For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್ 17ಕ್ಕೆ 'ಜಿಗ್ರಿದೋಸ್ತ್'ಗಳ ಆಗಮನ

  |

  'ಅಂಜದ ಗಂಡು', 'ಯಾರಿಗೆ ಸಾಲತ್ತೆ ಸಂಬಳ' ಮುಂತಾದ ಯಶಸ್ವಿ ಚಿತ್ರಗಳ ನಿರ್ಮಾಪಕರಾದ ಬಿ.ಎನ್.ಗಂಗಾಧರ್ ಅವರು ನಿರ್ಮಿಸಿರುವ 27ನೇ ಚಿತ್ರ 'ಜಿಗ್ರಿದೋಸ್ತ್'. ಈ ಚಿತ್ರ ಇದೇ ಸೆಪ್ಟೆಂಬರ್ 17ರಂದು ತೆರಗೆ ಬರಲಿದೆ. ನಟ ಹಾಗೂ ನಿರ್ದೇಶಕ ಎಸ್.ಮೋಹನ್ ಈ ಚಿತ್ರ ನಿರ್ದೇಶಿಸಿದ್ದಾರೆ.

  ನನಗೆ ಗಂಗಾಧರ್ ಅವರು ಸುಮಾರು 22 ವರ್ಷಗಳ ಪರಿಚಯ. ಅವರ "ಯಾರಿಗೆ ಸಾಲತ್ತೆ ಸಂಬಳ" ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ಈಗ ಅವರದೇ ನಿರ್ಮಾಣದ ಚಿತ್ರ ನಿರ್ದೇಶನ ಮಾಡಿದ್ದೇನೆ.

  'ತಾಜ್ ಮಹಲ್-2' ಟ್ರೈಲರ್: ಸೆಪ್ಟೆಂಬರ್ 17ಕ್ಕೆ 'ಚಡ್ಡಿದೋಸ್ತ್' ರಿಲೀಸ್'ತಾಜ್ ಮಹಲ್-2' ಟ್ರೈಲರ್: ಸೆಪ್ಟೆಂಬರ್ 17ಕ್ಕೆ 'ಚಡ್ಡಿದೋಸ್ತ್' ರಿಲೀಸ್

  ಪ್ರಪಂಚದಲ್ಲಿ ಎಲ್ಲಾ ಸಂಬಂಧಿಗಳನ್ನು ನಮಗೆ ಅಪ್ಪ - ಅಮ್ಮ ಪರಿಚಯ ಮಾಡಿಕೊಟ್ಟರಷ್ಟೇ ತಿಳಿಯುತ್ತದೆ. ಆದರೆ ನಾವು ಇಷ್ಟ ಪಟ್ಟು ಪಡೆಯುವ ಸಂಬಂಧ ಸ್ನೇಹ. ಹಾಗಾಗಿ ಎಲ್ಲಕ್ಕಿಂತ ಮೀರಿದ್ದು ಸ್ನೇಹ. ಇದನ್ನೇ ನಮ್ಮ ಚಿತ್ರದಲ್ಲಿ ಹೇಳಿದ್ದೇವೆ ಎಂದು ನಟ ಮೋಹನ್ ಸಂತಸ ಹಂಚಿಕೊಂಡರು.

  ಸ್ಕಂದ ಅಶೋಕ್ ಹಾಗೂ ಚೇತನ್ ಇಬ್ಬರೂ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷತ, ಸುಷ್ಮ ನಾಯಕಿಯರು. ಪಂಚಭಾಷಾ ನಟ ವಿನೋದ್ ಆಳ್ವ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಚಿತ್ಕಲಾ ಬಿರಾದಾರ್, ಇಫ್ರಾನ್, ಮಂಜುನಾಥ್, ರಮೇಶ್ ಪಂಡಿತ್, ಟಿನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಚಿತ್ರ ಹಾಗೂ ಚಿತ್ರತಂಡದ ಬಗ್ಗೆ ಮಾಹಿತಿ ನೀಡಿದರು ಮೋಹನ್.

  'ನನ್ನ ಜೀವನದ ಅತ್ಯುತ್ತಮ ಸಿನಿಮಾ ತಲೈವಿ': ಕಂಗನಾ ರಣಾವತ್ ಭರವಸೆ'ನನ್ನ ಜೀವನದ ಅತ್ಯುತ್ತಮ ಸಿನಿಮಾ ತಲೈವಿ': ಕಂಗನಾ ರಣಾವತ್ ಭರವಸೆ

  ನಾನು ಇಲ್ಲಿಯವರೆಗೂ ಇಪ್ತತ್ತೇಳು ಚಿತ್ರಗಳ ನಿರ್ಮಾಣ ಮಾಡಿದ್ದೇನೆ. ಕೋವಿಡ್ ಬರದಿದ್ದರೆ ಕಳೆದ ವರ್ಷ ನಮ್ಮ ಚಿತ್ರ ಬಿಡುಗಡೆ ಅಗಬೇಕಿತ್ತು. ಆದರೆ ಈಗ ಬಿಡುಗಡೆ ಮಾಡುತ್ತಿದ್ದೇವೆ ನೋಡಿ ಹರಸಿ ಎಂದರು ಬಿ.ಎನ್.ಗಂಗಾಧರ್.

  Kannada Movie Jigiri Dosthu Will release on september 17th

  ನಾಯಕರಲೊಬ್ಬರಾದ ಚೇತನ್ ಮತಾನಾಡುತ್ತಾ, ನಾನು ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ನೀಡಿದ ನಿರ್ಮಾಪಕ - ನಿರ್ದೇಶಕರಿಗೆ ಧನ್ಯವಾದ ಎಂದರು. ನಟಿಯರಾದ ಅಕ್ಷತ, ಸುಷ್ಮ ಕಲಾವಿದರಾದ ಇರ್ಫಾನ್ ಹಾಗೂ ಚಿತ್ರದ ಸಹ ನಿರ್ಮಾಪಕ ಹಾಗೂ ನಟ ಮಂಜುನಾಥ್ ಹಾಗೂ ಸಂಗೀತ ನಿರ್ದೇಶಕ ದಿನೇಶ್ ಕುಮಾರ್ ಮಾಧ್ಯಮದ ಮುಂದೆ ಚಿತ್ರದ ಬಗ್ಗೆ ಮಾಹಿತಿ ನೀಡಿದರು.

  ಪ್ರಸಾದ್ ಬಾಬು ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಮದನ್ - ಹರಿಣಿ ಅವರ ನೃತ್ಯ ನಿರ್ದೇಶನ ಈ‌ ಚಿತ್ರಕ್ಕಿದೆ.

  English summary
  Kannada Movie Jigiri Dosthu set to release on september 17th. the movie directed by Mohan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X