»   » ಸೆನ್ಸಾರ್ ಪರೀಕ್ಷೆ ಎದುರಿಸಲು ತಯಾರಾದ 'ಸಂತೆಯಲ್ಲಿ ನಿಂತ ಕಬೀರ'

ಸೆನ್ಸಾರ್ ಪರೀಕ್ಷೆ ಎದುರಿಸಲು ತಯಾರಾದ 'ಸಂತೆಯಲ್ಲಿ ನಿಂತ ಕಬೀರ'

Posted By:
Subscribe to Filmibeat Kannada

ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿರುವ 'ಸಂತೆಯಲ್ಲಿ ನಿಂತ ಕಬೀರ' ಸಿನಿಮಾ ಇದೀಗ ಸೆನ್ಸಾರ್ ಪರೀಕ್ಷೆ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯದಲ್ಲೇ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ನಟಿ ಸನುಷಾ ಅವರು ಕಾಣಿಸಿಕೊಂಡಿರುವ 'ಸಂತೆಯಲ್ಲಿ ನಿಂತ ಕಬೀರ' ಸಿನಿಮಾ ಸೆನ್ಸಾರ್ ಅಂಗಳಕ್ಕೆ ಕಾಲಿಡಲಿದೆ.

'ಕಬೀರ್ ಖಡಾ ಬಝಾರ್ ಮೇ'- ಇದು ಭೀಷ್ಮ ಸಹಾನಿ ಅವರ ಹೆಸರುವಾಸಿ ನಾಟಕ. ಈ ನಾಟಕವನ್ನು ಖ್ಯಾತ ಬರಹಗಾರ-ಹಿರಿಯ ಪತ್ರಕರ್ತ ಗೋಪಾಲ ವಾಜಪೇಯಿ ಅವರು 'ಸಂತ್ಯಾಗ ನಿಂತಾನ ಕಬೀರ' ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರ ಮಾಡಿದ್ದರು.


Kannada Movie 'Santheyalli Nintha Kabira' ready for censor

ಇದೀಗ ಅದು 'ಸಂತೆಯಲ್ಲಿ ನಿಂತ ಕಬೀರ' ಎಂದು ಸಿನಿಮಾ ಆಗಿದ್ದು, ನಿರ್ದೇಶಕ ಇಂದ್ರಬಾಬು ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.


'ನೇರ, ನಿಷ್ಠ ಮತ್ತು ಸರಳತೆಗೆ ಹೆಸರಾಗಿದ್ದ ಸಂತ ಕಬೀರರ ಬದುಕಿನ ಕುರಿತಾದ ಸಿನಿಮಾ ಇದಾಗಿದ್ದು, ಮಹಾನ್ ಮಾನವತಾವಾದಿ ಕಬೀರರ ದೋಹಾಗಳನ್ನು ಕೂಡ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.[ಸಿನ್ಮಾಕ್ಕೂ ಮುನ್ನ 'ಸಂತ್ಯಾಗ ನಿಂತಾನ ಕಬೀರ' ಪುಸ್ತಕ ಬಿಡುಗಡೆ]


Kannada Movie 'Santheyalli Nintha Kabira' ready for censor

ಖ್ಯಾತ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಚಿತ್ರದ ಆಡಿಯೋ ಬಿಡುಗಡೆ ಈಗಾಗಲೇ ನೆರವೇರಿದೆ.[ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಶಿವಣ್ಣನ 'ಸಂತೆಯಲ್ಲಿ ನಿಂತ ಕಬೀರ']


ಸುಮಾರು 48 ದಿನಗಳ ಕಾಲ ಕೆ.ಆರ್.ಎಸ್ ಹಿನ್ನೀರು, ಚಿಕ್ಕಮಗಳೂರು ಮತ್ತು ಚಾಲಾಕುಡಿಯಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸುಬ್ರಮಣ್ಯ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್, ಅವಿನಾಶ್, ಅನಂತ್ ನಾಗ್, ದತ್ತಣ್ಣ, ಶರತ್ ಲೋಹಿತಾಶ್ವ ಮತ್ತು ಪ್ರಶಾಂತ್ ಸಿದ್ದಿ ಮುಂತಾದವರು ಮಿಂಚಿದ್ದಾರೆ.

English summary
Kannada Movie 'Santheyalli Nintha Kabira' ready for censor. Kannada Actor Shiva Rajkumar, Actress Sanusha Actor R.Sarathkumar in the lead role. The movie is directed by Indra Babu of 'Kabaddi' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada