»   » ವಿನಯ್ ರಾಜ್ ಜೊತೆಗೆ ಪೈಪೋಟಿಗಿಳಿದ ವಿಜಯ ರಾಘವೇಂದ್ರ

ವಿನಯ್ ರಾಜ್ ಜೊತೆಗೆ ಪೈಪೋಟಿಗಿಳಿದ ವಿಜಯ ರಾಘವೇಂದ್ರ

Posted By:
Subscribe to Filmibeat Kannada

ನಿರ್ದೇಶಕ ರಘು ಶಾಸ್ತ್ರಿ ಅವರ ಚೊಚ್ಚಲ ಸಿನಿಮಾ 'ರನ್ ಆಂಟನಿ' ರಿಲೀಸ್ ಡೇಟ್ ಫಿಕ್ಸ್ ಆಗಿದೆ. ವಿನಯ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಎರಡನೇ ಸಿನಿಮಾ 'ರನ್ ಆಂಟನಿ' ಜುಲೈ 8 ರಂದು ಅದ್ದೂರಿಯಾಗಿ ತೆರೆ ಕಾಣುತ್ತಿದೆ.

ಅಂದಹಾಗೆ ಜುಲೈ 1ಕ್ಕೆ (ನಾಳೆ) ಚಿತ್ರ ತೆರೆ ಕಾಣಬೇಕಿತ್ತು, ಆದರೆ ಅನಿವಾರ್ಯ ಕಾರಣಗಳಿಂದ ಚಿತ್ರ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹೋಗಿತ್ತು. ಮಾತ್ರವಲ್ಲದೇ ಇನ್ನೂ ಕೂಡ ಚಿತ್ರದ ಸೆನ್ಸಾರ್ ಆಗದೇ ಇರುವುದರಿಂದ ಜುಲೈ ಎರಡನೇ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡದವರು ಯೋಜನೆ ಹಾಕಿಕೊಂಡಿದ್ದಾರೆ.['ರನ್ ಆಂಟನಿ' ಬಿಡುಗಡೆ ಮುಂದಕ್ಕೆ ಹೋಯ್ತಾ.?]


Kannada Movie 'Run Antony' all set to releasing on July 8th

ಚಿತ್ರ ಬಿಡುಗಡೆ ವಿಚಾರದ ಕುರಿತಾಗಿ ಖುದ್ದಾಗಿ ನಿರ್ಮಾಪಕ ಗುರು ರಾಜ್ ಕುಮಾರ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದಾರೆ. ಸಖತ್ ಥ್ರಿಲ್ಲಿಂಗ್ ಆಗಿರೋ 'ರನ್ ಆಂಟನಿ' ನಟ ವಿನಯ್ ರಾಜ್ ಕುಮಾರ್ ಅವರಿಗೆ ಬ್ರೇಕ್ ಕೊಡೋದು ಗ್ಯಾರೆಂಟಿ ಅಂತಿವೆ ಗಾಂಧಿನಗರದ ಮೂಲಗಳು.[ವಿನಯ್ ರಾಜ್ ಕುಮಾರ್ ಥಿಯೇಟರ್ ಗೆ ಯಾವಾಗ ಓಡಿ ಬರೋದು?]


Kannada Movie 'Run Antony' all set to releasing on July 8th

ಇನ್ನು ಇದೇ ಮೊದಲ ಬಾರಿಗೆ ಇಬ್ಬರು ನಾಯಕಿಯರಾದ ಸುಶ್ಮಿತಾ ಜೋಷಿ ಮತ್ತು ನಟಿ ರುಕ್ಸಾರ್ ಅವರು ವಿನಯ್ ರಾಜ್ ಕುಮಾರ್ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ. ಜೊತೆಗೆ ಈ ಚಿತ್ರದ ಪ್ರೊಮೋಷನ್ ಕೂಡ ಬಹಳ ವಿಭಿನ್ನವಾಗಿ ಆಗಿದೆ. ಇಡೀ ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಈ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.[ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುವ 'ರನ್ ಆಂಟನಿ' ವಾಂಟೆಡ್ ಟ್ರೈಲರ್.!]


Kannada Movie 'Run Antony' all set to releasing on July 8th

ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಜುಲೈ 8 ರಂದು ವಿಜಯ ರಾಘವೇಂದ್ರ ಮತ್ತು ನಿಧಿ ಸುಬ್ಬಯ್ಯ ಅಭಿನಯದ 'ನನ್ನ ನಿನ್ನ ಪ್ರೇಮಕಥೆ' ಕೂಡ ತೆರೆ ಕಾಣುತ್ತಿದ್ದು, ವಿನಯ್ ರಾಜ್ ಕುಮಾರ್ ಅವರ ಜೊತೆ ಸ್ಪರ್ಧೆಗಿಳಿದಿದ್ದಾರೆ.


ಒಟ್ನಲ್ಲಿ ಅಭಿಮಾನಿಗಳ ಕಾಯುವಿಕೆಗೆ ಕೊನೆಗೂ ಬ್ರೇಕ್ ಬಿದ್ದಿದ್ದು, ಜುಲೈ 8 ಮುಂದಿನ ಶುಕ್ರವಾರ ಗ್ರ್ಯಾಂಡ್ ಆಗಿ 'ರನ್ ಆಂಟನಿ' ತೆರೆಗೆ ಅಪ್ಪಳಿಸುತ್ತಿದೆ.

English summary
Kannada Actor Vinay Rajkumar starrer Kannada Movie 'Run Antony' release date has been confirmed. The movie is releasing worldwide on July 8th. Actress Rukhsar, Actress Sushmitha in the lead role. The movie is directed by Raghu Shastry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada