»   » ಚಿತ್ರಮಂದಿರಗಳಲ್ಲಿ 'ಜಸ್ಟ್ ಲವ್' ಫೀಲ್ ಮಾಡಿ

ಚಿತ್ರಮಂದಿರಗಳಲ್ಲಿ 'ಜಸ್ಟ್ ಲವ್' ಫೀಲ್ ಮಾಡಿ

Posted By:
Subscribe to Filmibeat Kannada

ಹಲವಾರು ವರ್ಷಗಳಿಂದ ಸುದೀಪ್ ಚಿತ್ರಗಳ ಖಾಯಂ ಸಹನಟನಾಗಿದ್ದರೂ ಸೈಡ್‌ವಿಂಗ್‌ನಲ್ಲೇ ಉಳಿದು ಹೋಗಿದ್ದ ನಟ ಕಾರ್ತಿಕ್‌. ಈಗ ಅವರು ನಾಯಕ ನಟನಾಗಿ ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ. ಅವರ ಅಭಿನಯದ 'ಜಸ್ಟ್ ಲವ್' ಚಿತ್ರ ಈ ವಾರ (ಮೇ 16) ತೆರೆಕಾಣುತ್ತಿದೆ.

ಪುಟ್ಟ ಪರದೆಯಿಂದ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡ 'ಅಶ್ವಿನಿ ನಕ್ಷತ್ರ' ಖ್ಯಾತಿಯ ಸೂಪರ್ ಸ್ಟಾರ್ ಜೆಕೆ ಈ ಚಿತ್ರದಲ್ಲಿ ಒಬ್ಬ ಆರಾಮವಾದ ಆಸಾಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನೇಹಾ ಸಕ್ಸೇನಾ ಈ ಚಿತ್ರದ ನಾಯಕಿ. ಅಚ್ಯುತ್ ಕುಮಾರ್ ಹಾಗೂ ಸಂಗೀತಾ ಪೋಷಕ ಪಾತ್ರಗಳಲ್ಲಿ ಇದ್ದಾರೆ.


ಪ್ರೇಮ ಕಥೆ ಅಲ್ಲದೆ ಈ ಚಿತ್ರದಲ್ಲಿ ಹಾಸ್ಯ, ಹಾಡುಗಳು, ಸಾಹಸ ಕೂಡ ಹದವಾಗಿ ಬೆರಸಲಾಗಿದೆ ಎಂದು ಕಥೆ, ಚಿತ್ರಕಥೆ, ಸಂಕಲನ ನಿರ್ದೇಶನ ಮಾಡಿರುವ ಎಸ್ ನಾಗೇಂದ್ರ ಅರಸ್ ತಿಳಿಸುತ್ತಾರೆ. ರಾಜಣ್ಣ ಫಿಲಂಸ್ ಅಡಿಯಲ್ಲಿ ಲೇಖಾ ರಾಜಣ್ಣ ನಿರ್ಮಿಸಿರುವ 'ಜಸ್ಟ್ ಲವ್' ಕನ್ನಡ ಸಿನಿಮಾ 'ಫೀಲ್ ಮಾಡಿ' ಎಂಬ ಅಡಿ ಬರಹದೊಂದಿಗೆ ಈ ವಾರ (ಮೇ 16) ಬಿಡುಗಡೆಯಾಗುತ್ತಿದೆ.

ಚಿತ್ರದ ನಿರ್ದೇಶಕ ನಾಗೇಂದ್ರ ಅರಸ್ ಇಪ್ಪತ್ತು ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಮೂಲಕ ನಿರ್ಮಾಪಕರ ನಿರ್ದೇಶಕ ಎಂಬ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಅಂದಿನ ಪಾಠವನ್ನು ಅಂದೇ ಓದಿ ಬರೆದು ಮುಗಿಸುವ ವಿದ್ಯಾರ್ಥಿಯಂತೆ ಅವರು ಕೆಲಸ ಮಾಡಿದ್ದಾರೆ. ಶೂಟಿಂಗ್ ಮುಗಿಸಿದ ಸಂಜೆಯೇ ಎಡಿಟಿಂಗ್, ಡಬ್ಬಿಂಗ್ ಕೆಲಸಗಳನ್ನು ಶುರು ಹಚ್ಚಿಕೊಳ್ಳುತ್ತಿದ್ದರಂತೆ. ಹಾಗಾಗಿ ಚಿತ್ರ ಸೊಗಸಾಗಿ ಮೂಡಿಬಂದಿದೆ ಎನ್ನುತ್ತ್ತದೆ ಚಿತ್ರತಂಡ.

ಸತೀಶ್ ಬಾಬು ಅವರ ಸಂಗೀತ, ಅರುಣ್ ಸುರೇಶ್ ಅವರ ಛಾಯಾಗ್ರಹಣ, ನಾಗಕೀರ್ತಿ ಅವರ ಸಾಹಸ, ಸಿದ್ದು ಹಿರೇಮಠ್ ಅವರ ಸಂಭಾಷಣೆ ಚಿತ್ರಕ್ಕಿದೆ. ಈ ಮೂವರು ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kannada movie 'Just Love' releasing on 16th May all over Karnataka. The movie directed by Nagendar Urs, starring Karthik Jayaram, Neha Saxena.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada