For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್ ಮಂಡಳಿಯಲ್ಲಿ ಕ್ಲೀನ್ ಚಿಟ್ ಪಡೆದುಕೊಂಡ 'ರಿಕ್ತ'

  By Suneetha
  |

  ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಇನ್ನೊಂದು ವಿಭಿನ್ನ ಸಿನಿಮಾ 'ರಿಕ್ತ' ತೆರೆಗೆ ಬರಲು ಸಜ್ಜಾಗಿದೆ. ಸೆನ್ಸಾರ್ ಅಂಗಳಕ್ಕೆ ಕಾಲಿಡಲು ಕಾಯುತ್ತಿದ್ದ ತಂಡ ಇದೀಗ ಆ ಕೆಲಸವನ್ನು ಮಾಡಿ ಮುಗಿಸಿ, ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿದೆ.

  ಅಮೃತ್ ಕುಮಾರ್ ನಿರ್ದೇಶನದ ರಿಕ್ತ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಹಾರರ್ ಚಿತ್ರವೊಂದಕ್ಕೆ ಈ ಪ್ರಮಾಣ ಪತ್ರ ಸಿಕ್ಕಿರುವುದರಿಂದ ಸಹಜವಾಗೇ ಚಿತ್ರತಂಡದವರು ಸಂತಸಗೊಂಡಿದ್ದಾರೆ.['ರಿಕ್ತ' ಇದು ಸಂಚಾರಿ ವಿಜಯ್ ಬತ್ತಳಿಕೆಯಿಂದ ಹೊರಟ ಹೊಸ ಬಾಣ]

  ರಿಕ್ತ ಹಾರರ್ ಸಿನಿಮಾ, ಇದಕ್ಕೆ ಯು/ಎ ಸರ್ಟಿಫಿಕೆಟ್ ಸಿಕ್ಕಿರುವುದೇ ಅಚ್ಚರಿ. ಅದು ಸಾಧ್ಯವಾಗಿರುವುದು ಇಡೀ ಚಿತ್ರದ ಗುಣಮಟ್ಟ ಮತ್ತು ವೈಶಿಷ್ಟ್ಯಗಳಿಂದ ಎನ್ನುವುದು ಚಿತ್ರದ ನಿರ್ದೇಶಕ ಅಮೃತ್ ಕುಮಾರ್ ಅವರ ನಂಬಿಕೆ.

  ಇದು ಅಮೃತ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರದ ಟ್ರೈಲರ್ ಮತ್ತು ಪೋಸ್ಟರ್ ಗಳು ಸ್ಯಾಂಡಲ್ ವುಡ್‍ ನಲ್ಲಿ ಈಗಾಗಲೆ ಭರವಸೆ ಮೂಡಿಸಿದೆ. ಇನ್ನುಳಿದಂತೆ ಚಿತ್ರದ ಸಂಗೀತದ ಜವಾಬ್ದಾರಿ ವಹಿಸಿಕೊಂಡಿರೋದು ರಿಕ್ಕಿ ಸೋನು.[ವಿಡಿಯೋ: 'ವರ್ತಮಾನ'ದಲ್ಲಿ ಸಿಲುಕಿದ ಸಂಚಾರಿ ವಿಜಯ್]

  Kannada Movie 'Riktha' gets 'U/A' certificate

  ರಿಕ್ತ ಚಿತ್ರದ ಮೂಲಕ ಸಂಚಾರಿ ವಿಜಯ್ ಗಾಯಕರಾಗಿಯೂ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಅರುಣ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯದ ಹಾರರ್ ಟ್ರೆಂಡ್ ಗೆ ತಕ್ಕಂತೆ ರಿಕ್ತ ಸಿನಿಮಾ ತಯಾರಾಗಿದ್ದರೂ, ಅವೆಲ್ಲಕ್ಕಿಂತಲೂ ಭಿನ್ನವಾಗಿದೆ ಎಂಬುದನ್ನು ಸೆನ್ಸಾರ್ ಪ್ರಮಾಣ ಪತ್ರವೇ ಧೃಡೀಕರಿಸುತ್ತದೆ.

  ಒಟ್ಟಾರೆಯಾಗಿ ಯಾವುದೇ ಪಾತ್ರವನ್ನಾದರೂ ಆವಾಹನೆ ಮಾಡಿಕೊಂಡು ನಟಿಸುವ ಸಂಚಾರಿ ವಿಜಯ್ ಅವರ, ಈ ಚಿತ್ರದಲ್ಲಿ ದೆವ್ವದ ಪಾತ್ರ ಸೇರಿದಂತೆ ಇನ್ನೂ ಮೂರು ವಿಭಿನ್ನ ಪಾತ್ರದಲ್ಲಿ ನಟಿಸಿರುವುದು ವಿಶೇಷ.

  English summary
  Kannada Movie 'Riktha' gets 'U/A' certificate from the Censor Board. 'Riktha' features Kannada actor Sanchari Vijay, Actress Advika in the lead role. The movie is directed by Amruth Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X