For Quick Alerts
  ALLOW NOTIFICATIONS  
  For Daily Alerts

  'ಗುಳ್ಟು' ಆಗಮನಕ್ಕೆ ದಿನಾಂಕ ನಿಗದಿ.!

  By Bharath Kumar
  |

  ಟೈಟಲ್ ಹಾಗೂ ಪೋಸ್ಟರ್ ಗಳಿಂದ ಹೊಸ ರೀತಿಯ ಕುತೂಹಲ ಹುಟ್ಟಿಸಿದ್ದ 'ಗುಳ್ಟು' ಸಿನಿಮಾ ತೆರೆಮೇಲೆ ಬರೋ ದಿನ ಹತ್ತಿರವಾಗಿದೆ. ಇತ್ತಿಚಿಗಷ್ಟೆ ಸೆನ್ಸಾರ್ ಮುಗಿಸಿರುವ 'ಗುಳ್ಟು' ಯಾವುದೇ ಕಟ್ ಇಲ್ಲದೇ 'ಯು/ಎ' ಪ್ರಮಾಣಪತ್ರ ಪಡೆದುಕೊಂಡಿದೆ.

  ಸೆನ್ಸಾರ್ ನಿಂದ ಕ್ಲೀನ್ ಚೀಟ್ ಪಡೆದುಕೊಂಡಿರುವ ಗುಳ್ಟು ಸಿನಿಮಾ ಇದೇ ತಿಂಗಳು ಕೊನೆಯಲ್ಲಿ ಅಂದ್ರೆ ಮಾರ್ಚ್ 30 ರಂದು ತೆರೆಗೆ ಬರ್ತಿದೆ. ಇದೊಂದು ತಂತ್ರಜ್ಞಾನದ ಸುತ್ತ ನಡೆಯುವ ಕಥೆಯಾಗಿದ್ದು, ಇಂದಿನ ತಂತ್ರಜ್ಞಾನವನ್ನ ಜನರು ಹೇಗೆಲ್ಲ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನ ಥ್ರಿಲ್ಲಿಂಗ್ ಆಗಿ ಹೇಳಲು ಹೊರಟಿದೆ ಚಿತ್ರತಂಡ.

  ಇಂದಿನ ಯುಗದಲ್ಲಿ ಯುವ ಜನಾಂಗ ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚು ಅಡಿಕ್ಟ್ ಆಗುತ್ತಿದೆ. ಅದರಲ್ಲಿ ಸಕಾರಾತ್ಮಕ ಜತೆಗೆ ನಕಾರಾತ್ಮಕ ಅಂಶಗಳೂ ಇವೆ. ಇದನ್ನೇ ಹೈಲೈಟ್ ಆಗಿಸಿಕೊಂಡು ನಿರ್ದೇಶಕರು ಸಿನಿಮಾ ಮಾಡಿದ್ದಾರೆ.

  ಅಂದ್ಹಾಗೆ, ಜನಾರ್ಧನ್ ಚಿಕ್ಕಣ್ಣ ಎಂಬುವವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಆರ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ.

  ಇಳಕಲ್ ಮೂಲದ ನವೀನ್ ಶಂಕರ್‌ 'ಗುಳ್ಟು' ಸಿನಿಮಾದ ನಾಯಕ. ನಟಿ ಸೋನು ಗೌಡ ಚಿತ್ರಕ್ಕೆ ನಾಯಕಿ. ಪೊಲೀಸ್‌ ಅಧಿಕಾರಿಯಾಗಿ ಅವಿನಾಶ್‌ ಬಣ್ಣ ಹಚ್ಚಿದ್ದರೆ, ಮುಖ್ಯಮಂತ್ರಿಯಾಗಿ ರಂಗಾಯಣ ರಘು ಪಾತ್ರ ಮಾಡಿದ್ದಾರೆ.

  ಈಗಾಗಲೇ ಟೀಸರ್ ಗಳಿಂದ 'ಗುಳ್ಟು' ಸಿನಿಮಾ ಹೆಚ್ಚು ಸದ್ದು ಮಾಡಿದೆ. ಅಮಿತ್ ಆನಂದ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಒಂದಕ್ಕಿಂತ ಮತ್ತೊಂದು ಹಾಡುಗಳು ಮೋಡಿ ಮಾಡಿದೆ. ಈ ಎಲ್ಲ ಅಂಶಗಳನ್ನ ಮಿಶ್ರಣ ಮಾಡಿರುವ 'ಗುಳ್ಟು' ಚಿತ್ರವನ್ನ ಮಾರ್ಚ್ 30ರಂದು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.

  English summary
  Kannada movie Gultoo has been certified "U/A" without any cuts. The countdown to the release begins. Gultoo will hiting screen on march 30th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X