»   » ಟಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಮಿಂಚ್ತಾರೆ ರವಿಚಂದ್ರನ್

ಟಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಮಿಂಚ್ತಾರೆ ರವಿಚಂದ್ರನ್

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ, ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯು ಆಲಿಯ' ಚಿತ್ರ ಸೆಪ್ಟೆಂಬರ್ 17 ರಂದು ಗಣೇಶ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ವಿಶೇಷ ಅಂದ್ರೆ, 'ಲವ್ ಯು ಆಲಿಯ' ಚಿತ್ರ ಬರೀ ಕನ್ನಡದಲ್ಲಿ ಮಾತ್ರ ಅಲ್ಲ ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ತೆರೆಕಾಣುತ್ತಿದೆ. 'ಲವ್ ಯು ಆಲಿಯ' ಕನ್ನಡ ಅವತರಣಿಕೆ ಬಿಡುಗಡೆಯಾದ ಒಂದು ವಾರದ ನಂತರ ತೆಲುಗು ಮತ್ತು ಹಿಂದಿ ಅವತರಣಿಕೆ ಬಿಡುಗಡೆ ಆಗಲಿದೆ. [ಸೆಪ್ಟೆಂಬರ್ ನಲ್ಲಿ 'ಲವ್ ಯು ಆಲಿಯ' ರಿಲೀಸ್ ಫಿಕ್ಸ್]


love u alia

ಬಹುಭಾಷಾ ನಟಿ ಭೂಮಿಕಾ ಚಾವ್ಲಾ ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಸಖತ್ ಫೇಮಸ್. ಇನ್ನೂ 'ಲವ್ ಯು ಆಲಿಯ' ಚಿತ್ರದ ಸ್ಪೆಷಲ್ ಸಾಂಗ್ ನಲ್ಲಿ ಹೆಜ್ಜೆ ಹಾಕಿರುವ ಸನ್ನಿ ಲಿಯೋನ್ ಕೂಡ ಬಾಲಿವುಡ್ ಹಾಟ್ ಕೇಕ್. ಹೀಗಾಗಿ ಈ ಎರಡು ಭಾಷೆಗಳಲ್ಲಿ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ['ಲವ್ ಯು ಆಲಿಯ' ಚಿತ್ರದಲ್ಲಿ ಸನ್ನಿ ವಯ್ಯಾರ ನೋಡಿದ್ದೀರಾ?]


ಕ್ರೇಜಿ ಸ್ಟಾರ್ ರವಿಚಂದ್ರನ್, ಭೂಮಿಕಾ ಚಾವ್ಲಾ, ರವಿಶಂಕರ್, ಚಂದನ್, ನಿಕಿಶಾ ಪಟೇಶ್, ಸಾಧು ಕೋಕಿಲ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.


ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ 'ಲವ್ ಯು ಆಲಿಯ' ಕಮಾಲ್ ಹೇಗಿರಬಹುದು ಅಂತ ಕಾದು ನೋಡ್ಬೇಕು.

English summary
Indrajit Lankesh directorial Kannada Movie 'Luv U Alia' is all set to release in 3 languages, Kannada, Telugu and Hindi. The film is slated to release on September 17th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada