»   » 'ಪುಷ್ಪಕ ವಿಮಾನ'ದ ಬಗ್ಗೆ ರಮೇಶ್ ಅರವಿಂದ್ ಉವಾಚ

'ಪುಷ್ಪಕ ವಿಮಾನ'ದ ಬಗ್ಗೆ ರಮೇಶ್ ಅರವಿಂದ್ ಉವಾಚ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರ 100ನೇ ಸಿನಿಮಾ 'ಪುಷ್ಪಕ ವಿಮಾನ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇದೀಗ ಡಬ್ಬಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಅವರು ತಿಳಿ ಹೃದಯದ ವ್ಯಕ್ತಿಯ ಪಾತ್ರ ವಹಿಸಿದ್ದು, ಅಪ್ಪ-ಮಗಳ ಬಾಂಧವ್ಯವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇವರಿಗೆ ಚೋಟು ಮಗಳಾಗಿ ಬಾಲನಟಿ ಯುವಿನಾ ಸಾಥ್ ನೀಡಿದರೆ, ಮಗಳು ಬೆಳೆದು ದೊಡ್ಡವಳಾಗುವ ಪಾತ್ರದಲ್ಲಿ ನಟಿ ರಚಿತಾ ರಾಮ್ ಅವರು ಸಾಥ್ ಕೊಟ್ಟಿದ್ದಾರೆ.['ಪುಷ್ಪಕ ವಿಮಾನ' ಸೆಟ್ ನಲ್ಲಿ ಕಣ್ಣೀರು ಹಾಕಿದ ರಚಿತಾ]


Kannada Movie 'Pushpaka Vimana' shooting completed

'ಇಡೀ ಸಿನಿಮಾದಲ್ಲಿ ಬಹುತೇಕ ದೃಶ್ಯಗಳು ಅಪ್ಪ-ಮಗಳ ನಡುವೆ ನಡೆಯುತ್ತಿದ್ದು, ಇವೆರಡು ಪಾತ್ರಗಳ ನಡುವಿನ ಸಂಬಂಧ, ಕಥೆ ಮತ್ತು ಹಾಡುಗಳು ಪ್ರೇಕ್ಷಕನಿಗೆ ಕಣ್ಣಲ್ಲಿ ನೀರು ತರಿಸೋದು ಗ್ಯಾರೆಂಟಿ. ಜೊತೆಗೆ ಹೆಣ್ಣು ಮಕ್ಕಳು ಇರುವವರಿಗೆ ಮತ್ತು ಹೆಣ್ಣು ಮಕ್ಕಳಿಗೆ ಈ ಸಿನಿಮಾ ಬಹಳ ಕಾಡುವಂತಹ ಸಿನಿಮಾ ಆಗಲಿದೆ' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ನಟ ರಮೇಶ್ ಅವರು.


Kannada Movie 'Pushpaka Vimana' shooting completed

ಇನ್ನು ನಟಿ ರಚಿತಾ ರಾಮ್ ಮತ್ತು ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರನ್ನು ರಮೇಶ್ ಅರವಿಂದ್ ಅವರು ಕೇಕ್ ಮತ್ತು ಚೆರ್ರಿ ಹಣ್ಣಿಗೆ ಹೋಲಿಸುತ್ತಾರೆ. ಈ ಸಿನಿಮಾದಲ್ಲಿ ಅವರಿಬ್ಬರ ಕಾಂಬಿನೇಷನ್ ಅದೇ ರೀತಿ ಇದೆ ಎಂದಿದ್ದಾರೆ ರಮೇಶ್ ಅವರು.


ನವ ನಿರ್ದೇಶಕ ಎಸ್ ರವೀಂದ್ರನಾಥ್ ಆಕ್ಷನ್-ಕಟ್ ಹೇಳಿರುವ ಈ ಸಿನಿಮಾದ ಆಡಿಯೋ ಬಿಡುಗಡೆ ಸದ್ಯದಲ್ಲೇ ಜರುಗಲಿದೆ.

English summary
The shooting for Kannada Movie 'Pushpaka Vimana' which features Kannada Actor Ramesh Aravind, Kannada Actress Rachita Ram, Baby actress Yuvina Parthavi in the lead role, has been completed. The movie is directed by S Ravindranath.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada