»   » ಟ್ರೈಲರ್: ಕನ್ನಡದ 'ಪ್ರೇಮಕಾವ್ಯ' ಆಗುವ ಸೂಚನೆ ಕೊಟ್ಟ 'ಮನಸು ಮಲ್ಲಿಗೆ'

ಟ್ರೈಲರ್: ಕನ್ನಡದ 'ಪ್ರೇಮಕಾವ್ಯ' ಆಗುವ ಸೂಚನೆ ಕೊಟ್ಟ 'ಮನಸು ಮಲ್ಲಿಗೆ'

Posted By:
Subscribe to Filmibeat Kannada

'ಮರಾಠಿ' ಭಾಷೆಯ ಬ್ಲಾಕ್ ಬಸ್ಟರ್ 'ಸೈರಾಟ್' ಚಿತ್ರದ ಕನ್ನಡ ರೀಮೇಕ್ ಆಗಿರುವ 'ಮನಸು ಮಲ್ಲಿಗೆ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಂದನವನದಲ್ಲಿ ಮತ್ತೊಂದು 'ಪ್ರೇಮಕಾವ್ಯ' ಇದಾಗಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.['ವಾಲೆಂಟೈನ್ಸ್ ಡೇ' ಪ್ರಯುಕ್ತ 'ಮನಸು ಮಲ್ಲಿಗೆ' ಆಡಿಯೋ ಬಿಡುಗಡೆ]

ದಕ್ಷಿಣ ಭಾರತದ ಖ್ಯಾತ ಖಳನಟ ಸತ್ಯಪ್ರಕಾಶ್ ಅವರ ಮಗ ನಿಶಾಂತ್ ನಾಯಕನಾಗಿ ಅಭಿನಯಿಸಿದ್ದರೆ, ಮೂಲ ಚಿತ್ರದಲ್ಲಿ ನಾಯಕಿಯಾಗಿದ್ದ ರಿಂಕು ರಾಜಗುರು ಕನ್ನಡದ 'ಮನಸು ಮಲ್ಲಿಗೆ' ಚಿತ್ರದಲ್ಲು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.[ಕನ್ನಡಕ್ಕೆ ಬಂದ 'ಸೈರತ್' ಬೆಡಗಿ ರಿಂಕುಗೆ ನಾಯಕ ಸಿಕ್ಕಾಯ್ತು!]

ಈಗಾಗಲೇ 'ಮನಸು ಮಲ್ಲಿಗೆ' ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಅಜಯ್-ಅತುಲ್ ಅವರ ಸಂಗೀತ ನಿರ್ದೇಶನದ ಹಾಡುಗಳು ಗಮನ ಸೆಳದಿದ್ದವು. ಕಲಾಸಾಮ್ರಾಟ್ ಎಸ್.ನಾರಾಯಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರಾಕ್ ಲೈನ್ ವೆಂಕಟೇಶ್ ಮತ್ತು ಆಕಾಶ್ ಚಾವ್ಲಾ ನಿರ್ಮಾಣ ಮಾಡಿದ್ದಾರೆ.[ಕನ್ನಡದ 'ಸೈರಾಟ್'ಗೆ ಟೈಟಲ್ ಫಿಕ್ಸ್!]

ಒಟ್ನಲ್ಲಿ, ಮರಾಠಿಯಲ್ಲಿ ಹೊಸ ದಾಖಲೆ ಬರೆದ, 'ಸೈರಾಟ್' ಚಿತ್ರದ ಮೇಲೆ ಸ್ಯಾಂಡಲ್ ವುಡ್ ಅಂಗಳದಲ್ಲಿ ನಿರೀಕ್ಷೆ ಡಬಲ್ ಮಾಡಿದೆ. ಅದಕ್ಕೆ ತಕ್ಕಂತೆ ಟ್ರೈಲರ್ ಮತ್ತು ಹಾಡುಗಳು ಕೂಡ ಈಗ ಮೂಡಿಬಂದಿದೆ. 'ಮನಸು ಮಲ್ಲಿಗೆ'ಯ ಟ್ರೇಲರ್ ಇಲ್ಲಿದೆ ನೋಡಿ

English summary
S.Narayan directorial Kannada Movie 'Manasu Mallige' Trailer Released. 'Manasu Mallige' is the Remake of Marathi Hit Film 'Sairat'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada