For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ ತಲೆ ಎತ್ತಿದ 'ತರ್ಲೆ ವಿಲೇಜ್' ಪೊಲೀಸ್ ಠಾಣೆ

  By ಮೈಸೂರು ಪ್ರತಿನಿಧಿ
  |

  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 'ತರ್ಲೆ ವಿಲೇಜ್' ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ. ಈ ವಿಚಾರ ಕೇಳಿ ಅಚ್ಚರಿಯಾಗಿರಬಹುದಲ್ಲವೆ? ಇದು ತೆರೆಯಲು ಕಾರಣವಿದೆ. ಹಳ್ಳಿ ಎಂದ ಮೇಲೆ ಪ್ರೀತಿ, ಪ್ರೇಮ, ಗಲಾಟೆ, ಗದ್ದಲ, ನ್ಯಾಯ, ಪಂಚಾಯಿತಿ ಕಟ್ಟೆ ಎಲ್ಲಾ ಇದ್ದೇ ಇರುತ್ತದೆ.

  ಹಳ್ಳಿಯಲ್ಲಿ ಇದ್ದು, ಇದ್ಯಾವುದೂ ಬೇಡ ಎಂದ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಲೇಬೇಕು. ಹೀಗಾಗಿ ತರ್ಲೆ ವಿಲೇಜ್‍ ನಲ್ಲಿ ಒಂದು ಪೊಲೀಸ್ ಠಾಣೆ ತೆರೆಯಲಾಗಿದ್ದು ಈ ಠಾಣೆಗೆ ಎಂಥವರು ಬರ್ತಾರೆ? ಏತಕ್ಕಾಗಿ ಬರ್ತಾರೆ?, ಅನ್ನೋದೇ ಇಡೀ 'ತರ್ಲೆ ವಿಲೇಜ್' ಚಿತ್ರದ ಕಥೆ.['ತಿಥಿ'ಯೂಟ ಹಾಕಿಸಿದ ಸೆಂಚುರಿಗೌಡ್ರು ತರ್ಲೆ ಮಾಡ್ತಾವ್ರೇ ಕಣ್ರೀ.!]

  ರಾಜ್ಯ-ರಾಷ್ಟ್ರ ಪ್ರಶಸ್ತಿಯನ್ನು ಬಾಚಿಕೊಂಡ 'ತಿಥಿ' ಚಿತ್ರದ ಕಲಾವಿದರನ್ನು ಬಳಸಿಕೊಂಡು 'ತರ್ಲೆ ವಿಲೇಜ್' ಚಿತ್ರವನ್ನು ಮಾಡಲಾಗುತ್ತಿದೆ. ಇದೀಗ ಮೈಸೂರಿನಲ್ಲಿ 'ತರ್ಲೇ ವಿಲೇಜ್' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.[ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ]

  ಕೆಲವು ದಿನಗಳ ಹಿಂದೆ ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಾಲಯದಲ್ಲಿ ಚಿತ್ರದ ಮುಹೂರ್ತ ನಡೆದಿತ್ತು. ಈಗ ಚಿತ್ರೀಕರಣ ಆರಂಭವಾಗಿದೆ. ಮುಂದೆ ಓದಿ.....

  ಏನಿದು ತರ್ಲೆ ವಿಲೇಜ್.?

  ಏನಿದು ತರ್ಲೆ ವಿಲೇಜ್.?

  ಈ ಸಿನಿಮಾ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಸುತ್ತುತ್ತದೆ. ಹಳ್ಳಿಯ ಜನರ ಪ್ರೀತಿ-ಪ್ರೇಮ, ಗದ್ದಲ-ಗಲಾಟೆ, ಹಾಸ್ಯ, ನ್ಯಾಯ, ಪಂಚಾಯಿತಿ ಎಲ್ಲವನ್ನೂ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.

  ಪೊಲೀಸ್ ಠಾಣೆ ಆಯ್ತು ಖಾಸಗಿ ಶಾಲೆ

  ಪೊಲೀಸ್ ಠಾಣೆ ಆಯ್ತು ಖಾಸಗಿ ಶಾಲೆ

  ಸದ್ಯಕ್ಕೆ ವಿಜಯನಗರದ ಮೂರನೇ ಹಂತದಲ್ಲಿರುವ ಖಾಸಗಿ ಶಾಲೆ ಆವರಣದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿನ ಖಾಸಗಿ ಶಾಲೆಯ ಕೊಠಡಿಗಳೇ ಹಳ್ಳಿಯ ತರ್ಲೆ ಗಳ ಬೆಂಡೆತ್ತುವ ಪೊಲೀಸ್ ಠಾಣೆಯಾಗಿದೆ.

  ಯಜಮಾನರಾದ್ರು 'ಗಡ್ಡಪ್ಪ'

  ಯಜಮಾನರಾದ್ರು 'ಗಡ್ಡಪ್ಪ'

  'ತಿಥಿ' ಚಿತ್ರದ ಗಡ್ಡಪ್ಪ ಅವರು ಈ ಚಿತ್ರದಲ್ಲಿ ಊರಿನ ಯಜಮಾನನ ಪಾತ್ರ ವಹಿಸಲಿದ್ದಾರೆ. ಇನ್ನು ತಮ್ಮಣ್ಣ ನವರು ದನಗಳ ವ್ಯಾಪಾರ ಮಾಡುವ ದಲ್ಲಾಳಿಯ ಪಾತ್ರ ವಹಿಸಲಿದ್ದಾರೆ.

  ಮೂರ್ನಾಲ್ಕು ತಿಂಗಳಲ್ಲಿ 'ತರ್ಲೆ ವಿಲೇಜ್' ರೆಡಿಯಾಗುತ್ತೆ

  ಮೂರ್ನಾಲ್ಕು ತಿಂಗಳಲ್ಲಿ 'ತರ್ಲೆ ವಿಲೇಜ್' ರೆಡಿಯಾಗುತ್ತೆ

  'ತರ್ಲೆ ವಿಲೇಜ್' ಚಿತ್ರವನ್ನು ಗ್ರಾಮೀಣ ಸೊಗಡಿನಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಇನ್ನು 20 ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ಕಲಾವಿದರ ತವರೂರಾದ ಪಾಂಡವಪುರ ತಾಲೂಕಿನ ನೊದೆಕೊಪ್ಪಲಿನಲ್ಲಿ ಈಗಾಗಲೇ ಸುಮಾರು 30 ದಿನಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನು 2-3 ತಿಂಗಳಲ್ಲಿ ಚಿತ್ರ ತೆರೆ ಕಾಣಲಿದೆ.

  ತಾರಾಗಣ

  ತಾರಾಗಣ

  ತಿಥಿ' ಚಿತ್ರದ ಮೂಲಕ ಖ್ಯಾತಿ ಪಡೆದ ಸೆಂಚುರಿಗೌಡ, ಗಡ್ಡಪ್ಪ, ತಮ್ಮಣ್ಣ ಹಾಗೂ ಅಭಿ ಸೇರಿದಂತೆ ಒಂದಷ್ಟು ಹೊಸಬರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  Kannada Movie 'Tarle Village' shooting progress in Mysuru. Actor Thammegowda S, Actor Channegowda, Actor Abhishek H N in the lead role. The movie is directed by KM Raghu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X