For Quick Alerts
  ALLOW NOTIFICATIONS  
  For Daily Alerts

  ವರ್ಮಾ ಅವರ 'ವೀರಪ್ಪನ್' 10 ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?

  By Suneetha
  |

  ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ಕಿಲ್ಲಿಂಗ್ ವೀರಪ್ಪನ್' ಸಿನಿಮಾವನ್ನು ಈ ಹೊಸ ವರ್ಷಕ್ಕೆ ಕನ್ನಡ ಸಿನಿ ಪ್ರೇಕ್ಷಕರಿಗೆ ಹೊಸ ಗಿಫ್ಟ್ ನೀಡಿದಂತಾಗಿದ್ದು, ಒಂದು ವಿಭಿನ್ನ ಮತ್ತು ಉತ್ತಮ ಸಿನಿಮಾ ನೋಡಿದ ಧನ್ಯತಾ ಭಾವನೆ ಪ್ರೇಕ್ಷಕರಲ್ಲಿ ಮತ್ತು ಅಭಿಮಾನಿಗಳಲ್ಲಿ ಮೂಡಿದೆ.

  ಮಾತ್ರವಲ್ಲದೇ ಜನವರಿ 1 ರಂದು ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆ ಕಂಡ ಕಾಡುಗಳ್ಳ ವೀರಪ್ಪನ್ ನಿಜ ಜೀವನಾಧರಿತ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ವರ್ಮಾ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಈ ಸಿನಿಮಾ ಒಂದೇ ದಿನಕ್ಕೆ ಸುಮಾರು 4.50 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ಚಿಂದಿ ಉಡಾಯಿಸಿತ್ತು.[ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ]

  ಇದೀಗ ಚಿತ್ರ ಬಿಡುಗಡೆ ಆಗಿ ಸುಮಾರು 10 ದಿನಗಳಾಗಿದ್ದು, ಹತ್ತು ದಿನಗಳಲ್ಲಿ ವರ್ಮಾ ಅವರ 'ವೀರಪ್ಪನ್' ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?, ಹತ್ತತ್ತಿರ, ಬರೋಬ್ಬರಿ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

  ಚಿತ್ರ ಬಿಡುಗಡೆ ಆದ ಮೊದಲ ದಿನವೇ ಸುಮಾರು 4.50 ಕೋಟಿ ಕಲೆಕ್ಷನ್ ಮಾಡುವ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡ ಸಿನಿಮಾ ಈಗಲೂ ಎಲ್ಲೆಡೆ ರೇಸ್ ನಲ್ಲಿರುವ ಕುದುರೆಯಂತೆ ಓಡುತ್ತಿದೆ.['ಆರ್.ಜಿ.ವಿ' ಆಪರೇಷನ್ ಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]

  ಚಿತ್ರ ಬಿಡುಗಡೆಯಾದ ಮೊದಲ ದಿನದಿಂದ ಇಲ್ಲಿಯವರೆಗೆ (10 ದಿನದವರೆಗೆ) ಸಿನಿಮಾ ದಿನಂಪ್ರತಿ ಮಾಡಿದ ಕಲೆಕ್ಷನ್ ರಿಪೋರ್ಟ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಮೊದಲ ದಿನ 'ವೀರಪ್ಪನ್' ಮಾಡಿದ ಕಲೆಕ್ಷನ್

  ಮೊದಲ ದಿನ 'ವೀರಪ್ಪನ್' ಮಾಡಿದ ಕಲೆಕ್ಷನ್

  ಆರ್.ಜಿ.ವಿ ಮತ್ತು ಶಿವಣ್ಣ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿದ್ದ ನಿಜ ಜೀವನ ಚರಿತ್ರೆಯಾಧರಿತ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಮೊದಲ ದಿನ ಮಾಡಿದ ಕಲೆಕ್ಷನ್ ಬರೋಬ್ಬರಿ 4.50 ಕೋಟಿ ರೂಪಾಯಿ ಬಾಚಿಕೊಂಡಿತ್ತು.[ಕಿಲ್ಲಿಂಗ್ ವೀರಪ್ಪನ್ Vs ಅಟ್ಟಹಾಸ: ಯಾವುದು ನಿಜವಾದ ಇತಿಹಾಸ?]

  ಎರಡನೇ ದಿನದ ಕಲೆಕ್ಷನ್ ರಿಪೋರ್ಟ್

  ಎರಡನೇ ದಿನದ ಕಲೆಕ್ಷನ್ ರಿಪೋರ್ಟ್

  ಎರಡನೇ ದಿನ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಮಾಡಿದ ಕಲೆಕ್ಷನ್ ಮೊದಲನೇ ದಿನಕ್ಕಿಂತ ಸ್ವಲ್ಪ ಕಡಿಮೆ. ಅಂದರೆ 4.20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

  ಮೂರನೇ ದಿನದ ಬಾಕ್ಸಾಫೀಸ್ ಕಲೆಕ್ಷನ್

  ಮೂರನೇ ದಿನದ ಬಾಕ್ಸಾಫೀಸ್ ಕಲೆಕ್ಷನ್

  ಮೂರನೇ ದಿನದಲ್ಲಿ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಮಾಡಿದ ಕಲೆಕ್ಷನ್ ಮೊದಲೆರೆಡು ದಿನಗಳಿಂದ ಕುಸಿದಿತ್ತು. ಅಂದರೆ ಮೂರನೇ ದಿನದ ಕಲೆಕ್ಷನ್ 1.40 ಕೋಟಿ ರೂಪಾಯಿ.

  ನಾಲ್ಕನೆ ದಿನದ ಕಲೆಕ್ಷನ್ ಎಷ್ಟು?

  ನಾಲ್ಕನೆ ದಿನದ ಕಲೆಕ್ಷನ್ ಎಷ್ಟು?

  ಶಿವಣ್ಣ, ಸಂದೀಪ್ ಭಾರದ್ವಾಜ್, ಪಾರುಲ್ ಯಾದವ್, ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ನಾಲ್ಕನೇ ದಿನ ಕಲೆಕ್ಷನ್ ನಲ್ಲಿ ಸ್ವಲ್ಪ ಕುಸಿದಿದೆ. ನಾಲ್ಕನೇ ದಿನದ ಕಲೆಕ್ಷನ್ 1.20 ಕೋಟಿ.

  5ನೇ ದಿನದ ಕಲೆಕ್ಷನ್

  5ನೇ ದಿನದ ಕಲೆಕ್ಷನ್

  ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' 5ನೇ ದಿನದಲ್ಲಿ ಮಾಡಿದ ಕಲೆಕ್ಷನ್ ಸುಮಾರು 0.98 ಲಕ್ಷ ರೂಪಾಯಿ.

  ಆರನೇ ದಿನದ ಬಾಕ್ಸಾಫೀಸ್ ರಿಪೋರ್ಟ್

  ಆರನೇ ದಿನದ ಬಾಕ್ಸಾಫೀಸ್ ರಿಪೋರ್ಟ್

  ಆರನೇ ದಿನದಲ್ಲಿ ಕಿಲ್ಲಿಂಗ್ ವೀರಪ್ಪನ್ ಕಲೆಕ್ಷನ್ ಮಾಡಿದ್ದು ಸುಮಾರು 0.80 ಲಕ್ಷ ರೂಪಾಯಿ.

  7ನೇ ದಿನದ ಕಲೆಕ್ಷನ್

  7ನೇ ದಿನದ ಕಲೆಕ್ಷನ್

  ರಾಮ್ ಗೋಪಾಲ್ ವರ್ಮಾ ಮತ್ತು ಶಿವಣ್ಣ ಕಾಂಬಿನೇಷನ್ ನ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಏಳನೇ ದಿನದಲ್ಲಿ ಮಾಡಿದ ಕಲೆಕ್ಷನ್ ಸುಮಾರು 0.65 ಲಕ್ಷ ರೂಪಾಯಿ.

  ಎಂಟನೇ ದಿನದಲ್ಲಿ ಕಿಲ್ಲಿಂಗ್ ಮಾಡಿದ ಕಲೆಕ್ಷನ್

  ಎಂಟನೇ ದಿನದಲ್ಲಿ ಕಿಲ್ಲಿಂಗ್ ಮಾಡಿದ ಕಲೆಕ್ಷನ್

  ಕುಖ್ಯಾತ ಕಾಡುಗಳ್ಳ ವೀರಪ್ಪನ್ ನಿಜ ಚರಿತ್ರೆಯಾಧರಿತ 'ಕಿಲ್ಲಿಂಗ್ ವಿರಪ್ಪನ್' ಸಿನಿಮಾ ಎಂಟನೇ ದಿನದಲ್ಲಿ ಮಾಡಿದ ಕಲೆಕ್ಷನ್ 0.75 ಲಕ್ಷ ರೂಪಾಯಿ.

  9ನೇ ದಿನದ ಬಾಕ್ಸಾಫೀಸ್ ರಿಪೋರ್ಟ್

  9ನೇ ದಿನದ ಬಾಕ್ಸಾಫೀಸ್ ರಿಪೋರ್ಟ್

  ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ತೆರೆ ಕಂಡು ಉತ್ತಮ ಪ್ರದರ್ಶನ ಕಾಣುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಒಂಭತ್ತನೇ ದಿನದಲ್ಲಿ ಮಾಡಿದ ಕಲೆಕ್ಷನ್ ಒಟ್ಟು 0.60 ಲಕ್ಷ ರೂಪಾಯಿ.

  ಹತ್ತನೇ ದಿನದ ಕಲೆಕ್ಷನ್

  ಹತ್ತನೇ ದಿನದ ಕಲೆಕ್ಷನ್

  ಹತ್ತನೇ ದಿನದಲ್ಲಿ 'ಕಿಲ್ಲಿಂಗ್ ವೀರಪ್ಪನ್' ಮಾಡಿದ ಕಲೆಕ್ಷನ್ ಸುಮಾರು 0.70 ಲಕ್ಷ ರೂಪಾಯಿ. ಅಂದರೆ ಮೊದಲ ದಿನದಿಂದ ಹತ್ತನೇ ದಿನಕ್ಕೆ ಕಲೆಕ್ಷನ್ ನಲ್ಲಿ ಕುಸಿದಿದೆ. ಆದರೂ ನಿನ್ನೆ ವೀಕೆಂಡ್ ಆಗಿರುವುದರಿಂದ ಸ್ವಲ್ಪ ಹೆಚ್ಚು ಕಲೆಕ್ಷನ್ ಮಾಡಿದೆ.

  English summary
  The Real Life Based Movie Completed its 10 Day on Box Office and earns More then Expected. The Movie Opens with 5.8 Crore on its 1st Day and near to Collect 20 crore, as Expected the Kannada Cinema, the Movie Doing Good on Box Office and May Earns More on Box Office in Next few Days. Check The Day by Day Collection of Killing Veerappan. The movie is directed by Ram Gopal Varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X