»   » ಕನ್ನಡ ಚಿತ್ರರಂಗದ ಮತ್ತೊಂದು 'ಅದ್ಭುತ' ಮಿತ್ರನ 'ರಾಗ'!

ಕನ್ನಡ ಚಿತ್ರರಂಗದ ಮತ್ತೊಂದು 'ಅದ್ಭುತ' ಮಿತ್ರನ 'ರಾಗ'!

Posted By:
Subscribe to Filmibeat Kannada

ಇಷ್ಟು ದಿನ 'ಪೋಸ್ಟರ್'ಗಳಿಂದ ನಿರೀಕ್ಷೆ ಹೆಚ್ಚಿಸಿದ್ದ 'ರಾಗ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರಲ್ಲಿ ಹೊಸ ಭರವಸೆಯನ್ನ ಹುಟ್ಟುಹಾಕಿದೆ. ನಿನ್ನೆ (ಫೆಬ್ರವರಿ 22) ಸಂಜೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ರಾಗ' ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದು, ಟ್ರೈಲರ್ ಗೆ ಅಭಿಮಾನಿಗಳಿಂದ ಬಾರಿ ಮೆಚ್ಚುಗೆ ಸಿಕ್ಕಿದೆ.[ಮಿತ್ರನ 'ರಾಗ'ಕ್ಕೆ 'ಚಕ್ರವರ್ತಿ' ಅತಿಥಿ]

ಸದ್ಯ, ಕನ್ನಡ ಚಿತ್ರರಂಗದಲ್ಲಿ ಹೊಸ ಶೈಲಿಯ ಚಿತ್ರಗಳ ಪರ್ವಕಾಲವಾಗಿದೆ ಎಂಬುದಕ್ಕೆ 'ರಾಗ' ಚಿತ್ರವೂ ತಾಜಾ ನಿದರ್ಶನ. ಅಂದ್ಹಾಗೆ, 'ರಾಗ'.....ಅಂಧರ ಕುರಿತು ತಯಾರಾಗುತ್ತಿರುವ ಪ್ರಯೋಗಾತ್ಮಕ ಚಿತ್ರ. ಮಿತ್ರ ಎಂಟರ್ ಟ್ರೈನರ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಹಾಸ್ಯ ನಟ ಮಿತ್ರ ನಿರ್ಮಾಣ ಮಾಡುತ್ತಿರುವ ವಿಭಿನ್ನ ಸಿನಿಮಾ. ಅಂಧರು ತಮ್ಮದೇ ಆದ ಲೋಕದಲ್ಲಿ ಕಟ್ಟಿಕೊಳ್ಳುವ ಕನಸಿನ ಬದುಕನ್ನ ರಾಘ ಚಿತ್ರದ ಮೂಲಕ ತೆರೆಮೇಲೆ ತರಲಾಗ್ತಿದೆಯಂತೆ.['ರಾಗ' ಟ್ರೈಲರ್ ಗೆ ದನಿ ನೀಡಿದ ಕಿಚ್ಚ ಸುದೀಪ್.!]

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ರಾಗ' ಚಿತ್ರದ ಟ್ರೈಲರ್ ಗೆ ಧ್ವನಿ ನೀಡಿದ್ದು, ಟ್ರೈಲರ್ ಮತ್ತಷ್ಟು ಆಕರ್ಷಣೆಯಾಗಿದೆ. ಈ ಚಿತ್ರಕ್ಕೆ ಪಿ.ಸಿ ಶೇಖರ್ ಆಕ್ಷನ್ ಹೇಳುತ್ತಿದ್ದಾರೆ. ಮಿತ್ರ, ಭಾಮಾ, ಅವಿನಾಶ್, ಜೈಜಗದೀಶ್, ರಮೇಶ್ ಭಟ್, ಸಿಹಿ ಕಹಿ ಚಂದ್ರು ರಂತಹ ದೊಡ್ಡ ಕಲಾವಿದರು ಅಭಿನಯಿಸುತ್ತಿದ್ದಾರೆ. ಉಳಿದಂತೆ 'ರಾಗ' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

'ರಾಗ' ಟ್ರೈಲರ್ ಇಲ್ಲಿದೆ ನೋಡಿ

English summary
Kannada Actor, Challenging Star Darshan has Released Kannada movie 'Raaga' Trailer. Actor Mitra and Bhama are in the lead role of 'Raaga' , which is directed by PC Shekar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada