»   » ಈ ವಾರದಿಂದ ಶುರು 'ಮಾದ ಮತ್ತು ಮಾನಸಿ' ಪ್ರೇಮ ಪುರಾಣ

ಈ ವಾರದಿಂದ ಶುರು 'ಮಾದ ಮತ್ತು ಮಾನಸಿ' ಪ್ರೇಮ ಪುರಾಣ

Written By:
Subscribe to Filmibeat Kannada

ಡೈನಾಮಿಕ್ ಹೀರೋ ಪ್ರಜ್ವಲ್ ದೇವರಾಜ್ ಮತ್ತು 'ಲೂಸಿಯಾ' ಬೆಡಗಿ ಶೃತಿ ಹರಿಹರನ್ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ, 'ಮಾದ ಮತ್ತು ಮಾನಸಿ' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ 'ಯು' ಪ್ರಮಾಣ ಪತ್ರ ಪಡೆದುಕೊಂಡಿದ್ದ 'ಮಾದ ಮತ್ತು ಮಾನಸಿ' ಇದೇ ವಾರ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.[ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾದ 'ಮಾದ ಮತ್ತು ಮಾನಸಿ']

Kannada Movie 'Maada Mattu Manasi' Releasing November 23rd

ಹೌದು, ನವೆಂಬರ್ 25 ರಂದು, ಕರ್ನಾಟಕ ರಾಜ್ಯಾದ್ಯಂತ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ಮಾದ ಮತ್ತು ಮಾನಸಿ' ತೆರೆಕಾಣುತ್ತಿದೆ.

Kannada Movie 'Maada Mattu Manasi' Releasing November 23rd

ಪ್ರಜ್ವಲ್ ದೇವರಾಜ್ ಮತ್ತು ಶೃತಿ ಹರಿಹರನ್ ಮೊದಲ ಬಾರಿ ಜೋಡಿಯಾಗಿರುವ ಈ ಚಿತ್ರವನ್ನ ಸತೀಶ್ ಪ್ರಧಾನ್ ನಿರ್ದೇಶನ ಮಾಡಿದ್ದಾರೆ. ಪೂಜಾ ಗಾಂಧಿ ಅಭಿನಯದ 'ಅಭಿನೇತ್ರಿ' ಚಿತ್ರದ ನಂತರ ಸತೀಶ್ ಆಕ್ಷನ್ ಕಟ್ ಹೇಳಿರುವ ಚಿತ್ರ 'ಮಾದ ಮತ್ತು ಮಾನಸಿ'.

Kannada Movie 'Maada Mattu Manasi' Releasing November 23rd

ಇನ್ನೂ ಚಿತ್ರದ ಹಾಡೊಂದಕ್ಕೆ ಅನುಶ್ರೀ ಸೂಪರ್ ಸ್ಟೆಪ್ಸ್ ಹಾಕಿದ್ದಾರೆ. ''ಮಾದ-ಮಾನಸಿಗೆ ಪ್ಯಾರ್ ಬಂತು...ಕಣ್ಣಿಗೆ ಲವ್ವು ಬಂತು...ಸುಮ್ ಸುಮ್ಗೆ ದಿಲ್ಗೆ ದುಖಾನ್ ಆದಂಗೆ...ಇವ್ರ್ ದುಕೆ ಅವ್ರ್ ಮ್ಯಾಲೆ ಪ್ಯಾರು...ಹಿಡ್ಕೊಂಡ್ರೆ ಪ್ರೀತಿ ತೇರು...ಎಲ್ಲಾರ್ದುಕೆ ಜಿಂದಗಿ ಜೋರು'' ಅನ್ನುವ ಇಂಟ್ರೋಡಕ್ಷನ್ ಹಾಡಿಗೆ ಅನುಶ್ರೀ ಸೊಂಟ ಬಳುಕಿಸಿದ್ದಾರೆ.[ಮಾದ-ಮಾನಸಿ ಜೊತೆ 'ಬಿಗ್ ಬಾಸ್' ಅನುಶ್ರೀ ಟಪ್ಪಾಂಗುಚ್ಚಿ]

Kannada Movie 'Maada Mattu Manasi' Releasing November 23rd

ರಾಜೇಶ್ ಮತ್ತು ದೇವಿ ಫಿಲಂಸ್ ಲಾಂಛನದಲ್ಲಿ, ಮನೋಮೂರ್ತಿ ಅವರು ಸಂಗೀತ ನೀಡುವುದರ ಜೊತೆಗೆ ಈ ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ. ಛಾಯಾಗ್ರಾಹಕ ಕೆ.ಎಸ್. ಚಂದ್ರಶೇಖರ್ ಅವರ ಕ್ಯಾಮೆರಾ ಕೈ ಚಳಕ ಈ ಚಿತ್ರಕ್ಕಿದ್ದು, ಇಮ್ರಾನ್ ಸರ್ದಾರಿಯಾ, ಕಲೈ, ಪ್ರಭು ಶ್ರೀನಿವಾಸ್ ನೃತ್ಯ ಸಂಯೋಜನೆ ಮಾಡಿದ್ದಾರೆ.

Kannada Movie 'Maada Mattu Manasi' Releasing November 23rd

ಉಳಿದಂತೆ ಚಿತ್ರದಲ್ಲಿ ರಂಗಾಯಣ ರಘು, ಬುಲೆಟ್ ಪ್ರಕಾಶ್, ಶೋಭರಾಜ್, ಪವನ್, ವಾಣಿಶ್ರೀ, ಶೃತಿ ನಾಯಕ್, ನಿರಂಜನ್ ಯತಿರಾಜ್, ಮುಂತಾದವರು ಪ್ರಮುಖವಾಗಿ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.

English summary
Kannada movie 'Maada mattu Manasi' has releasing November 23rd all over karnataka. Kannada actor Prajwal Devaraj, Kannada actress Sruthi hariharan in the lead role. The movie is directed by Satish Pradhan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada