For Quick Alerts
  ALLOW NOTIFICATIONS  
  For Daily Alerts

  'ಕ' ಚಿತ್ರತಂಡದಿಂದ ಡಾ.ರಾಜ್ ಗೆ ವಿಭಿನ್ನ ನಮನ

  By Rajendra
  |

  ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಏಕಾಕ್ಷರದ ಚಿತ್ರ 'ಕ'. ನಟಸಾರ್ವಭೌಮ ಡಾ.ರಾಜ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ವಿಶೇಷ ಪೋಸ್ಟರನ್ನು ವಿನ್ಯಾಸಗೊಳಿಸಿ 'ಕರುನಾಡಿನ ಕರ್ನಾಟಕರತ್ನ'ನಿಗೆ ವಿಶೇಷ ನಮನ ಸಲ್ಲಿಸಿದೆ.

  'ಕ' ಅಕ್ಷರಗಳನ್ನೇ ಬಳಸಿ ಪೋಸ್ಟರನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಕನ್ನಡದ ಎಲ್ಲ ಪ್ರಮುಖ ದೈನಿಕಗಳಲ್ಲಿ ಜಾಹೀರಾತನ್ನೂ ನೀಡಿ ಅಣ್ಣಾವ್ರಿಗೆ ಚಿತ್ರತಂಡ ನಮನ ಸಲ್ಲಿಸಿದೆ. ಈ 'ಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಖ್ಯಾತ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ ಪುತ್ರ ಹೆಸರಾಂತ ಡಿಸೈನರ್ ಸಾಯಿ ಕೃಷ್ಣ. [ನರೇಂದ್ರ ಬಾಬು ಶರ್ಮ ಭವಿಷ್ಯ ನಿಜವಾಗುತ್ತದೆಯೇ?]

  'ಕ' ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಅಲ್ಲದೆ ಅವರೇ ನಿರ್ಮಾಪಕರು ಸಹ. ಈ ಹಿಂದೆ 'ಕ್ಷಮಿಸಿ' ಚಿತ್ರಕ್ಕೆ ಅವರು ಪ್ರತಿಭಾನ್ವೇಷಣೆ ಮಾಡಿದ ಕಲಾವಿದರನ್ನು ಈ 'ಕ' ಚಿತ್ರ್ಕಕೆ ಆಯ್ಕೆ ಮಾಡಿಕೊಂಡಿದ್ದಾರೆ. ಜಯಣ್ಣ ಕಂಬೈನ್ಸ್ ಅರ್ಪಿಸುವ ಸಂಗೀತ ಮೂವೀಸ್ ಅವರ 'ಕ' ಚಿತ್ರದ ನಿರ್ಮಾಪಕರು ರಾಜಮ್ಮ ಸಾಯಿಪ್ರಕಾಶ್.

  ಶರತ್, ಮೋನಿಶ್ ನಾಗರಾಜ್, ವಿಶಾಲ್ ನಾಯರ್, ಶೈನ್ ಶೆಟ್ಟಿ ಜೊತೆಗೆ ಪವಿತ್ರಾ, ಅನುಷಾ, ಪಲ್ಲವಿ, ದೀಪಾ, ದೀಪ್ತಿ ಸಹ ತಾರಾಗಣದಲ್ಲಿ ಇದ್ದಾರೆ. ಚಿತ್ರೀಕರಣವನ್ನು ಬೆಂಗಳೂರು, ಚಿಕ್ಕಮಗಳೂರು, ಹಾಸನ್ ಹಾಗೂ ಖಾಸಗಿ ಚಾನಲ್ ಅಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.

  ನಾಲ್ಕು ಹಾಡುಗಳಲ್ಲಿ ಎರಡು ಹಾಡಿನ ಚಿತ್ರೀಕರಣ ಸಂಪೂರ್ಣವಾಗಿದ್ದು ಸದ್ಯದಲ್ಲೇ ಇನ್ನೆರಡು ಹಾಡುಗಳ ಚಿತ್ರೀಕರಣ ಹಮ್ಮಿಕೊಳ್ಳಲಾಗಿದೆ. ಛಾಯಾಗ್ರಹಣ ಸ್ಟೀಲ್ ಬೆಂಜಮಿನ್, ಸಂಗೀತ ಗಣೇಶ್ ನಾರಾಯಣ ಅವರದು. (ಒನ್ಇಂಡಿಯಾ ಕನ್ನಡ)

  English summary
  Kannada movie 'Ka' team celebrating Dr.Rajkumar birthday by design a special poster of Dr.Rajkumar. The poster is designed by using 'Ka' Kannada letters. "Ka" is an upcoming Kannada Romantic Entertainer written and directed by Sai Krishna. The film is the first anthology film in Kannada with fresh talents.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X