದಿದ್ದಾರೆ ಯಶ್. [ಪರಭಾಷೆ ಚಿತ್ರಗಳಿಗೆ ಜಗ್ಗಲ್ಲ ಬಗ್ಗಲ್ಲ ಗಜಕೇಸರಿ]

ಈ ಚಿತ್ರದಲ್ಲಿ ಯಶ್ ಇದೇ ಮೊದಲ ಬಾರಿಗೆ ಯುದ್ಧವೀರನಾಗಿ ಕಾಣಿಸುತ್ತಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬದಲಾಗಿರುವ ಛಾಯಾಗ್ರಾಹಕ ಕೃಷ್ಣ ಅವರು ಕಣ್ಮನ ತಣಿಸುವಂತೆ ಚಿತ್ರವನ್ನು ತೆರೆಗೆ ತಂದಿದ್ದು ವಯನಾಡಿನ ರುದ್ರ ರಮಣೀಯ ಸನ್ನಿವೇಶಗಳನ್ನು ಪ್ರೇಕ್ಷಕರು ನಿರೀಕ್ಷಿಸಬಹುದು.

ಯಶ್ ವಿಭಿನ್ನ ಗೆಟಪ್ ಪ್ರಮುಖ ಆಕರ್ಷಣೆ

ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಾಹಣವಿದ್ದು ಚಿತ್ರದಲ್ಲಿ ಆನೆಗಳು, ಯಶ್ ಅವರ ವಿಭಿನ್ನ ಗೆಟಪ್ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿವೆ.

ಎರಡು ಭಿನ್ನ ಶೇಡ್ ಗಳಲ್ಲಿ ಯಶ್

ಚಿತ್ರದಲ್ಲಿ ಯಶ್ ಅವರು ಎರಡು ಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ಒಂದು ಯುದ್ಧವೀರನಾದರೆ ಇನ್ನೊಂದು ಲವರ್ ಬಾಯ್ ಪಾತ್ರ. ಚಿತ್ರತಂಡದ ಪ್ರಕಾರ, ಎರಡೂ ಶೇಡ್ ಗಳಿಗೆ ಸಮವಾದ ಪ್ರಾಮುಖ್ಯತೆ ನೀಡಲಾಗಿದೆಯಂತೆ.

ಅಣ್ಣಾವ್ರ ಗಂಧದಗುಡಿ ನೆನಪಿಸುವ ಯಶ್

ಗಂಧದಗುಡಿ (1973) ಚಿತ್ರದಲ್ಲಿ ವರನಟ ಡಾ.ರಾಜ್ ಕುಮಾರ್ ಅವರು "ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ.." ಎಂದು ಹಾಡಿದ ಗೀತೆ ಕೆಲವು ಸೆಕೆಂಡ್ ಗಳಲ್ಲಿ ಚಿತ್ರದಲ್ಲಿ ಬಂದುಹೋಗುತ್ತದೆ.

ಇನ್ನೊಂದು ಹೈಲೈಟ್ ಅಂಡರ್ ವಾಟರ್ ಸೀನ್

ಗಜಕೇಸರಿ ಚಿತ್ರದ ಇನ್ನೊಂದು ಹೈಲೈಟ್ ಎಂದರೆ ಅಂಡರ್ ವಾಟರ್ ಸೀನ್ ಗಳು. ಈ ಚಿತ್ರದ ಅಂಡರ್ ವಾಟರ್ ಸೀನ್ ಗಳು ವೆರೈಟಿಯಾಗಿದ್ದು ಪ್ರೇಕ್ಷಕರ ಮೈನವಿರೇಳಿಸುವುದಂತೂ ಗ್ಯಾರಂಟಿ.

ಸ್ಟೈಲಿಶ್ ಹೇರ್ ಸ್ಟೈಲ್ ನಲ್ಲಿ ಯಶ್

ಗಂಡು ಸಿಂಹಕ್ಕೆ ಕುತ್ತಿಗೆಯ ಸುತ್ತ ಕೇಸರ ಇರೋ ಹಾಗೆ ತನ್ನ ತಲೆಗೆ ಹೇರ್ ಎಕ್ಷಟೆನ್ಷನ್ ಮಾಡಿಸಿಕೊಂಡ ಯಶ್ ಗೆ ಈ ಹೇರ್ ಎಕ್ಷಟೆನ್ಷನ್ನೇ ದೊಡ್ಡ ಟೆನ್ಷನ್ ಆಗಿತ್ತಂತೆ. ಯಶ್ ಈ ಕೂದಲನ್ನ ಮೇಂಟೇನ್ ಮಾಡೋಕೆ ಕಷ್ಟಪಟ್ಟು ನಿರ್ದೇಶಕರಿಗೆ ಕೈಮುಗಿದು ಬಿಟ್ರಂತೆ

ರಾಕಿಂಗ್ ಸ್ಟಾರ್ ನ ಸ್ಟೈಲಿಷ್ ಗೆಟಪ್

ಮೊದಲ ಬಾರಿಗೆ ಯಶ್ ಡಬಲ್ ಆಕ್ಟಿಂಗ್ ಮಾಡ್ತಿದ್ದಾರೆ. ಒಂದು ಆನೆಯನ್ನ ಪ್ರೀತಿಸುವ ಕಾಡಿನ ಗೆಟಪ್ ಆದ್ರೆ, ಮತ್ತೊಂದು ರಾಕಿಂಗ್ ಸ್ಟಾರ್ ನ ಸ್ಟೈಲಿಷ್ ಗೆಟಪ್. ಎರಡರಲ್ಲೂ ಯಶ್ ಸೂಪರ್ ಅಂತೆ.

ಮೆಚ್ಯೂರ್ಡ್ ಪಾತ್ರದಲ್ಲಿ ಐಶೂ ಅಮೂಲ್ಯ

ಇಲ್ಲೀವರೆಗೂ ಐಸೂ, ಶ್ರಾವಣಿ ತರಹದ ಚೈಲ್ಡಿಶ್ ಶೇಡ್ ನ ಪಾತ್ರಗಳಲ್ಲಿ ಮಿಂಚ್ತಿದ್ದ ಅಮೂಲ್ಯ ಇಲ್ಲಿ ಮೆಚ್ಯೂರ್ಡ್ ಪಾತ್ರ ಮಾಡಿದ್ದಾರೆ. ಅದರ ನಡುವೇನೂ ಚೈಲ್ಡಿಶ್ ಅಮೂಲ್ಯರ ಝಲಕ್ ಇದ್ರೆ... ಅದೂ ಇಷ್ಟವಾಗುತ್ತೆ ಬಿಡಿ.

ಶಾರ್ಟ್ಸ್ ನಲ್ಲಿ ಮೊದಲ ಬಾರಿಗೆ ಅಮೂಲ್ಯ

ಗಜಕೇಸರಿಯಲ್ಲಿ ಅಮೂಲ್ಯರನ್ನ ನೋಡಿದ್ರೆ ಇವರೇನಾ ಆ ಐಸೂ ಅಮೂಲ್ಯ ಅಂತ ನೀವು ದಂಗಾಗಿರ್ತೀರ. ಇಲ್ಲಿ ಅಮೂಲ್ಯ ಗ್ಲಾಮರ್ ಬೇಬಿ ಮೊದಲ ಬಾರಿಗೆ ಶಾರ್ಟ್ ಟೀಶರ್ಟ್ ಹಾಕಿದ್ದಾರೆ.

ಸಲಗದ ಜೊತೆ ಯಶ್ ಸಲುಗೆ

ಚಿತ್ರದಲ್ಲಿ ಅರ್ಜುನ ಎಂಬ ಸಲಗದ ಜೊತೆ ಯಶ್ ಕಾಣಿಸುತ್ತಾರೆ. ಕೇರಳದ ವಯನಾಡಿನ ದುರ್ಗಮ ಅರಣ್ಯದಲ್ಲಿ ಯಶ್ ಹಾಗೂ ಅರ್ಜುನನ ನಡುವೆ ಮೈನವಿರೇಳಿಸುವ ಸನ್ನಿವೇಶಗಳನ್ನು ನಿರೀಕ್ಷಿಸಬಹುದು.

ಸ್ವಾಮೀಜಿಯಾಗಿ ಅನಂತ್ ನಾಗ್

ಇನ್ನು ವಿ ಹರಿಕೃಷ್ಣ ಅವರ ಸಂಗೀತ ಚಿತ್ರದ ಇನ್ನೊಂದು ಹೈಲೈಟ್. ಈಗಾಗಲೆ ಟೈಟಲ್ ಸಾಂಗ್ "ಕನ್ನಡ ಸಿರಿ" ಬಹಳ ಜನಪ್ರಿಯವಾಗಿರುವುದೇ ಇದಕ್ಕೆ ಸಾಕ್ಷಿ. ಚಿತ್ರದಲ್ಲಿ ಅನಂತ್ ನಾಗ್ ಅವರು ಸ್ವಾಮೀಜಿಯಾಗಿ ಕಾಣಿಸುತ್ತಿದ್ದಾರೆ.

ಮೈನವಿರೇಳಿಸುವ ರವಿವರ್ಮ ಸ್ಟಂಟ್ಸ್

ಬಾಲಿವುಡ್ ಚಿತ್ರರಂಗದ ಮೋಸ್ಟ್ ವಾಟೆಂಡ್ ಸ್ಟಂಟ್ ಮಾಸ್ಟರ್ ರವಿವರ್ಮ ಅವರ ಸಾಹಸ ನಿರ್ದೇಶನ ಚಿತ್ರಕ್ಕಿರುವುದು ಮಾಸ್ ಪ್ರೇಕ್ಷಕರು ಭರ್ಜರಿ ಫೈಟ್ ಗಳನ್ನು ನಿರೀಕ್ಷಿಸಬಹುದು.

ಸಾಧು, ರಘು ಭರ್ಜರಿ ಕಾಮಿಡಿಗೆ ಬರವಿಲ್ಲ

ಇನ್ನು ಚಿತ್ರದಲ್ಲಿ ಸಾಧು ಕೋಕಿಲ ಹಾಗೂ ರಂಗಾಯಣ ರಘು ಇರುವುದರಿಂದ ಭರ್ಜರಿ ಕಾಮಿಡಿಗೂ ಬರವಿಲ್ಲ.

English summary
Kannada movie Gajakesari highlights are here. Rocking Star Yash who is basking in the success of Drama, Googly and Raja Huli appearing in dual role in new Kannada Film ‘Gajakesari’ is all set to give another Blockbuster for 2014. In Kannada for the very first time hair weaving technology introduced in this film. 
Please Wait while comments are loading...