»   » ಹಳ್ಳಿಗಾಡಿನ ಪ್ರೇಮಕಥೆ 'ನಗಾರಿ' ಬರ್ತಿದೆ ತಗೋರಿ

ಹಳ್ಳಿಗಾಡಿನ ಪ್ರೇಮಕಥೆ 'ನಗಾರಿ' ಬರ್ತಿದೆ ತಗೋರಿ

Posted By:
Subscribe to Filmibeat Kannada

ಹೊಸಬರ ಪ್ರಯತ್ನಗಳು ಹೊಸಹೊಸದಾಗಿಯೇ ಇರುತ್ತವೆ. ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಚಿತ್ರಗಳನ್ನು ಬೆರಗುಗಣ್ಣಿನಿಂದ ನಿರೀಕ್ಷಿಸುವವರೇ ಅಧಿಕ. ಆ ರೀತಿ ಒಂದು ಅಪ್ಪಟ ಹಳ್ಳಿಗಾಡಿನ ಪ್ರೇಮಕಥೆ 'ನಗಾರಿ'. ಈ ಚಿತ್ರ ಈಗ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.

'ನಗಾರಿ' ಕನ್ನಡ ಸಿನಿಮಾ ಬೆಂಗಳೂರು ನಗರದಲ್ಲೇ ಮಾತಿನ ಭಾಗದ ಚಿತ್ರೀಕರಣ ಪೂರೈಸಿ, ಹಾಡುಗಳನ್ನು ಸಹ ಮುಗಿಸಿ ತಾಂತ್ರಿಕ ಕೆಲಸಗಳನು ಪೂರೈಸಿಕೊಂಡು ಮೊದಲ ಪ್ರತಿಯೊಂದಿಗೆ ಸಿದ್ದವಾಗಿದೆ. ನಾಲ್ಕು ಹುಡುಗರು ಹಾಗೂ ಒಂದು ನಾಯಕಿ ಸುತ್ತ ಹಣೆಯಲಾದ ಕಥೆ 'ನಗಾರಿ' ಭೂಮಿಕಾ ಸಿನೆ ಕ್ರಿಯೇಷನ್ ಅಡಿಯಲ್ಲಿ ಶಿವ ಮಾದೆಗೌಡ ಅವರು ನಿರ್ಮಿಸುತ್ತಿದ್ದಾರೆ.

Kannada movie Nagari

'ಸೌಂಡ್ ಆಫ್ ಲವ್' ಎಂಬುದು ಚಿತ್ರದ ಅಡಿಬರಹ. ಮಂಡ್ಯ, ಮದ್ದೂರು, ಸಕಲೇಶಪುರ ಹಾಗೂ ಮಂಗಳೂರಿನಲ್ಲಿ ಈ ಚಿತ್ರವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಾಯಕನಟರಾಗಿ ಪರಿಚಯವಾಗುತ್ತಿದ್ದಾರೆ. 'ಅಕ್ಕ' ಧಾರಾವಾಹಿ ಮೂಲಕ ಮನೆಮಾತಾಗಿರುವ ಅನುಪಮಾ ಈ ಚಿತ್ರದ ನಾಯಕಿ.

ಇನ್ನು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ನಂದೀಶ್ ಅವರು ಓಂ ಪ್ರಕಾಶ್ ರಾವ್ ಹಾಗೂ ಎ.ಆರ್.ಬಾಬು ಅವರ ಬಳಿ ಕೆಲಸ ಮಾಡಿದ ಅನುಭವವಿದೆ. ಹಳ್ಳಿಯೊಂದರ ಪೋಲಿ ಹುಡುಗರ ಕಥೆ ಇದು. ಲವ್, ಸೆಂಟಿಮೆಂಟ್, ಸಾಹಸ ಚಿತ್ರದ ಹೈಲೈಟ್. ಪಕ್ಕಾ ಪ್ರೇಮಕಥೆಯಾದ ಈ ಚಿತ್ರ ಪ್ರೇಮಿಗಳ ದಿನಕ್ಕೆ ಅಂದರೆ ಫೆಬ್ರವರಿ 14ಕ್ಕೆ ಚಿತ್ರಪ್ರೇಮಿಗಳ ಮುಂದೆ ಬರುತ್ತಿದೆ.

Kannada movie Nagari

ಇದು ತಮ್ಮ ನಿರ್ದೇಶನದ ಮೊದಲ ಚಿತ್ರವಾದರೂ ತುಂಬಾ ಸೊಗಸಾಗಿ ತೆರೆಗೆ ತಂದಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ನಂದೀಶ್. ನವನೀತ್ ಶ್ಯಾಮ್ ಅವರ ಸಂಗೀತ, ಶ್ಯಾಮ್ ಸುದರ್ಶನ್ ಅವರ ಸಂಗೀತ ಒದಗಿಸಿದ್ದಾರೆ. ವಿಕಾಸ್, ವಿನಯ್, ದೇವರಾಜ್, ಹೃತಿಕ್, ಅನುಪಮಾ, ಶರತ್ ಲೋಹಿತಾಶ್ವ, ರಂಗಾಯಣ ರಘು, ಮೈಕೊ ನಾಗರಾಜ್, ಬಿರಾದಾರ್, ಜಯರಾಂ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Kannada movie 'Nagari' all set to release on 14th February, Valentaines Day. The sound of love is the concept of his film. Rangayana Raghu, Sharat Lohitashva, Biradar, Jayamma are in supporting cast.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada