»   » ಈ ಮೊಬೈಲ್ ನಂಬರ್ 7411190429 ಯಾರದು?

ಈ ಮೊಬೈಲ್ ನಂಬರ್ 7411190429 ಯಾರದು?

Posted By:
Subscribe to Filmibeat Kannada

ಹಿಂದಿನ ಕಾಲದಲ್ಲಿ ಚಿತ್ರವೊಂದರ ಶೀರ್ಷಿಕೆ ಇಡೀ ಸಿನಿಮಾದ ತಾತ್ಪರ್ಯವನ್ನು ಹೇಳಿಬಿಡುತ್ತಿತ್ತು ಆದರೆ ಈಗ ಬರುತ್ತಿರುವ ಚಿತ್ರಗಳಿಗೆ ಶೀರ್ಷಿಕೆಯನ್ನು ಹುಡುಕುವುದೇ ಚಿತ್ರ ನಿರ್ಮಿಸುವವರಿಗೆ ದೊಡ್ಡ ಸವಾಲಾಗಿದೆ. ಕೆಲವೊಮ್ಮೆ ತುಂಬಾ ಕುತೂಹಲಕಾರಿ ಶೀರ್ಷಿಕೆಗಳು ಸಿಕ್ಕಿಬಿಡುತ್ತದೆ. ಕನ್ನಡ ಚಿತ್ರರಂಗದಲ್ಲೇ ಮೊದಲೆಂಬಂತೆ ಮೊಬೈಲ್ ಸಂಖ್ಯೆಯೊಂದರ ಹೆಸರಿನಲ್ಲಿ ಚಲನಚಿತ್ರ ನಿರ್ಮಾಣವಾಗುತ್ತಿದೆ.

ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ಕೈತುತ್ತು, ಲವ್ವೆಲ್ಲ ಸುಳ್ಳಲ್ಲ ಚಿತ್ರಗಳನ್ನು ನಿರ್ದೇಶಿಸದ್ದ ರಾಜೀವ್ ಕೃಷ್ಣ ಗಾಂಧಿ ನಿರ್ದೇಶನದ ಈ ಚಿತ್ರದ ಹೆಸರು '7411190429' ಈ ಚಿತ್ರವನ್ನು ನಾಗರಾಜ್ ಗಿಡ್ಡೋಬನಹಳ್ಳಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಡಿಸೆಂಬರ್ 10 ರಿಂದ ಆರಂಭವಾಗಲಿದೆ.

Kannada movie titled as 7411190429

ಅದೆಲ್ಲಾ ಸರಿ ಈ ಮೊಬೈಲ್ ಸಂಖ್ಯೆ ಯಾರದು ಎಂದು ನಾವು ಟ್ರೈ ಮಾಡಿದಾಗ ಅದು ಕನೆಕ್ಟ್ ಆಗಿದ್ದು ಚಿತ್ರದ ನಿರ್ದೇಶಕ ರಾಜೀವ್ ಕೃಷ್ಣ ಅವರಿಗೆ. ಲೈನಿಗೆ ಬಂದ ಅವರು ಶೂಟಿಂಗ್ ಆರಂಭವಾದ ಮೇಲೆ ಈ ನಂಬರ್ ಗೆ ಕರೆ ಮಾಡಿದರೆ ಆಟೋಮ್ಯಾಟಿಕ್ ಆಗಿ ಚಿತ್ರದ ಬಗೆಗೆ ಅಪ್ ಡೇಟ್ ಕೊಡುತ್ತದೆ ಎಂದು ವಿವರ ನೀಡಿದರು. ಏನೇ ಆಗಲಿ ನಿರ್ದೇಶಕರ ಜಾಣ್ಮೆಗೆ ತಲೆದೂಗಲೇಬೇಕು.

ಚಿತ್ರ ನಿರ್ದೇಶಕನಾಗಬೇಕೆಂಬ ಕನಸು ಹೊತ್ತ ಯುವಕನೊಬ್ಬ ಗಾಂಧಿನಗರಕ್ಕೆ ಅವಕಾಶ ಹುಡುಕಿಕೊಂಡು ಬರುತ್ತಾನೆ. ಅಕಸ್ಮಾತ್ ಆತನ ಕೈಗೆ ಮೊಬೈಲೊಂದು ಸಿಗುತ್ತದೆ. ಅದರ ಸಂಖ್ಯೆ: 7411190429 ನಂತರ ಆ ಯುವಕ ಕೊಲೆಯಾಗುತ್ತಾನೆ. ಸಾಯುವಾಗ ಆತ ಹಾಳೆಯೊಂದರಲ್ಲಿ ಆ ಮೊಬೈಲ್ ನಂಬರನ್ನು ಬರೆದಿರುತ್ತಾನೆ. ಕೊಲೆಯ ರಹಸ್ಯ ಆ ಸಂಖ್ಯೆಯಲ್ಲಿ ಅಡಗಿರುತ್ತದೆ.

ಚಿತ್ರಕ್ಕೆ ಕಿಶೋರ್ ಸಂಗೀತ, ಪೌಲ್ ರಾಜ್ ಛಾಯಾಗ್ರಹಣ, ಕೆ.ಬಾಲು, ಸಾಹಸ ಆರ್.ಡಿ. ರವಿ ಸಂಕಲನವಿದೆ. ಗೋಪಿಕರ್, ಶೃತಿ ಹೀರಾ, ವರ್ಷಿತ ಕಿಲ್ಲರ್ ವೆಂಕಟೇಶ್, ಹೊನ್ನವಳ್ಳಿಕೃಷ್ಣ, ಬ್ಯಾಂಕ್ ಜನಾರ್ಧನ್, ಶಶಿಕಲ ತಾರಾಗಣವಿದೆ. (ಫಿಲ್ಮಿಬೀಟ್ ಕನ್ನಡ)

English summary
At first time Sandalwood movie titled as 7411190429, directed by Rajeevkrishna Gandhi. It is a suspense thriller.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada