»   » ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆದ ಆರ್.ಚಂದ್ರು ಸಾರಥಿ 'ಲಕ್ಷ್ಮಣ'

ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆದ ಆರ್.ಚಂದ್ರು ಸಾರಥಿ 'ಲಕ್ಷ್ಮಣ'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಗೆ ಬಲಗಾಲಿಟ್ಟು ಒಳಬಂದ ಹೊಸ ಹುಡುಗ ನಟ ಅನೂಪ್ ರೇವಣ್ಣ ಅವರ ಚೊಚ್ಚಲ ಸಿನಿಮಾ ತೆರೆಗೆ ಬರಲು ತಯಾರಾಗಿದೆ. ಇತ್ತ ಅನೂಪ್ ಅವರ ಮೊದಲ ಸಿನಿಮಾ ತೆರೆಗೆ ಬರುವ ಮುನ್ನವೇ ಅವರಿಗೆ ಹಲವಾರು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ ಅನ್ನೋದು ವಿಶೇಷ.

ಇನ್ನು ಅನೂಪ್ ರೇವಣ್ಣ ಹಾಗೂ ನಿರ್ದೇಶಕ ಆರ್.ಚಂದ್ರು ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಆಕ್ಷನ್ ಕಮ್ ರೋಮ್ಯಾಂಟಿಕ್ 'ಲಕ್ಷ್ಮಣ' ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಪ್ರಮಾಣ ಪತ್ರ ನೀಡುವ ಮೂಲಕ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.[ಅನೂಪ್ ಗೆ ಪುರುಸೊತ್ತು ಇಲ್ಲ.! ಆರ್.ಚಂದ್ರುಗೆ ಟೈಮ್ ಸಿಗುತ್ತಿಲ್ಲ.!]


Kannada movie 'Lakshmana' gets 'A' Certificate

ಸಖತ್ ಫೈಟ್ ಜೊತೆಗೆ ಮಾಸ್ ಸಿನಿಮಾ ಆಗಿರೋದ್ರಿಂದ 'ಎ' ಪ್ರಮಾಣಪತ್ರ ನೀಡಲಾಗಿದೆ. ಆದರೂ ಪಕ್ಕಾ ಫ್ಯಾಮಿಲಿ ಎಲ್ಲಾ ಕುಳಿತು ನೋಡಬಹುದಾದ ಸಿನಿಮಾ ಇದಾಗಿದೆ.


ಆಕ್ಷನ್ ಸೀಕ್ವೆನ್ಸ್ ಗಳು 'ಲಕ್ಷ್ಮಣ' ಚಿತ್ರದಲ್ಲಿ ಇರುವುದರಿಂದ ನಟ ಅನೂಪ್ ರೇವಣ್ಣ ಅವರು ಪಕ್ಕಾ ಮಾಸ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆಕ್ಷನ್ ಜೊತೆಗೆ ರೋಮ್ಯಾಂಟಿಕ್ 'ಲಕ್ಷ್ಮಣ' ನಾಯಕ ಅನೂಪ್ ಅವರಿಗೆ ನಾಯಕಿಯಾಗಿ ನಟಿ ಮೇಘನಾ ರಾಜ್ ಸಾಥ್ ನೀಡಿದ್ದಾರೆ.[ಹೊಸ ದಾಖಲೆ ಬರೆದ ಹೊಸ ಹುಡುಗ ಅನೂಪ್ 'ಲಕ್ಷ್ಮಣ']


ಸಖತ್ ಫೈಟ್ ಜೊತೆಗೆ ಮಾಸ್ ಸಿನಿಮಾ ಆಗಿರೋದ್ರಿಂದ 'ಎ' ಪ್ರಮಾಣಪತ್ರ ನೀಡಲಾಗಿದೆ. ಆದರೂ ಪಕ್ಕಾ ಫ್ಯಾಮಿಲಿ ಎಲ್ಲಾ ಕುಳಿತು ನೋಡಬಹುದಾದ ಸಿನಿಮಾ ಇದಾಗಿದೆ.

ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರ ವಹಿಸಿದ್ದು, ಬಹಳ ವರ್ಷಗಳ ನಂತರ ತೆರೆಯ ಮೇಲೆ ಮತ್ತೆ ತಮ್ಮ ಅಭಿಮಾನಿಗಳಿಗೆ ಖಾಕಿ ಖದರ್ ತೋರಲಿದ್ದಾರೆ.[ಕನ್ನಡದ ಯಾವ 'ಸ್ಟಾರ್'ಗೂ 'ಲಕ್ಷ್ಮಣ' ಅನೂಪ್ ಕಮ್ಮಿ ಇಲ್ಲ ಬಿಡಿ.!]


ಒಟ್ನಲ್ಲಿ ಹಲವಾರು ವಿಶೇಷತೆಗಳ ಜೊತೆಗೆ ಬಹುನಿರೀಕ್ಷೆ ಮೂಡಿಸಿರುವ 'ಲಕ್ಷ್ಮಣ' ಸಿನಿಮಾ ಜೂನ್ 24, ಅಂದ್ರೆ ಮುಂದಿನ ಶುಕ್ರವಾರ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಲಿದೆ. ಚಿತ್ರಕ್ಕೆ ವತ್ಸಲಾ ರೇವಣ್ಣ ಅವರು ಬಂಡವಾಳ ಹೂಡಿದ್ದಾರೆ.

English summary
Kannada movie 'Lakshmana' gets 'A' Certificate from the Censor Board. And movie is releasing on June 24th. Kannada Actor Anoop, Kannada Actress Meghana Raj, Kannada Actor Ravichandran in the prominent role. The movie is directed by R.Chandru.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada